WhatsApp ಪರಿಚಯಿಸುತ್ತಿದೆ ಐದು ಹೊಸ ವೈಶಿಷ್ಟ್ಯ, ಚಾಟಿಂಗ್ ಆಗಲಿದೆ ಇನ್ನಷ್ಟು ಆಹ್ಲಾದಕರ

WhatsApp ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ಅಪ್ಡೇಟ್ ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದರೊಂದಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಕೂಡಾ ಪರಿಚಯಿಸುತ್ತದೆ.

ನವದೆಹಲಿ : ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಮತ್ತು ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾದ WhatsApp ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ಅಪ್ಡೇಟ್ ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದರೊಂದಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಕೂಡಾ ಪರಿಚಯಿಸುತ್ತದೆ.  WhatsApp ನ ಬಳಕೆದಾರರು ಶೀಘ್ರದಲ್ಲೇ ಪಡೆಯಬಹುದಾದ ಐದು ಅಂತಹ ವೈಶಿಷ್ಟ್ಯಗಳ ಬಗ್ಗೆ ಇಲ್ಲಿ ಹೇಳಲಿದ್ದೇವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದಾಗಿನಿಂದ, ನೀವು ಅನ್ ನೋನ್ ಬಿಸ್ ನೆಸ್ ಅಕೌಂಟ್ಸ್ ನಿಂದ ಸಂದೇಶವನ್ನು ಪಡೆದರೆ, ಅದರ ಬಗ್ಗೆ ನಿಮಗೆ ತಿಳಿಯುತ್ತದೆ. 

2 /5

ವಾಟ್ಸಾಪ್‌ನ ಸಂದೇಶ ಡಿಲೀಟ್ ವೈಶಿಷ್ಟ್ಯದಲ್ಲಿ ಡಿಲೀಟ್ ಫಾರ್ ಎವ್ರಿ ವನ್  ಆಯ್ಕೆಯ ಸಮಯ ಮಿತಿಯನ್ನು ಒಂದು ಗಂಟೆ ವಿಸ್ತರಿಸಲಾಗುತ್ತಿದೆ. ಈಗ ಸಂದೇಶವನ್ನು ಕಳುಹಿಸಿದ ನಂತರ ಯಾವುದೇ ಸಮಯದಲ್ಲಿ ಅದನ್ನು ಡಿಲೀಟ್ ಮಾಡುವುದು ಸಾಧ್ಯವಾಗುತ್ತದೆ. 

3 /5

ಹೊಸ ಅಪ್ಡೇಟ್ ನಂತರ, ಈಗ WhatsApp ಬಳಕೆದಾರರು ಯಾರೊಂದಿಗಾದರೂ ಫೋಟೋಗಳನ್ನು ಹಂಚಿಕೊಂಡಾಗ, ಆ ಚಿತ್ರಗಳ ಗುಣಮಟ್ಟವು ಕಡಿಮೆಯಾಗುವುದಿಲ್ಲ. ನೀವು HD ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಬೇಕಾದರೆ, ನೀವು ಅವುಗಳನ್ನು 'ಡೇಟಾ ಸೇವಿಂಗ್ ಮೋಡ್' ಅಥವಾ 'ಸೆಲ್ಪ್ ಮೋಡ್' ನಲ್ಲಿಯೂ ಕಳುಹಿಸಬಹುದು. 

4 /5

WhatsApp ತನ್ನ ಅಪ್‌ಡೇಟ್‌ನಲ್ಲಿ ಹೊಸ ಗೌಪ್ಯತೆ ವೈಶಿಷ್ಟ್ಯವನ್ನು ಸಹ ತರಲಿದೆ. ಇದರಿಂದ ನಿಮ್ಮ ಪ್ರೊಫೈಲ್ ಫೋಟೋವನ್ನು ಮರೆಮಾಡಲು ನಿಮಗೆ ಸಾಧ್ಯವಾಗುತ್ತದೆ. ಪ್ರೊಫೈಲ್ ಫೋಟೋದ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಬಳಕೆದಾರರಿಗೆ 'ಮೈ ಕಾಂಟಾಕ್ಟ್ ಆಕ್ಸೆಪ್ಟ್’ ಆಯ್ಕೆಯನ್ನು ಸಹ ನೀಡಲಾಗುತ್ತದೆ. 

5 /5

ಈ ಹೊಸ ವೈಶಿಷ್ಟ್ಯದೊಂದಿಗೆ, ಯಾರಿಗಾದರೂ ಧ್ವನಿ ಸಂದೇಶವನ್ನು ಕಳುಹಿಸುವಾಗ, ಮಧ್ಯದಲ್ಲಿ ಪಾಸ್ ಮಾಡಬಹುದಾಗಿದೆ. ಇದರೊಂದಿಗೆ, ಯಾವುದೇ ತಪ್ಪುಗಳಾಗಿದ್ದರೆ, ಸಂಪೂರ್ಣ ಸಂದೇಶವನ್ನು ಮರು-ರೆಕಾರ್ಡ್ ಮಾಡಬೇಕಾಗಿಲ್ಲ.