ಫೋನ್ ಬದಲಾಯಿಸಿದರೂ ಕೂಡ ನಿಮ್ಮ ವಾಟ್ಸ್ ಆಪ್ ಚಾಟ್, ಫೋಟೋ ಹಾಗೂ ವಿಡಿಯೋಗಳು ಡಿಲೀಟ್ ಆಗಲ್ಲ, ಈ ವಿಧಾನ ಅನುಸರಿಸಿ

WhatsApp Trick How to Backup WhatsApp Chats and Files: ಬಹುತೇಕ ಎಲ್ಲರೂ ಕೂಡ ಡೌನ್ಲೋಡ್ ಮಾಡಿಕೊಳ್ಳಲು ಬಯಸುವಂತಹ ಆಪ್ ಗಳಲ್ಲಿ ಸಂದೇಶ ರವಾನಿಸಲು ಬಳಕೆಯಾಗುವ ವಾಟ್ಸ್ ಆಪ್ ಕೂಡ ಒಂದು. ಈ ವೇದಿಕೆಯ ಮುಖಾಂತರ ನಾವು ಎಲ್ಲರ ಜೊತೆಗೆ ಸಂವಾದ ನಡೆಸುತ್ತೇವೆ.

WhatsApp Trick How to Backup WhatsApp Chats and Files: ಬಹುತೇಕ ಎಲ್ಲರೂ ಕೂಡ ಡೌನ್ಲೋಡ್ ಮಾಡಿಕೊಳ್ಳಲು ಬಯಸುವಂತಹ ಆಪ್ ಗಳಲ್ಲಿ ಸಂದೇಶ ರವಾನಿಸಲು ಬಳಕೆಯಾಗುವ ವಾಟ್ಸ್ ಆಪ್ ಕೂಡ ಒಂದು. ಈ ವೇದಿಕೆಯ ಮುಖಾಂತರ ನಾವು ಎಲ್ಲರ ಜೊತೆಗೆ ಸಂವಾದ ನಡೆಸುತ್ತೇವೆ. ಹೀಗಿರುವಾಗ ಒಂದು ವೇಳೆ ನೀವು ನಿಮ್ಮ ಚಾಟ್ ಗಳನ್ನು, ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ಖಾಯಂ ರೂಪದಲ್ಲಿ ನೀವು ನಿಮ್ಮ ಬಳಿ ಸಂಗ್ರಹಿಸಿ ಇಡಲು ಬಯಸುತ್ತಿದ್ದರೆ, ನಾವು ನಿಮಗಾಗಿ ಒಂದು ಉಪಯುಕ್ತ ಟ್ರಿಕ್ ನೀಡಲಿದ್ದೇವೆ. ಈ ಕೆಳಗೆ ನೀಡಲಾಗಿರುವ ಹಂತಗಳನ್ನು ಅನುಸರಿಸುವ ಮುಖಾಂತರ ನೀವು ನಿಮ್ಮ ವಾಟ್ಸ್ ಆಪ್ ದತ್ತಾಂಶವನ್ನು ಖಾಯಂ ರೂಪದಲ್ಲಿ ಸುರಕ್ಷಿತವಾಗಿರಿಸಬಹುದು. ನೀವು ಫೋನ್ ಬದಲಾಯಿಸಿದರೂ ಕೂಡ ನಿಮ್ಮ ಡೇಟಾ ಸುರಕ್ಷಿತವಾಗಿರಲಿದೆ.

 

ಇದನ್ನೂ ಓದಿ-Smartphone Tips: ಸ್ಮಾರ್ಟ್ ಫೋನ್ ಮೂಲಕ ಯಾರಾದರು ನಿಮ್ಮ ಬೆಹುಗಾರಿಕೆ ನಡೆಸುತಿದ್ದಾರೆಯೇ? ಈ ರೀತಿ ಸುಲಭವಾಗಿ ತಿಳಿದುಕೊಳ್ಳಿ

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

1 /5

WhatsApp ಡೇಟಾವನ್ನು ಸುರಕ್ಷಿತವಾಗಿರಿಸಲು ಸಲಹೆ: ನಿಮ್ಮ WhatsApp ಚಾಟ್‌ಗಳು ಮತ್ತು ಮೀಡಿಯಾ ಫೈಲ್‌ಗಳನ್ನು ಖಾಯಂ ರೂಪದಲ್ಲಿ ಸುರಕ್ಷಿತವಾಗಿರಿಸಲು, ಅವುಗಳನ್ನು Google ಡ್ರೈವ್‌ನಲ್ಲಿ ಬ್ಯಾಕಪ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ, ಫೋನ್ ಬದಲಾಯಿಸಿದ ಸಂದರ್ಭಗಳಲ್ಲಿಯೂ ಕೂಡ ನೀವು ಚಾಟ್‌ಗಳನ್ನು ಮರಳಿ ಪಡೆದುಕೊಳ್ಳಬಹುದು.

