ವರ್ಷಾಂತ್ಯದಲ್ಲಿ ಮೂರು ಅಪರೂಪದ ರಾಜಯೋಗಗಳ ರಚನೆ, ಈ ಜನರ ಸ್ಥಾನಮಾನ-ಪ್ರತಿಷ್ಠೆಯ ಜೊತೆಗೆ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಅಪಾರ ಹೆಚ್ಚಳ!

Year End Horoscope 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವರ್ಷಾಂತ್ಯದಲ್ಲಿ ಗೋಚರ ಜಾತಕದಲ್ಲಿ ಮೂರು ಅಪರೂಪದ ರಾಜಯೋಗಗಳು ರಚನೆಗೊಳ್ಳುತ್ತಿದ್ದು, ಅವು ಮೇಷ ಸೇರಿದಂತೆ ಹಲವು ರಾಶಿಗಳ ಭಾಗ್ಯವನ್ನೇ ಬದಲಿಸಲಿವೆ.  ಈ ರಾಶಿಗಳ ಜನರಿಗೆ ಜೀವನದಲ್ಲಿ ಅಪಾರ ಯಶಸ್ಸು ಹಾಗೂ ಧನ-ಸಂಪತ್ತು ಪ್ರಾಪ್ತಿಯಾಗಲಿದೆ. (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿಗಳನ್ನು ಪರಿವರ್ತಿಸುವ ಮೂಲಕ ಶುಭ-ಅಶುಭ ಯೋಗಗಳನ್ನು ರೂಪಿಸುತ್ತವೆ. ಹೀಗಿರುವಾಗ ಕೆಲ ರಾಶಿಗಳ ಗೋಚರ ಜಾತಕದಲ್ಲಿ ಅಪರೂಪದ ರಾಜಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದ ಕೆಲ ರಾಶಿಗಳ ಭಾಗ್ಯದಲ್ಲಿ ಸೂರ್ಯನಂತಹ ಹೊಳಪು ಕಂಡುಬರಲಿದೆ. ವೈದಿಕ ಪಂಡಿತರ ಪ್ರಕಾರ ನವೆಂಬರ್ 16, 2023 ರಂದು ಮಂಗಳ ತನ್ನ ಸ್ವರಾಶಿಯಾಗಿರುವ ವೃಶ್ಚಿಕ ರಾಶಿಗೆ ಪ್ರವೇಶಿಸಿದ್ದಾನೆ ಇದರಿಂದ ರುಚಕ ರಾಜಯೋಗ ರೂಪುಗೊಂಡಿದೆ. ಇದರ ಜೊತೆಗೆ ಶನಿ ತನ್ನ ಮೂಲ ತ್ರಿಕೋನ ರಾಶಿ ಕುಂಭದಲ್ಲಿ ವಿರಾಜಮಾನನಾಗಿರುವ ಕಾರಣ ಶಶ ರಾಜಯೋಗ ರೂಪಿಸಿದ್ದಾನೆ. ಈ ರಾಜಯೋಗ ಮೂವತ್ತು ವರ್ಷಗಳ ಸುದೀರ್ಘ ಅವಧಿಯ ಬಳಿಕ ರೂಪುಗೊಂಡಿದೆ. ಇದಲ್ಲದೆ ಇನ್ನೂ ಕೆಲವೇ ದಿನಗಳಲ್ಲಿ ಬುಧನ ಧನು ರಾಶಿ ಗೋಚರದಿಂದ ಮಹಾಧನ ರಾಜಯೋಗ ಕೂಡ ರೂಪುಗೊಳ್ಳುತ್ತಿದೆ. ಹೀಗಿರುವಾಗ ವರ್ಷಾಂತ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ರಾಜಯೋಗದಿಂದ ಕೆಲ ರಾಶಿಗಳ ಜಾತಡವವರ ಜೀವನದಲ್ಲಿ ಖುಷಿಗಳ ಆಗಮನವಾಗಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಅವರ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದ್ದು, ಅವರಿಗೆ ಅಪಾರ ಧನಸಂಪತ್ತು ಪ್ರಾಪ್ತಿಯಾಗಲಿದೆ. ಯಾವ ರಾಶಿಗಳಿಗೆ ಲಾಭ ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ, (Spiritual News In Kannada)

 

