ಮಹಾಲಯ ಅಮಾವಾಸ್ಯೆಯಂದು 4 ಗ್ರಹಗಳ ಸಂಯೋಗ: ಈ 5 ರಾಶಿಯವರು ಇನ್ಮುಂದೆ ಮುಟ್ಟಿದೆಲ್ಲಾ ಚಿನ್ನ!

ಈ ದಿನ ಚಂದ್ರನು ಸಿಂಹ ರಾಶಿಯ ನಂತರ ಕನ್ಯಾರಾಶಿಗೆ ಸಾಗುತ್ತಾನೆ. ಬಳಿಕ ಮಹಾಲಯ ದಿನದಂದು ಕನ್ಯಾರಾಶಿಯಲ್ಲಿ 4 ಗ್ರಹಗಳ ಸಂಯೋಗವಾಗುತ್ತದೆ.

Written by - Bhavishya Shetty | Last Updated : Sep 25, 2022, 05:45 PM IST
    • ಕನ್ಯಾರಾಶಿಯಲ್ಲಿ 4 ಗ್ರಹಗಳ ಸಂಯೋಗವಾಗುತ್ತದೆ
    • ಪರಿಣಾಮ ಐದು ರಾಶಿಯವರ ಮೇಲೆ ಇನ್ಮುಂದೆ ಅದೃಷ್ಟದ ಸುರಿಮಳೆ
    • ಕನ್ಯಾ ರಾಶಿಯಲ್ಲಿ ಸೂರ್ಯ, ಚಂದ್ರ, ಬುಧ ಮತ್ತು ಶುಕ್ರ ಸಂಯೋಜನೆ
ಮಹಾಲಯ ಅಮಾವಾಸ್ಯೆಯಂದು 4 ಗ್ರಹಗಳ ಸಂಯೋಗ: ಈ 5 ರಾಶಿಯವರು ಇನ್ಮುಂದೆ ಮುಟ್ಟಿದೆಲ್ಲಾ ಚಿನ್ನ!  title=
Mahalaya Amavasya

ಇಂದು ಮಹಾಲಯ ಅಮವಾಸ್ಯೆ. ಈ ಶುಭಯೋಗದಂದು ನಾಲ್ಕು ಗ್ರಹಗಳು ಸಂಯೋಗಗೊಂಡಿದ್ದು, ಇದರ ಪರಿಣಾಮ ಐದು ರಾಶಿಯವರ ಮೇಲೆ ಇನ್ಮುಂದೆ ಅದೃಷ್ಟದ ಸುರಿಮಳೆಯಾಗಲಿದೆ.

ಈ ದಿನ ಚಂದ್ರನು ಸಿಂಹ ರಾಶಿಯ ನಂತರ ಕನ್ಯಾರಾಶಿಗೆ ಸಾಗುತ್ತಾನೆ. ಬಳಿಕ ಮಹಾಲಯ ದಿನದಂದು ಕನ್ಯಾರಾಶಿಯಲ್ಲಿ 4 ಗ್ರಹಗಳ ಸಂಯೋಗವಾಗುತ್ತದೆ. ಒಂದೇ ರಾಶಿಯಲ್ಲಿ ಅಂದರೆ ಕನ್ಯಾ ರಾಶಿಯಲ್ಲಿ ಸೂರ್ಯ, ಚಂದ್ರ, ಬುಧ ಮತ್ತು ಶುಕ್ರ ಸಂಯೋಜನೆಯಾಗಿದೆ. ಹೀಗಾಗಿ ಈ ಮಹಾಲಯ ಅಮವಾಸ್ಯೆಯು 5 ರಾಶಿಚಕ್ರಗಳ ಮೇಲೆ ಮಂಗಳಕರ ಪ್ರಭಾವವನ್ನು ಬೀರಿದೆ. 

ಇದನ್ನೂ ಓದಿ:Samudrik Shastra: ಈ ರೀತಿ ಹಣೆಯಿರುವ ಹುಡುಗಿಯರು ಗಂಡನಿಗೆ ಅದೃಷ್ಟ ದೇವತೆಯಂತೆ.!

