Border Gavaskar Trophy: ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿದೆ. ಮೊದಲ ಟೆಸ್ಟ್ ಗೆದ್ದರೂ ನಂತರ ಮೂರು ಟೆಸ್ಟ್ಗಳಲ್ಲಿ 2 ಸೋಲು ಕಂಡು, ಒಂದರಲ್ಲಿ ಡ್ರಾ ಸಾಧಿಸಿದೆ.
These Indian cricketers may announce retirement?: ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿದೆ. ಮೊದಲ ಟೆಸ್ಟ್ ಗೆದ್ದರೂ ನಂತರ ಮೂರು ಟೆಸ್ಟ್ಗಳಲ್ಲಿ 2 ಸೋಲು ಕಂಡು, ಒಂದರಲ್ಲಿ ಡ್ರಾ ಸಾಧಿಸಿದೆ. ಇದೀಗ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ದೃಷ್ಟಿಯಿಂದ ಗೆಲ್ಲಲೇಬೇಕಾದ ಸಿಡ್ನಿ ಟೆಸ್ಟ್ಗಾಗಿ ರಣತಂತ್ರ ರೂಪಿಸುತ್ತಿದೆ. ಈ ನಡುವೆ ಈ ವರ್ಷ ಟೀಂ ಇಂಡಿಯಾದ ಅನೇಕ ಕ್ರಿಕೆಟಿಗರು ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ. ಯಾವ ಆಟಗಾರರು 2025ರ ಹೊಸ ವರ್ಷದಲ್ಲಿ ನಿವೃತ್ತಿ ಘೋಷಿಸುತ್ತಾರೆ ಅನ್ನೋದರ ಮಾಹಿತ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
36 ವರ್ಷದ ಇಶಾಂತ್ ಶರ್ಮಾ 2021ರಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಈ ವರ್ಷ ಇಶಾಂತ್ ಕ್ರಿಕೆಟ್‌ಗೆ ವಿದಾಯ ಹೇಳಬಹುದು. ಏಕೆಂದರೆ ಟೀಂ ಇಂಡಿಯಾಕ್ಕೆ ಮರಳುವುದು ಅವರಿಗೆ ಕಷ್ಟಕರವಾಗಿದೆ.
ಜನವರಿ 25ಕ್ಕೆ ಚೇತೇಶ್ವರ ಪೂಜಾರ 37ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇದೀಗ ಟೀಂ ಇಂಡಿಯಾಗೆ ಅವರು ಮರಳುವುದು ಕಷ್ಟ ಎನಿಸುತ್ತದೆ. ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ 2023ರ WTC ಫೈನಲ್ ಆಗಿತ್ತು. ಪೂಜಾರ ಈ ವರ್ಷ ನಿವೃತ್ತಿ ಪಡೆದರೆ ಅಚ್ಚರಿಯಿಲ್ಲ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಹೀನಾಯ ಸೋಲು ಕಂಡಿದೆ. ಈ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಮತ್ತು ನಾಯಕತ್ವದಿಂದ ರೋಹಿತ್ ಶರ್ಮಾ ನಿವೃತ್ತಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ವರದಿಗಳ ಪ್ರಕಾರ, ಸಿಡ್ನಿ ಟೆಸ್ಟ್ ನಂತರ ರೋಹಿತ್ ಟೆಸ್ಟ್ ಕ್ರಿಕೆಟ್ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.
ರವೀಂದ್ರ ಜಡೇಜಾ ಈಗಾಗಲೇ ಟಿ-20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆರ್.ಅಶ್ವಿನ್‌ರಂತೆ ಜಡೇಜಾ ಸಹ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಗಮನಹರಿಸಲು ಈ ವರ್ಷ ನಿವೃತ್ತಿ ಘೋಷಿಸಬಹುದು ಎಂದು ಹೇಳಲಾಗುತ್ತಿದೆ.
36 ವರ್ಷದ ಅಜಿಂಕ್ಯ ರಹಾನೆ ಅವರು ದೇಶೀಯ ಕ್ರಿಕೆಟ್‌ನಲ್ಲಿ ರನ್ ಗಳಿಸುತ್ತಿರಬಹುದು. ಆದರೆ ಟೀಂ ಇಂಡಿಯಾದ ಬಾಗಿಲು ಬಹುತೇಕ ಯುವ ಆಟಗಾರರಿಗೆ ಓಪನ್ ಇರುವುದರಿಂದ, ಈ ಆಟಗಾರನಿಗೆ ಟೀಂ ಇಂಡಿಯಾದ ಬಾಗಿಲು ಬಹುತೇಕ್ ಮುಚ್ಚಿದಂತಿದೆ.
ರೋಹಿತ್ ಶರ್ಮಾರಂತೆ ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. 36ರ ಹರೆಯದ ವಿರಾಟ್, ದೀರ್ಘ ಕಾಲದಿಂದ ಕಳಪೆ ಫಾರ್ಮ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಷ ಏಕದಿನ ಮಾದರಿಗೆ ಕೊಹ್ಲಿ ವಿದಾಯ ಹೇಳಬಹುದು ಎನ್ನಲಾಗುತ್ತಿದೆ.