ಇನ್ನೊಂದು ವಾರದಲ್ಲಿ ಈ ರಾಶಿಯವರಿಗೆ ಭಾರೀ ಅದೃಷ್ಟ ಕರುಣಿಸಲಿದ್ದಾರೆ ಸೂರ್ಯ ಮತ್ತು ಬುಧ

ಬುಧ ಮತ್ತು ಸೂರ್ಯನ ಸಂಯೋಜನೆಯಿಂದಾಗಿ, ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಬುಧಾದಿತ್ಯ ರಾಜಯೋಗವು 3 ರಾಶಿಯವರಿಗೆ ಭಾರೀ ಅದೃಷ್ಟವನ್ನು ತಂದು ಕೊಡಲಿದೆ. 


ಬೆಂಗಳೂರು : ಮಾರ್ಚ್ 16 ರಂದು, ಯಶಸ್ಸು, ಆತ್ಮವಿಶ್ವಾಸ, ಆರೋಗ್ಯದ ಅಂಶವಾದ ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಬುಧ ಗ್ರಹ ಈಗಾಗಲೇ ಇರುವ ಮೀನ ರಾಶಿಗೆ ಸೂರ್ಯನ ಪ್ರವೇಶವಾಗುತ್ತಿದೆ.   ಹೀಗಾಗಿ ಮೀನ ರಾಶಿಯಲ್ಲಿ ಬುಧ ಮತ್ತು ಸೂರ್ಯನ ಸಂಯೋಜನೆಯಿಂದಾಗಿ, ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಬುಧಾದಿತ್ಯ ರಾಜಯೋಗವು 3 ರಾಶಿಯವರಿಗೆ ಭಾರೀ ಅದೃಷ್ಟವನ್ನು ತಂದು ಕೊಡಲಿದೆ. 
 

1 /3

ವೃಷಭ ರಾಶಿ : ಬುಧಾದಿತ್ಯ ರಾಜಯೋಗವು ವೃಷಭ ರಾಶಿಯವರಿಗೆ ಭಾರೀ ಲಾಭವನ್ನು ನೀಡುತ್ತದೆ. ಈ ರಾಶಿಯವರ ಆದಾಯದಲ್ಲಿ ಅನಿರೀಕ್ಷಿತ ಹೆಚ್ಚಳ ಕಂಡು ಬರಲಿದೆ. ಆರ್ಥಿಕ ಪರಿಸ್ಥಿತಿ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಸುಧಾರಿಸುವುದು. ಹೂಡಿಕೆಯಿಂದ ಲಾಭವಾಗಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. 

2 /3

ಮಿಥುನ ರಾಶಿ : ಬುಧಾದಿತ್ಯ ರಾಜಯೋಗವು ಮಿಥುನ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ.  ಉದ್ಯೋಗದ ಹುಡುಕಾಟ ಮಾಡುತ್ತಿದ್ದವರ ಹುಡುಕಾಟ ಕೊನೆಯಾಗಲಿದೆ.  ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಈ ಸಮಯವು ವಿಶೇಷವಾಗಿ ರಾಜಕೀಯದಲ್ಲಿ ಸಕ್ರಿಯವಾಗಿರುವವರಿಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಡಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. 

3 /3

ಕರ್ಕಾಟಕ ರಾಶಿ : ಬುಧಾದಿತ್ಯ ರಾಜಯೋಗದ ರಚನೆಯೊಂದಿಗೆ, ಕರ್ಕ ರಾಶಿಯವರ  ಜೀವನದಲ್ಲಿ ಒಳ್ಳೆಯ ದಿನಗಳು ಪ್ರಾರಂಭವಾಗಬಹುದು.  ಮಾಡುವ ಪ್ರತಿ ಕೆಲಸದಲ್ಲಿಯೂ ಅದೃಷ್ಟ ಕೈ ಹಿಡಿಯಲಿದೆ. ಇಷ್ಟಾರ್ಥಗಳು ಈಡೇರುತ್ತವೆ. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿರಲಿದೆ.   ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)