ಮೇಷ ರಾಶಿಯವರ ಮೇಲೆ ಈ ಬಾರಿ ಬಹಳಷ್ಟು ಪ್ರಯೋಜನ ಪಡೆಯಲಿದ್ದೀರಿ. ಮಹಾಲಯದಲ್ಲಿ 4 ಶುಭ ಗ್ರಹಗಳು ಕಾಕತಾಳೀಯವಾಗಿದ್ದು, ಈ ಯೋಗವು ನಿಮ್ಮ ವಿರೋಧಿಗಳಿಂದ ನಿಮ್ಮನ್ನು ಕಾಪಾಡುವುದಲ್ಲದೆ, ಜಯ ನೀಡುವಂತೆ ಮಾಡುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಎಂತಹದ್ದೇ ಸವಾಲುಗಳು ಬಂದರೂ ಅದನ್ನು ನಿವಾರಣೆ ಮಾಡಲು ಸಾಧ್ಯವಾಗುತ್ತದೆ. ಆರೋಗ್ಯದಲ್ಲೂ ಸುಧಾರಣೆ ಕಾಣಲಿದ್ದಾರೆ. ಪ್ರೀತಿಯಲ್ಲಿರುವವರು ಈ ಸಂದರ್ಭದಲ್ಲಿ ಧನಾತ್ಮಕ ಅನುಭವ ಪಡೆಯಲಿದ್ದೀರಿ.

ವೃಷಭ ರಾಶಿಯ ಮೇಲೂ ಸಕಾರಾತ್ಮಕ ಪ್ರಭಾವ ಬೀರಿರುವ ಈ ಸಂಯೋಗ ಆತ್ಮವಿಶ್ವಾಸವನ್ನು ಹೆಚ್ಚು ಮಾಡಲಿದೆ. ಅಷ್ಟೇ ಅಲ್ಲದೆ, ಸಾಮಾಜಿಕ ಮಟ್ಟದಲ್ಲಿ ಖ್ಯಾತಿಯನ್ನು ತರುವ ಸಾಧ್ಯತೆಯಿದೆ.  ಪ್ರೇಮ ಜೀವನದಲ್ಲಿ ಸಾಮರಸ್ಯವು ಕಂಡುಬರಲಿದೆ.

ಇನ್ನು ಸಿಂಹ ರಾಶಿಯವರಿಗೆ ಬಹಳ ಮಂಗಳಕರವಾಗಿರಲಿದೆ ಈ ಮಹಾಲಯ ಅಮಾವಾಸ್ಯೆ. ಪೋಷಕರ ಸಹಕಾರದಿಂದ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತೊಡೆದುಹಾಕಲಿದ್ದೀರಿ.  ಪೂರ್ವಜರ ಆಶೀರ್ವಾದವೂ ನಿಮ್ಮ ಮೇಲಿರಲಿದೆ. ಮಾತನಾಡುವ ಕಲೆಯಿಂದ ನೀವು ಜನರ ಮನಸ್ಸನ್ನು ಗೆಲ್ಲಲಿದ್ದೀರಿ.  

ಧನು ರಾಶಿಯವರ ಮೇಲೆ ಪೂರ್ವಜರ ಮತ್ತು ತಾಯಿಯ ಆಶೀರ್ವಾದ ಇರುವುದರಿಂದ ಮಂಗಳಕರವಾಗಿದೆ. ಉದ್ಯೋಗ ಇಲ್ಲದವರಿಗೆ ಕೆಲಸವೂ ಸಿಗುತ್ತದೆ ಅಥವಾ ಅಭಿವೃದ್ಧಿಯೂ ಕಾಣುವ ಸಾಧ್ಯತೆ ಹೆಚ್ಚಾಗಿದೆ. ಜೀವನದಲ್ಲಿ ಶಾಂತಿ ನೆಲೆಗೊಳ್ಳಲಿದೆ. ಕುಟುಂಬದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಹಣಕಾಸಿನ ವಿಚಾರದಲ್ಲಿಯೂ ಅಭಿವೃದ್ದಿ ಕಾಣಲಿದ್ದೀರಿ.  

ಇದನ್ನೂ ಓದಿ: Astro Tips : ನಿಮ್ಮ ಅದೃಷ್ಟ ಬದಲಾಯಿಸುತ್ತದೆ ಈ ಹೂವು, ಹೀಗೆ ಬಳಸಿ; ಬಡತನ ತೊಲಗಿ ಧನ ಪ್ರಾಪ್ತಿಯಾಗುತ್ತದೆ

ಮೀನ ರಾಶಿಯ ಜನರ ವೈವಾಹಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗಲಿದೆ. ಮಾಧ್ಯಮ, ರಾಜಕೀಯ ಕ್ಷೇತ್ರದಲ್ಲಿ ಇರುವವರು ಸಾಧನೆ ಮಾಡುವ ಸಾಧ್ಯತೆ ಇದೆ. ಮಾನಸಿಕವಾಗಿಯೂ ಉತ್ತಮ ಬದಲಾವಣೆಗಳನ್ನು ಕಾಣುವಿರಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News