ಇದನ್ನೂ ಓದಿ-ನಾಲ್ಕು ದಿನಗಳ ಬಳಿಕ ಪವರ್ಫುಲ್ 'ಮಹಾಧನಯೋಗ' ರಚನೆ, ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಭಾರಿ ಕನಕವೃಷ್ಟಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ರುಚಕ ಹಾಗೂ ಶಶ ರಾಜಯೋಗಗಳು ಪಂಚ ಮಹಾಪುರುಷ ರಾಜಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಈದಲ್ಲದ ಭದ್ರಯೋಗ, ಮಾಲವ್ಯ ಯೋಗ ಹಾಗೂ ಹಮಸಾ ಯೋಗಗಳು ಕೂಡ ಇವುಗಳಲ್ಲಿ ಶಾಮೀಲಾಗಿವೆ. ಈ ರಾಜಯೋಗಗಳ ನಿರ್ಮಾಣದಿಂದ ವ್ಯಕ್ತಿಗೆ ಸಾಕಷ್ಟು ಪ್ರಸಿದ್ಧಿ, ಸೌಭಾಗ್ಯ ಜೀವನ ಶಕ್ತಿಯ ಜೊತೆಗೆ ಧನಲಾಭ ಪ್ರಾಪ್ತಿಯಾಗುತ್ತವೆ, ಇದಲ್ಲದೆ ವೃತ್ತಿ ಜೀವನದಲ್ಲಿ ಉನ್ನತಿ ಕೂಡ ಪ್ರಾಪ್ತಿಯಾಗುತ್ತದೆ. ವರ್ಷಾಂತ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ರಾಜಯೋಗಗಳಿಂದ ಲಾಭ ಪಡೆದುಕೊಳ್ಳುವ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 

2 /5

ಮೇಷ ರಾಶಿ: ಈ ಮೂರು ರಾಜಯೋಗಗಳು ಮೇಷ ರಾಶಿಯ ಜಾತಕದವರಿಗೆ ತುಂಬಾ ವಿಶೇಷವಾಗಿರಲಿವೆ. ವ್ಯಾಪಾರದಲ್ಲಿ ಅಪಾರ ಯಶಸ್ಸು ಹಾಗೂ ಧನಲಾಭ ಉಂಟಾಗಲಿದೆ. ಬಿಸ್ನೆಸ್ ನಲ್ಲಿ ನೀವು ಮಾಡಿರುವ ಹೂಡಿಕೆ ನಿಮ್ಮತ್ತ ಮರಳಲಿದ್ದು, ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ನಿಮ್ಮ ರಾಶ್ಯಾಧಿಪ ಮಂಗಳನ ಶುಭ ದೃಷ್ಟಿ ನಿಮ್ಮ ಮೇಲಿರುವ ಕಾರಣ ನಿಮಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಸಮಾಜದಲ್ಲಿ ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಹೀಗಿರುವಾಗ ಈ ಜನರಿಗೆ ಅಪಾರ ಧನಸಂಪತ್ತು ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳ ಪಾಲಿಗೂ ಕೂಡ ಈ ಯೋಗಗಳು ತುಂಬಾ ಲಾಭದಾಯಕ ಸಿದ್ಧ ಸಾಬೀತಾಗಲಿವೆ. ಪರಿಶ್ರಮ ಪಟ್ಟರೆ ಯಶಸ್ಸು ನಿಶ್ಚಿತವಾಗಿ ನಿಮ್ಮ ಪಾದಕ್ಕೆ ಮುತ್ತಿಕ್ಕಲಿದೆ. ಭಾಗ್ಯದ ಸಂಪೂರ್ಣ ಬೆಂಬಲ ನಿಮಗೆ ದೊರೆಯಲಿದ್ದು, ನೌಕರಿಯಲ್ಲಿ ಹೊಸ ಅವಕಾಶಗಳು ನಿಮಗೆ ಪ್ರಾಪ್ತಿಯಾಗಲಿವೆ. ನೀವು ನಿಮ್ಮ ಬುದ್ಧಿಯ ಬಲದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ. 