2 /5

WhatsApp ಡೇಟಾವನ್ನು ಬ್ಯಾಕಪ್ ಮಾಡುವುದು ಹೇಗೆ: : WhatsApp ಡೇಟಾವನ್ನು ಬ್ಯಾಕಪ್ ಮಾಡಲು, ಮೊದಲು ನಿಮ್ಮ ಫೋನ್‌ನಲ್ಲಿ WhatsApp ಅಪ್ಲಿಕೇಶನ್ ಅನ್ನು ತೆರೆಯಿರಿ ಮತ್ತು ನಂತರ ಸೆಟ್ಟಿಂಗ್‌ಗಳಿಗೆ ಹೋಗಿ. ಇದರ ನಂತರ ನೀವು 'ಚಾಟ್ಸ್' ಆಯ್ಕೆಯನ್ನು ಗಮನಿಸುವಿರಿ, ಅದರ ಮೇಲೆ ಕ್ಲಿಕ್ ಮಾಡಿ.

3 /5

ನೀವು ಈಗ ನಿಮ್ಮ WhatsApp ಡೇಟಾವನ್ನು ಬ್ಯಾಕಪ್ ಮಾಡಲು ಸಿದ್ಧರಾಗಿ: 'ಚಾಟ್‌ಗಳಲ್ಲಿ' ನೀವು 'Google ಡ್ರೈವ್‌ಗೆ ಬ್ಯಾಕಪ್' ಆಯ್ಕೆಯೊಂದಿಗೆ 'ಚಾಟ್ ಬ್ಯಾಕಪ್' ಆಯ್ಕೆಯನ್ನು ಗಮನಿಸುವಿರಿ. ಅಲ್ಲಿಗೆ ಹೋಗುವ ಮೂಲಕ, ನೀವು ನಿಮ್ಮ ಡೇಟಾವನ್ನು ಎಷ್ಟು ಬಾರಿ ಬ್ಯಾಕಪ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ದುಕೊಳ್ಳಬೇಕು. 

4 /5

ಡೇಟಾವನ್ನು ಬ್ಯಾಕಪ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: ನೀವು ಡೇಟಾ ಬ್ಯಾಕಪ್ ಮಾಡುವಾಗ, ದೈನಂದಿನ, ಸಾಪ್ತಾಹಿಕ ಅಥವಾ ಮಾಸಿಕ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡುತ್ತಿರುವಿರಿ ಎಂಬುದನ್ನು ನೆನಪಿನಲ್ಲಿಡಿ. ಇದರಿಂದ ಒಂದು ನಿಶ್ಚಿತ ಕಾಲಾಂತರದಲ್ಲಿ WhatsApp ಡೇಟಾ ಅನ್ನು Google ಡ್ರೈವ್‌ನಲ್ಲಿ ಉಳಿಸಲಾಗುತ್ತದೆ. ಇದಲ್ಲದೆ, ಬ್ಯಾಕಪ್‌ ಮಾಡಿಕೊಳ್ಳಲು ಮೊಬೈಲ್ ಡೇಟಾ ಬದಲಿಗೆ ವೈಫೈ ಬಳಸಿದರೆ ಮತ್ತಷ್ಟು ಉತ್ತಮ.

5 /5

WhatsApp ಡೇಟಾವನ್ನು ಬ್ಯಾಕಪ್ ಮಾಡಿ ಮತ್ತು ಸುರಕ್ಷಿತಗೊಳಿಸಿ: ನೀವು Google ಡ್ರೈವ್‌ಗೆ ಬ್ಯಾಕಪ್ ಮಾಡುವ ಡೇಟಾವನ್ನು ಡಬಲ್-ರಕ್ಷಿಸಲು, WhatsApp ನ ಸೆಟ್ಟಿಂಗ್‌ಗಳಿಗೆ ಹೋಗಿ, 'Chats' ನಲ್ಲಿ 'Chats ಬ್ಯಾಕಪ್' ಗೆ ಹೋಗಿ ಮತ್ತು 'End-to-end-encrypted backup' ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಯ್ಕೆಯನ್ನು ಸಕ್ರಿಯಗೊಳಿಸಿ, ನಂತರ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ಪಾಸ್ವರ್ಡ್ ಅನ್ನು ರಚಿಸಿಕೊಳ್ಳಿ.