Weekly Horoscope: ಈ ನಾಲ್ಕು ರಾಶಿಯ ಜಾತಕದವರ ಪಾಲಿಗೆ ಸೆಪ್ಟೆಂಬರ್ ಕೊನೆಯ ವಾರ ಅದ್ಭುತವಾಗಿರಲಿದೆ

Weekly Horoscope 2021: ಸೆಪ್ಟೆಂಬರ್(September 2021) ತಿಂಗಳ ಕೊನೆಯ ವಾರ  4 ರಾಶಿಯ (Zodiac Sign) ಜನರಿಗೆ ಬಹಳ ಮಂಗಳಕರವಾಗಿರಲಿದೆ. ಇದೆ ಅವಧಿಯಲ್ಲಿ, 2 ರಾಶಿಚಕ್ರದ  (Sun Sign) ಜನರು ಕುಟುಂಬದ ಸಹಾಯದಿಂದ ಯಶಸ್ಸನ್ನು ಪಡೆಯಲಿದ್ದಾರೆ. 

Weekly Horoscope 2021: ಸೆಪ್ಟೆಂಬರ್(September 2021) ತಿಂಗಳ ಕೊನೆಯ ವಾರ  4 ರಾಶಿಯ (Zodiac Sign) ಜನರಿಗೆ ಬಹಳ ಮಂಗಳಕರವಾಗಿರಲಿದೆ. ಇದೆ ಅವಧಿಯಲ್ಲಿ, 2 ರಾಶಿಚಕ್ರದ  (Sun Sign) ಜನರು ಕುಟುಂಬದ ಸಹಾಯದಿಂದ ಯಶಸ್ಸನ್ನು ಪಡೆಯಲಿದ್ದಾರೆ. ಈ ವಾರ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ (Astrology) ಹೇಗಿರಲಿದೆ ಎಂಬುದನ್ನು ಆಸ್ಟ್ರೋ ಗುರು ಬೇಜಾನ್ ದಾರುವಾಲಾ ಅವರ ಪುತ್ರ ಆಸ್ಟ್ರೋ ಫ್ರೆಂಡ್ ಚಿರಾಗ್ ದಾರುವಾಲಾ (Astro Friend Chirag Daruwala) ಅವರಿಂದ ತಿಳಿದುಕೊಳ್ಳೋಣ.

 

ಇದನ್ನೂ ಓದಿ-Small Business Idea: ವರ್ಷಕ್ಕೆ ಕೇವಲ ರೂ. 25 ಸಾವಿರ ಹೂಡಿಕೆ ಮಾಡಿ ತಿಂಗಳಿಗೆ 2 ಲಕ್ಷ ಸಂಪಾದಿಸಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /12

1. ಮೇಷ: ದೇಶ-ವಿದೇಶದಿಂದ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಹೊಸ ವಸ್ತುಗಳ ಪ್ರತಿ ಆಕರ್ಷಣೆ ಹೆಚ್ಚಾಗಲಿದೆ. ಆರೋಗ್ಯದ ಕಾಳಜಿ ವಹಿಸಿ. ಎಲ್ಲ ಕಾರ್ಯಗಳಲ್ಲಿ ಸಿದ್ಧಿ ಪ್ರಾಪ್ತಿಗೆ ಜೀವನ ಸಂಗಾತಿಯ ಸಾಥ್ ಸಿಗಲಿದೆ. ದಾಂಪತ್ಯ ಜೀವನ ಸುಖದಿಂದ ಕೂಡಿರಲಿದೆ.

2 /12

2. ವೃಷಭ: ವ್ಯವಸಾಯದಲ್ಲಿ ಲಾಭದ ಸ್ಥಿತಿ ನಿರ್ಮಾಣ. ಸುಖ ಸಮಾಚಾರ ಪ್ರಾಪ್ತಿ, ಭಾಗ್ಯದ ಸಾಥ್ ಸಿಗಲಿದೆ. ದಾಂಪತ್ಯ ಜೀವನ ಪ್ರಸನ್ನತೆಯಿಂದ ಕೂದಿರಲಿದೆ. ಸಂಗಾತಿಯ ಜೊತೆಗೆ ಉತ್ತಮ ಕಾಲ ಕಳೆಯುವಿರಿ.