3 /5

ವೃಶ್ಚಿಕ ರಾಶಿ: ವರ್ಷಾಂತ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಮೂರೂ ರಾಜಯೋಗಗಳು ನಿಮಗೆ ಸಾಕಷ್ಟು ಲಾಭವನ್ನು ತಂದುಕೊಡಲಿವೆ. ಗ್ರಹಗಳ ರಾಜ ಸೂರ್ಯ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಮಂಗಳ ಹಾಗೂ ಬುಧನ ಜೊತೆಗೆ ವಿರಾಜಮಾನನಾಗಿದ್ದಾನೆ. ಇದರಿಂದ ನೀವು ಕಾರ್ಯಕ್ಷೇತ್ರದಲ್ಲಿ ದೊಡ್ಡ ದೊಡ್ಡ ಸವಾಲುಗಳನ್ನು ಸ್ವೀಕರಿಸುವಿರಿ. ನಿಮ್ಮ ಆತ್ಮವಿಶ್ವಾಸ ಹಾಗೂ ಸಾಹಸದಿಂದ ದೊಡ್ಡ ದೊಡ್ಡ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ಇದಲ್ಲದೆ ರುಚಕ ರಾಜಯೋಗ ನಿರ್ಮಾಣದಿಂದ ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗಲಿದೆ. ರಾಜಕೀಯ ಕ್ಷೇತ್ರದಲ್ಲಿ ಅಪಾರ ಯಶಸ್ಸು ಸಿಗುವ ನಿರೀಕ್ಷೆ ಇದೆ. ನಿಮ್ಮಲ್ಲಿ ಲೀಡರ್ಶಿಪ್ ಗುಣ ಹೆಚ್ಚಾಗಲಿದೆ. ಇದರಿಂದ ನಿಮಗೆ ದೊಡ್ಡ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ನಲ್ಲಿಯೋ ಕೂಡ ಅಪಾರ ಯಶಸ್ಸು ಮತ್ತು ಧನಲಾಭ ಪ್ರಾಪ್ತಿಯಾಗಲಿದೆ. 

4 /5

ಕುಂಭ ರಾಶಿ: ಕುಂಭ ರಾಶಿಯ ಜಾತಕದವರ ಪಾಲಿಗೂ ಕೂಡ ಈ ಮೂರು ರಾಜಯೋಗಗಳು ವರದಾನ ಸಾಬೀತಾಗಲಿವೆ. ನಿಮ್ಮ ವ್ಯಕ್ತಿತ್ವ, ಸ್ವಭಾವ ಹಾಗೂ ಕಾರ್ಯಶೈಲಿಯಲ್ಲಿ ಪರಿವರ್ತನೆಯನ್ನು ನೀವು ಕಾಣಬಹುದು. ನಿಮಗೆ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮಗೆ ಲಾಭ ಸಿಗಲಿದೆ. ಮಹಾಧನ ರಾಜಯೋಗ ನಿರ್ಮಾಣದಿಂದ ಬಿಸ್ನೆಸ್, ವ್ಯವಸಾಯ ಕೂಡ ವೃದ್ಧಿಯಾಗಲಿದೆ. ಹೊಸ ವ್ಯಾಪಾರ ಆರಂಭಿಸಲು ಬಯಸುತ್ತಿದ್ದರೆ, ಈ ಅವಧಿ ನಿಮಗೆ ಉತ್ತಮ ಸಾಬೀತಾಗಲಿದೆ. ಪಾರ್ಟ್ನರ್ ಶಿಪ್ ನಲ್ಲಿ ಆರಂಭಿಸಿದ ಕೆಲಸ ಕೂಡ ಸಾಕಷ್ಟು ಲಾಭವನ್ನು ತಂದುಕೊಡಲಿದೆ. ನಿಮ್ಮ ಎಲ್ಲ ಆಸೆ ಆಕಾಂಕ್ಷೆಗಳು ಈಡೇರಲಿವೆ. ಮಾನಸಿಕ ಶಾಂತಿ ಸಿಗಲಿದೆ. ವಾಹನ, ಸಂಪತ್ತು, ಮನೆ ಇತ್ಯಾದಿಗಳನ್ನು ಖರೀದಿಸುವ ನಿಮ್ಮ ಆಸೆ ಈಡೇರಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾವನೆ ಬರುವ ಸಾಧ್ಯತೆ ಇದೆ. ವೈವಾಹಿಕ ಜೀವನ ಸುಖಮಯವಾಗಲಿದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)