ಯಾವುದೇ ಖರ್ಚಿಲ್ಲದೇ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತೆ ʼಈʼ ಎರಡು ಎಲೆ! ಟ್ರೈ ಮಾಡಿ ನೋಡಿ!!

Best White Hair Remedy: ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಉಂಟಾಗುತ್ತದೆ. ಆದರೆ ಈ ಬಿಳಿ ಕೂದಲನ್ನು ನೈಸರ್ಗಿಕ ವಿಧಾನಗಳಲ್ಲಿ ಕಪ್ಪಾಗಿಸಬಹುದು. 
 

1 /6

ಇತ್ತೀಚಿನ ದಿನಗಳಲ್ಲಿ ಬೂದು ಕೂದಲು ವಯಸ್ಸಾದವರಲ್ಲಿ ಮಾತ್ರವಲ್ಲದೆ ಯುವಕರಲ್ಲಿಯೂ ಕಂಡುಬರುತ್ತದೆ. ಬದಲಾಗುತ್ತಿರುವ ಜೀವನ ಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಈ ಸಮಸ್ಯೆ ಉದ್ಭವಿಸುತ್ತದೆ ಎನ್ನುತ್ತಾರೆ ತಜ್ಞರು.   

2 /6

ಈ ಬಿಳಿ ಕೂದಲನ್ನು ಕಪ್ಪಾಗಿಸಲು ಹಲವರು ದುಬಾರಿ ಬೆಲೆಯ ಹೇರ್ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇವುಗಳಲ್ಲಿ ಅನೇಕ ಹಾನಿಕಾರಕ ರಾಸಾಯನಿಕಗಳಿವೆ. ಇವು ಕೂದಲಿನ ಆರೋಗ್ಯವನ್ನು ಹಾಳುಮಾಡುತ್ತವೆ. ಹಾಗಾಗಿಯೇ ಆದಷ್ಟು ಬಿಳಿ ಕೂದಲು ಕಪ್ಪಾಗಲು ನೈಸರ್ಗಿಕ ವಿಧಾನಗಳನ್ನು ಬಳಸಿ ಎನ್ನುತ್ತಾರೆ ತಜ್ಞರು.  

3 /6

ತುಳಸಿ ಎಲೆಗಳು ಮತ್ತು ಕರಿಬೇವಿನ ಎಲೆಗಳು ಬಿಳಿ ಕೂದಲು ಕಪ್ಪಾಗಲು ತುಂಬಾ ಸಹಾಯ ಮಾಡುತ್ತದೆ. ಇದಕ್ಕಾಗಿ ಅವುಗಳನ್ನು ಹೇಗೆ ಬಳಸುವುದು ಎಂದು ಈಗ ತಿಳಿಯೋಣ..  

4 /6

ತುಳಸಿ ಎಲೆಗಳನ್ನು ಹೀಗೆ ಬಳಸಿ:  ತುಳಸಿ ಎಲೆಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಬಿಳಿ ಕೂದಲು ಕಪ್ಪಾಗಲು ಇವು ತುಂಬಾ ಸಹಕಾರಿ ಎನ್ನುತ್ತಾರೆ ತಜ್ಞರು. ಇದಕ್ಕಾಗಿ.. ಮೊದಲು ತುಳಸಿ ಎಲೆ, ಆಮ್ಲಾ ಎಲೆಗಳು ಹಾಗೂ ಬೃಂಗರಾಜ ಎಲೆಯನ್ನ ಸಮನಾಗಿ ತೆಗೆದುಕೊಳ್ಳಿ ನಂತರ ಅವುಗಳನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ. ಕೂದಲು ಕಪ್ಪಾಗಲು ಇದು ತುಂಬಾ ಸಹಕಾರಿ.   

5 /6

ಕರಿಬೇವಿನ ಎಲೆಗಳನ್ನು ಹೀಗೆ ಬಳಸಿ ಕರಿಬೇವಿನ ಎಲೆಗಳು ಜೈವಿಕ ಸಕ್ರಿಯ ಪದಾರ್ಥಗಳಲ್ಲಿ ಸಮೃದ್ಧವಾಗಿವೆ. ಅವು ಕೂದಲಿಗೆ ಸಾಕಷ್ಟು ಪೋಷಣೆಯನ್ನು ನೀಡುತ್ತವೆ. ಇದು ಚಿಕ್ಕ ವಯಸ್ಸಿನಲ್ಲೇ ಉಂಟಾಗುವ ಬಿಳಿ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ. ಇದಕ್ಕಾಗಿ ಕರಿಬೇವಿನ ಪೇಸ್ಟ್ ಅನ್ನು ಕೂದಲಿಗೆ ಹಚ್ಚಬಹುದು. ಅಲ್ಲದೇ ಕರಿಬೇವನ್ನು ನೀವು ಬಳಸುವ ಎಣ್ಣೆಯಲ್ಲಿ ಮಿಶ್ರಣ ಮಾಡಬಹುದು.   

6 /6

(ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)