Astro Tips: ಈ ದೇವರ ಜೊತೆ ಲಕ್ಷ್ಮೀಮಾತೆಯನ್ನು ಪೂಜಿಸಿದರೆ ಹೋದಲೆಲ್ಲಾ ಯಶಸ್ಸು- ಧನಸಂಪತ್ತು ಪ್ರಾಪ್ತಿ ಖಚಿತ

Goddess Lakshmi Blessings: ಲಕ್ಷ್ಮಿ ದೇವಿಯ ಪೂಜೆ ಸಂಪತ್ತನ್ನು ಕರುಣಿಸುವಂತೆ ಮಾಡಲು ಅತ್ಯುತ್ತಮ ಮಾರ್ಗವೆಂದು ಪರಿಗಣಿಸಲಾಗಿದೆ. ಲಕ್ಷ್ಮಿಯನ್ನು ಆರಾಧಿಸುವ ಅನುಗ್ರಹದಿಂದ, ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ತಾಯಿಯ ಸಕಾರಾತ್ಮಕ ದೃಷ್ಟಿ ಯಾರ ಮೇಲೆ ಬೀಳುತ್ತದೆಯೋ, ಅಂತಹವರಿಗೆ ಸಕಲ ನೆಮ್ಮದಿ, ಐಶ್ವರ್ಯ ಯಶಸ್ಸು ಖಂಡಿತವಾಗಿಯೂ ಲಭಿಸುತ್ತದೆ.

1 /10

ಲಕ್ಷ್ಮಿ ದೇವಿಯ ಪೂಜೆ ಸಂಪತ್ತನ್ನು ಕರುಣಿಸುವಂತೆ ಮಾಡಲು ಅತ್ಯುತ್ತಮ ಮಾರ್ಗವೆಂದು ಪರಿಗಣಿಸಲಾಗಿದೆ. ಲಕ್ಷ್ಮಿಯನ್ನು ಆರಾಧಿಸುವ ಅನುಗ್ರಹದಿಂದ, ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ತಾಯಿಯ ಸಕಾರಾತ್ಮಕ ದೃಷ್ಟಿ ಯಾರ ಮೇಲೆ ಬೀಳುತ್ತದೆಯೋ, ಅಂತಹವರಿಗೆ ಸಕಲ ನೆಮ್ಮದಿ, ಐಶ್ವರ್ಯ ಯಶಸ್ಸು ಖಂಡಿತವಾಗಿಯೂ ಲಭಿಸುತ್ತದೆ.

2 /10

ದೀಪಾವಳಿ ಮತ್ತು ಶರದ್ ಪೂರ್ಣಿಮೆಯ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಮಾಡುವ ಪೂಜೆಯಿಂದ ಅಪಾರ ಫಲ ಸಿಗುತ್ತದೆ.

3 /10

ಅಶೋಕ ಎಲೆಯ ಮೇಲೆ ರೋಲಿ ಅಥವಾ ಅರಿಶಿನದಿಂದ ‘ಶ್ರೀ’ ಎಂದು ಬರೆದು ಕಮಲಗಟ್ಟದ ಕಾಳುಗಳ ಜೊತೆ ಅದನ್ನು ಮನೆಯ ಮುಖ್ಯ ಬಾಗಿಲಿನ ಬಳಿ ಇಡಿ. ಇದರಿಂದ ಸಂತೃಪ್ತಳಾಗುವ ಲಕ್ಷ್ಮೀ ಮನೆಗೆ ಆಗಮಿಸುತ್ತಾಳೆ.

4 /10

ಬಿಳಿ ಬಣ್ಣವು ಲಕ್ಷ್ಮಿ ದೇವಿಗೆ ಪ್ರಿಯವಾದ ಬಣ್ಣವಾಗಿದೆ. ನೀವು ತಾಯಿಗೆ ನೈವೇದ್ಯ ಅರ್ಪಿಸುವುದಾದರೆ ಹಾಲು ಅಥವಾ ಬಿಳಿ ತಿಂಡಿಗಳನ್ನು ಅರ್ಪಿಸಿ. ಅದನ್ನು ಪ್ರಸಾದವಾಗಿ ಸ್ವೀಕರಿಸಿ. ಹೀಗೆ ಮಾಡಿದರೆ ತಾಯಿ ಸಂಪತ್ತನ್ನು ಕರುಣಿತ್ತಾಳೆ.

