ನಿಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲಿ ಮತ್ತು ಎಷ್ಟು ಬಾರಿ ಬಳಸಲಾಗಿದೆ ಹೀಗೆ ತಿಳಿದುಕೊಳ್ಳಿ

ದೇಶದಲ್ಲಿ ಆಧಾರ್ ಕಾರ್ಡ್ ಅನ್ನು ಅಗತ್ಯ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ಅಗತ್ಯ ಕೆಲಸಗಳಿಗೆ ಆಧಾರ್ ಅನ್ನು ಬಳಸಲಾಗುತ್ತದೆ.

ನವದೆಹಲಿ : ದೇಶದಲ್ಲಿ ಆಧಾರ್ ಕಾರ್ಡ್ ಅನ್ನು ಅಗತ್ಯ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ಅಗತ್ಯ ಕೆಲಸಗಳಿಗೆ ಆಧಾರ್ ಅನ್ನು ಬಳಸಲಾಗುತ್ತದೆ. ಹೀಗಿರುವಾಗ ಹಣದ ವ್ಯವಹಾರಕ್ಕೆ ಸಂಬಂಧಿಸಿದ ಕೆಲಸಗಳಿಗೆ ಆಧಾರ್ ಅನ್ನು ಎಷ್ಟು ಬಾರಿ ಬಳಸಲಾಗಿದೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಹಾಗಾಗಿ ಯುಐಡಿಎಐ ವೆಬ್‌ಸೈಟ್‌ನಲ್ಲಿ 'ಆಧಾರ್ ಅಥೆಂಟಿಕೇಶನ್ ಹಿಸ್ಟರಿ' ಸೇವೆಯ ಮೂಲಕ, ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಕಾರ್ಡ್‌ ಅನ್ನು ಯಾವಾಗ ಮತ್ತು ಎಷ್ಟು ಬಾರಿ ಬಳಸಲಾಗಿದೆ ಎನ್ನುವುದನ್ನು ತಿಳಿದುಕೊಳ್ಳ ಬಹುದು.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

UIDAI ನ ಅಧಿಕೃತ ವೆಬ್‌ಸೈಟ್ https://resident.uidai.gov.in ನಲ್ಲಿ Aadhar Authentication History ಆಯ್ಕೆಯ ಮೂಲಕ, ನಿಮ್ಮ ಆಧಾರ್ ಕಾರ್ಡ್‌ನ ಕಳೆದ 6 ತಿಂಗಳ  ಹಿಸ್ಟರಿಯನ್ನು ಮನೆಯಲ್ಲಿಯೇ ಕುಳಿತು ನೋಡಬಹುದು.  

2 /5

ಇದಕ್ಕಾಗಿ, ಮೊದಲು ನೀವು UIDAI uidai.gov.in ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. ಇಲ್ಲಿ 'My Aadhar’ಆಯ್ಕೆಯನ್ನು ಕ್ಲಿಕ್ ಮಾಡಬೇಕು.  

3 /5

 ಈಗ ಆಧಾರ್ ಸೇವಾ ವಿಭಾಗವು ತೆರೆಯುತ್ತದೆ. ಇದರಲ್ಲಿ ‘Aadhar Authentication History’ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ನೀವು ನಿಮ್ಮ ಆಧಾರ್ ಸಂಖ್ಯೆ ಮತ್ತು ನೀಡಿರುವ ಕ್ಯಾಪ್ಚಾ ಇಮೇಜ್  ಭರ್ತಿ ಮಾಡಿ. ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶದ ರೂಪದಲ್ಲಿ OTP ಬರುತ್ತದೆ. 

4 /5

OTP ಅನ್ನು ಭರ್ತಿ ಮಾಡಿದ ನಂತರ, ನೀವು 2 ಆಯ್ಕೆಗಳನ್ನು ಪಡೆಯುತ್ತೀರಿ. ಇದರಲ್ಲಿ, ಒಂದು  Authentication Type’ ಇಲ್ಲಿ ಬಯೋಮೆಟ್ರಿಕ್ ಇತ್ಯಾದಿಗಳ ವಿವರಗಳು ಕಂಡುಬರುತ್ತದೆ. ಎರಡನೇ ಆಯ್ಕೆಯು‘Data range’ ಆಗಿರುತ್ತದೆ. ಇದರ ಅಡಿಯಲ್ಲಿ, ಒಂದು ನಿರ್ದಿಷ್ಟ ದಿನಾಂಕದಿಂದ ಇನ್ನೊಂದು ನಿಗದಿತ ದಿನಾಂಕದ ನಡುವಿನ ಮಾಹಿತಿ ಲಭ್ಯವಿರುತ್ತದೆ.   

5 /5

ಕೊನೆಯಲ್ಲಿ ನಿಗದಿತ ಸಮಯದ ಚೌಕಟ್ಟನ್ನು ಭರ್ತಿ ಮಾಡುವ ಮೂಲಕ ನಿಮ್ಮ ಆಧಾರ್ ಬಳಕೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದು.