ಹೈಸ್ಪೀಡ್ ರೈಲು ಸೇವೆಯಲ್ಲಿ ಚೀನಾ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಸರ್ಕಾರಿ ಸ್ವಾಮ್ಯದ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (CRRC) ಇತ್ತೀಚೆಗೆ ವಿಶ್ವದ ಅತಿ ವೇಗದ, ಗಂಟೆಗೆ 600 ಕಿ.ಮೀ. ವೇಗದಲ್ಲಿ ಚಲಿಸಬಲ್ಲ ಮೆಗ್ಲೇವ್ ರೈಲನ್ನು ಪರಿಚಯಿಸಿದೆ. ಇದು ಬುಲೆಟ್ ರೈಲಿಗಿಂತಲೂ ವೇಗವಾಗಿ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ವಿಶ್ವದಲ್ಲಿಯೇ ಅತಿ ವೇಗವಾಗಿ ಚಲಿಸುವ ಭೂ ಸಾರಿಗೆ ವಾಹನ ಮ್ಯಾಗ್ಲೆವ್ ರೈಲು(Maglev Train) ವಾಣಿಜ್ಯ ಬಳಕೆಗೆ ಬಂದ ನಂತರ ಚೀನಾದ ಮೆಟ್ರೋಪಾಲಿಟನ್ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ. ಈ ರೈಲು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಭವಿಷ್ಯದಲ್ಲಿ ಚೀನಾ(China)ದ ಪ್ರಮುಖ ನಗರಗಳನ್ನು ಸಂಪರ್ಕಿಸಲಿದೆ. ವೇಗದ ರೈಲಿನ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ…
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಮ್ಯಾಗ್ಲೆವ್ ಬುಲೆಟ್ ರೈಲು ಚೀನಾದ ಕಿಂಗ್ಡಾವೊ ನಗರದಲ್ಲಿ ಪಾದಾರ್ಪಣೆ ಮಾಡಿತು. ಈ ಅಪ್ರತಿಮ ಕ್ಷಣವನ್ನು ಸೆರೆಹಿಡಿಯಲು ಪ್ರವಾಸಿಗರ ದಂಡೇ ಆಗಮಿಸಿತ್ತು. ಮ್ಯಾಗ್ನೆಟಿಕ್ ಲೆವಿಟೇಶನ್ ತಂತ್ರಜ್ಞಾನವನ್ನು ಬಳಸಿಕೊಂಡು, ವಿದ್ಯುತ್ಕಾಂತೀಯ ಶಕ್ತಿಗಳಿಂದ ರೈಲು ಹಳಿಗಳ ಮೇಲೆ ಸಂಚರಿಸುತ್ತದೆ. ಆಯಸ್ಕಾಂತೀಯ ತೇಲುವಿಕೆಯಿಂದ ರೈಲು ಹಳಿಯನ್ನು ಸ್ಪರ್ಶಿಸದೇ ವೇಗವಾಗಿ ಚಲಿಸುತ್ತದೆ.
ಮ್ಯಾಗ್ಲೆವ್ ಬುಲೆಟ್ ರೈಲು ಗಂಟೆಗೆ 600 ಕಿಲೋಮೀಟರ್ ಅಥವಾ ಗಂಟೆಗೆ 373 ಮೈಲಿ ವೇಗದಲ್ಲಿ ಚಲಿಸಬಹುದು. ಇದು ಶಾಂಘೈ ಮತ್ತು ಬೀಜಿಂಗ್ ನಡುವಿನ 1,000 ಕಿ.ಮೀ ದೂರವನ್ನು ಕೇವಲ 2.5 ಗಂಟೆಯಲ್ಲಿ ತಲುಪುತ್ತದೆ. ಇದೇ ದೂರವನ್ನು ವಿಮಾನದಲ್ಲಿ ಕ್ರಮಿಸಲು 3 ಗಂಟೆ ಹಾಗೂ ಹೈಸ್ಪೀಡ್ ರೈಲಿನಲ್ಲಿ 5.5 ಗಂಟೆ ಬೇಕಾಗುತ್ತದೆ. ಹಾಲಿ ಇರುವ ಬುಲೆಟ್ ರೈಲುಗಳು ಗಂಟೆಗೆ ಗರಿಷ್ಠ 350 ಕಿ.ಮೀ. ವೇಗದಲ್ಲಿ ಚಲಿಸುತ್ತವೆ.
ದೇಶದ ಆರ್ಥಿಕತೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು 3 ಗಂಟೆಗಳ ಪ್ರಯಾಣ ವಲಯಗಳನ್ನು ರಚಿಸುವ ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವೇ ಈ ಮ್ಯಾಗ್ಲೆವ್ ರೈಲು. ಹೆಚ್ಚಿನ ಆಸನ ಸಾಮರ್ಥ್ಯದೊಂದಿಗೆ, ರೈಲು ಸುಧಾರಿತ ಸಾರಿಗೆ ವ್ಯವಸ್ಥೆಗೆ ಬಹುದೊಡ್ಡ ಕೊಡುಗೆ ನೀಡುತ್ತದೆ ಎಂದು ಅಂದಾಜಿಸಲಾಗಿದೆ.
ಹೈಸ್ಪೀಡ್ ರೈಲು ಸೇವೆಯಲ್ಲಿ ಚೀನಾ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಮೆಗ್ಲೇವ್ ರೈಲಿನ ಹೈಸ್ಪೀಡ್ ಮಾದರಿಯನ್ನು ಚೀನಾ ಸಿದ್ಧಪಡಿಸಿರುವುದು ಇದೇ ಮೊದಲು. ಸರ್ಕಾರಿ ಸ್ವಾಮ್ಯದ CRRC ಮ್ಯಾಗ್ಲೆವ್ ರೈಲಿನ ತಯಾರಕರು.
ಮ್ಯಾಗ್ಲೆವ್ ರೈಲಿನಲ್ಲಿ ಪೈಲಟ್ ಕುಳಿತುಕೊಳ್ಳುವ ಡೆಕ್ ಈ ಚಿತ್ರದಲ್ಲಿ ತೋರಿಸಿರುವಂತೆ ಭವಿಷ್ಯದಲ್ಲಿ ವಿನ್ಯಾಸಗೊಳಿಸಲಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅತ್ಯದ್ಭುತ ಒಳಾಂಗಣ ಮಾದರಿಯನ್ನು ಈ ರೈಲು ಹೊಂದಿರಲಿದೆ.