Viral Photo: ಸುವರ್ಣಸೌಧದ ಮುಂಭಾಗ ಶ್ಯಾವಿಗೆ ಒಣಹಾಕಿದ ಮಹಿಳೆ

ಬೆಳಗಾವಿ ಹೊರವಲಯದಲ್ಲಿರುವ ಸುವರ್ಣ ವಿಧಾನಸೌಧ ಮೆಟ್ಟಿಲುಗಳ ಮೇಲೆ ಶ್ಯಾವಿಗೆಯನ್ನು ಒಣಹಾಕಲಾಗಿದೆ. ಶ್ಯಾವಿಗೆ ಒಣಹಾಕಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸಾಂಬ್ರಾ ಮೂಲದ ಕಾರ್ಮಿಕ ಮಹಿಳೆಯೊಬ್ಬರು ಸುವರ್ಣ ವಿಧಾನಸೌಧದಲ್ಲಿ ಕೆಲಸ ಮಾಡುವ ಮಹಿಳೆಗೆ ಶ್ಯಾವಿಗೆ ತಂದುಕೊಟ್ಟಿದ್ದು, ಅದನ್ನು ವಿಧಾನಸೌಧ ಮೆಟ್ಟಿಲುಗಳ ಮೇಲೆ ಒಣಹಾಕಿದ್ದಾರೆ. ಇದನ್ನು ಕಂಡ ಪ್ಯಾಟ್ರೋಲಿಂಗ್‌ ನಡೆಸುತ್ತಿದ್ದ ಸಿಬ್ಬಂದಿ ತಕ್ಷಣವೇ ತೆರವುಗೊಳಿಸಿದ್ದಾರೆ. 

1 /4

2 /4

3 /4

4 /4