5 /10

ನರಸಿಂಹ ದೇವರೊಂದಿಗೆ ಲಕ್ಷ್ಮಿಯನ್ನು ಪೂಜಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಹೀಗೆ ಮಾಡಿದರೆ ಯಾರ ಅದೃಷ್ಟದಲ್ಲಿ ಲಕ್ಷ್ಮಿಯ ಆಗಮನ ಬರೆದಿಲ್ಲವೋ, ಅಂತಹವರ ಮನೆಯ ಕದ ತಟ್ಟುತ್ತಾಳೆ ಧನ ಮಾತೆ.

6 /10

ದಕ್ಷಿಣಾವರ್ತಿ ಶಂಖದಲ್ಲಿ ಸ್ವಲ್ಪ ಅಕ್ಕಿಯನ್ನು ಹಾಕಿ ಮತ್ತು ದೀಪಾವಳಿಯ ದಿನದಂದು ಪೂಜೆಯ ಸಮಯದಲ್ಲಿ ಅದನ್ನು ಪೂಜಿಸಿ. ಗೋಮತಿ ಚಕ್ರ ಮತ್ತು ಏಳು ನಾಣ್ಯಗಳನ್ನು ತೆಗೆದುಕೊಂಡು ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಶಂಖದೊಂದಿಗೆ ಇರಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿಯ ವಾಸಸ್ಥಾನ ನಿಮ್ಮ ಮನೆಯಲ್ಲಿ ಸದಾ ಇರುತ್ತದೆ.

7 /10

ಲಕ್ಷ್ಮಿ ದೇವಿಗೆ ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಆಭರಣಗಳನ್ನು ಅರ್ಪಿಸುವುದು ಉತ್ತಮ. ಹಾಗೆಯೇ ಮಾವು ಮತ್ತು ಪಂಚಾಮೃತದಿಂದ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸುವುದು ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತದೆ. ಇದನ್ನು ದೀಪಾವಳಿ ಮತ್ತು ಶರದ್ ಪೂರ್ಣಿಮೆಯ ದಿನದಂದು ಮಾಡಬೇಕು.

8 /10

ಶರದ್ ಪೂರ್ಣಿಮೆಯ ದಿನದಂದು ಮಾತೆ ಲಕ್ಷ್ಮಿ, ಕುಬೇರ ಮತ್ತು ಶ್ರೀ ಹರಿಯನ್ನು ಪೂಜಿಸಿ. ಬಳಿಕ ದೇವರಿಗೆ ಪಾಯಸವನ್ನು ಅರ್ಪಿಸಿ. ಈ ಪೂಜೆಯನ್ನು ಚಂದ್ರದೇವನ ಸನ್ನಿಧಿಯಲ್ಲಿ ಮಾಡಬೇಕು. ಹೀಗೆ ಮಾಡಿದರೆ ಲಕ್ಷ್ಮಿ ದೇವಿಯ ಆಶೀರ್ವಾದವು ನಿಮ್ಮ ಮೇಲೆ ಉಳಿಯುತ್ತದೆ.

9 /10

ದೀಪಾವಳಿ ಮತ್ತು ಶರದ್ ಪೂರ್ಣಿಮೆಯ ರಾತ್ರಿ, ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ಕೇಸರಿ ಅಥವಾ ಅರಿಶಿನವನ್ನು ಹಚ್ಚಿ ನೋಟುಗಳನ್ನು ಇಡಿ. ಪೂಜೆಯ ನಂತರ, ಆ ಕಾಸುಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ, ಕಮಾನಿನಲ್ಲಿ ಇರಿಸಿ. ಈ ಪ್ರಯೋಗದಿಂದ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಉಳಿಯುತ್ತದೆ.

10 /10

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)