ಟೀಂ ಇಂಡಿಯಾ ಸ್ಟಾರ್‌ ಸಂಜು ಸ್ಯಾಮ್ಸನ್‌ ಪತ್ನಿ ಯಾರು ಗೊತ್ತಾ? ಈಕೆಯ ಸೌಂದರ್ಯದ ಮುಂದೆ ಅನುಷ್ಕಾ, ಸಾಕ್ಷಿ ಕೂಡ ಶೂನ್ಯ! ಅಂಥಾ ಬ್ಯೂಟಿ

Sanju Samson Wife: ಭಾರತೀಯ ಕ್ರಿಕೆಟಿಗ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿ,ಕ್ರಿಕೆಟ್ ಜಗತ್ತಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಅಂದಹಾಗೆ ನಾವಿಂದು ಈ ವರದಿಯಲ್ಲಿ ಸಂಜು ಸ್ಯಾಮ್ಸನ್‌ ಅವರ ಲವ್‌ ಸ್ಟೋರಿ ಮತ್ತು ಪತ್ನಿಯ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /9

ಭಾರತೀಯ ಕ್ರಿಕೆಟಿಗ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿ,ಕ್ರಿಕೆಟ್ ಜಗತ್ತಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಅಂದಹಾಗೆ ನಾವಿಂದು ಈ ವರದಿಯಲ್ಲಿ ಸಂಜು ಸ್ಯಾಮ್ಸನ್‌ ಅವರ ಲವ್‌ ಸ್ಟೋರಿ ಮತ್ತು ಪತ್ನಿಯ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.

2 /9

ಸಂಜು ಸ್ಯಾಮ್ಸನ್ ಅವರ ಪತ್ನಿ ಹೆಸರು ಚಾರುಲತಾ. ಇವರಿಬ್ಬರು ಸಹ ಕೇರಳದವರು. ಇನ್ನು ಚಾರುಲತಾ ತಿರುವನಂತಪುರಂ ನಿವಾಸಿ. ಚಾರುಲತಾ ತನ್ನ ಶಾಲಾ ಶಿಕ್ಷಣವನ್ನು ಅಲ್ಲಿಯೇ ಪೂರ್ಣಗೊಳಿಸಿದ್ದಾರೆ. ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿದ್ದಾರೆ.  

3 /9

ಚಾರುಲತಾ ವೃತ್ತಿಯಲ್ಲಿ ಉದ್ಯಮಿ. ಮಾನವ ಸಂಪನ್ಮೂಲದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಇನ್ನು ಇವರಿಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದೇಗೆ? ಅವರ ನಡುವೆ ಪ್ರೀತಿ ಹುಟ್ಟಿದ್ದೇಗೆ? ಎಂಬೆಲ್ಲಾ ವಿಚಾರದ ಬಗ್ಗೆ ಇಲ್ಲಿ ತಿಳಿಯೋಣ.  

4 /9

ಸಂಜು ಸ್ಯಾಮ್ಸನ್ ಮತ್ತು ಚಾರುಲತಾ ತಿರುವನಂತಪುರಂನ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಸ್ಯಾಮ್ಸನ್ ಈ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಬಿಎ ಮಾಡುತ್ತಿದ್ದರು.   

5 /9

ಇನ್ನು ಈ ಪ್ರೇಮಕಥೆ ಪ್ರಾರಂಭಕ್ಕೂ ಮುನ್ನ ಸಂಜು, ಫೇಸ್ಬುಕ್‌ ಮೂಲಕ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದರು. ಅದಾದ ಬಳಿಕ 2013ರ ಆಗಸ್ಟ್ 22ರಂದು ಮೊದಲ ಬಾರಿಗೆ ನಾನು ಚಾರುಲತಾ ಅವರಿಗೆ ಫೇಸ್‌ಬುಕ್‌ʼನಲ್ಲಿ ಸಂದೇಶ ನೀಡಿದ್ದರಂತೆ. ರಾತ್ರಿ 11:11 ಕ್ಕೆ ನಾನು ಅವರಿಗೆ 'ಹಾಯ್' ಎಂದು ಮೆಸೇಜ್‌ ಮಾಡಿದೆ ಎಂದು ಸಂಜು ಸ್ಯಾಮ್ಸನ್ ಒಂದೊಮ್ಮೆ ಹೇಳಿದ್ದರು.  

6 /9

ಆ ದಿನದಿಂದ ಐದು ವರ್ಷಗಳವರೆಗೆ, ನಾನು ಆಕೆ ಜೊತೆ ಫೋಟೋ ಪೋಸ್ಟ್ ಮಾಡಲು ಕಾಯುತ್ತಿದ್ದೆ, ಆದರೆ ಮದುವೆಗೆ ಮೊದಲು ನಾನು ನನ್ನ ಸಂಬಂಧದ ಬಗ್ಗೆ ಎಲ್ಲೂ ಹೇಳಕೊಂಡಿರಲಿಲ್ಲ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.  

7 /9

ಸಂಜು ಸ್ಯಾಮ್ಸನ್ ಮತ್ತು ಚಾರುಲತಾ ಅವರು ಮದುವೆಯಾಗಲು ಮತ್ತು ಒಟ್ಟಿಗೆ ಜೀವನ ನಡೆಸಲು ನಿರ್ಧರಿಸುವ ಮೊದಲು ಐದು ವರ್ಷಗಳ ಕಾಲ ಡೇಟಿಂಗ್ʼನಲ್ಲಿದ್ದರು. ಅದಾದ ಬಳಿಕ 22 ಡಿಸೆಂಬರ್ 2018 ರಂದು ಕೋವಲಂನಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ವಿವಾಹವಾದರು.  ಇದರಲ್ಲಿ ನಿಕಟ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದರು.   

8 /9

ಸಂಜು ಸ್ಯಾಮ್ಸನ್ ಕ್ರಿಶ್ಚಿಯನ್ ಆಗಿದ್ದು, ಚಾರುಲತಾ ರಮೇಶ್ ಹಿಂದೂ ನಾಯರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ವಿವಾಹ ಕಾಯಿದೆಯಡಿ ಅವರ ವಿವಾಹವನ್ನು ನೆರವೇರಿಸಲಾಯಿತು.   

9 /9

ಸಂಜು ಸ್ಯಾಮ್ಸನ್ ಅವರ ಪತ್ನಿ ಚಾರುಲತಾ ಇತರ ಕ್ರಿಕೆಟಿಗರ ಪತ್ನಿಯರು ಅಥವಾ ಗೆಳತಿಯರಂತೆ ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ತನ್ನ ಗಂಡನ ಯಶಸ್ಸಿಗಾಗಿ ಸ್ವಂತ ಕರಿಯರನ್ನೇ ಮುಡಿಪಾಗಿಟ್ಟ ಚಾರುಲತಾ,  ವಿಶೇಷ ಸಂದರ್ಭಗಳಲ್ಲಿ ಪತಿ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.