3 /12

3. ಮಿಥುನ: ವ್ಯಾಪಾರದ ನಿಮಿತ್ತ ಪ್ರವಾಸ ಮತ್ತು ಅದರಿಂದ ಸಕಾರಾತ್ಮಕ ಪರಿಣಾಮಗಳ ಪ್ರಾಪ್ತಿ. ಕಾರ್ಯಕ್ಷೇತ್ರದಲ್ಲಿ ಪದೋನ್ನತಿಯ ಜೊತೆಗೆ ಆರ್ಥಿಕ ಸುಖ ಪ್ರಾಪ್ತಿ. ಯಾವುದೇ ಕೆಲಸ ಸುಲಭವಾಗಿ ಪೂರ್ಣಗೊಳಿಸುವಿರಿ. ದಾಂಪತ್ಯ ಜೀವನದಲ್ಲಿ ಸುಖ. ಸಂಗಾತಿ ಹಾಗೂ ಸಂತಾನ ಸುಖ ಪ್ರಾಪ್ತಿ.

4 /12

4. ಕರ್ಕ: ಈ ವಾರ ದಾಂಪತ್ಯ ಜೀವನದಲ್ಲಿ ಸಿಹಿ ಇರಲಿದೆ. ಲಾಭಕ್ಕಾಗಿ ಅವಕಾಶಗಳು ಬರುತ್ತವೆ. ವ್ಯಾಪಾರ-ವ್ಯವಹಾರ ಲಾಭದಾಯಕವಾಗಿರುತ್ತದೆ. ಉದ್ಯೋಗದಲ್ಲಿ ಹಕ್ಕುಗಳು ಹೆಚ್ಚಾಗಬಹುದು. ಸರ್ಕಾರಿ ವಲಯಕ್ಕೆ ಸಂಬಂಧಿಸಿದ ಕೆಲಸದಲ್ಲಿ ನೀವು ಲಾಭದ ಆನಂದವನ್ನು ಪಡೆಯುತ್ತೀರಿ. ಸಂಭಾಷಣೆಯಲ್ಲಿ ಉತ್ತಮವಾದ ಕಾರಣ ನೀವು ಇತರರೊಂದಿಗೆ ಉತ್ತಮ ಸಂಬಂಧವನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

5 /12

5. ಸಿಂಹ: ಈ ವಾರ ನೀವು ಹಣಕಾಸಿನ ನಷ್ಟವನ್ನು ಎದುರಿಸಬೇಕಾಗಬಹುದು. ಕೆಲಸದ ಕ್ಷೇತ್ರದಲ್ಲಿ ನಿಮ್ಮ ವಿರೋಧಿಗಳನ್ನು ಸೋಲಿಸಲು ನಿಮಗೆ ಸಾಧ್ಯವಾಗುತ್ತದೆ. ದೇವರ ಮೇಲಿನ ನಿಮ್ಮ ನಂಬಿಕೆ ಹೆಚ್ಚಾಗುತ್ತದೆ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಈ ವಾರ ನೀವು ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ.

6 /12

6. ಕನ್ಯಾ: ಈ ವಾರ ನೀವು ಧಾರ್ಮಿಕ ಚಟುವಟಿಕೆಗಳತ್ತ ಒಲವು ತೋರುತ್ತೀರಿ. ಕುಟುಂಬ ಸದಸ್ಯರು ಸಾಧ್ಯವಾದಷ್ಟು ಸಹಾಯ ಮಾಡಲು ಸಿದ್ಧರಿರುತ್ತಾರೆ. ನೀವು ನೀಡಿದ ಸಲಹೆಯು ಇತರರಿಗೆ ಉಪಯುಕ್ತವಾಗುತ್ತದೆ, ಅದು ನಿಮಗೆ ಪ್ರತಿಷ್ಠೆಯನ್ನು ತರುತ್ತದೆ. ದೇವರನ್ನು ನಂಬುವ ಮತ್ತು ಆತ್ಮವಿಮರ್ಶೆ ಮಾಡುವವರಲ್ಲಿ ನೀವೂ ಒಬ್ಬರು.

7 /12

7. ತುಲಾ: ಈ ವಾರ ಕೆಲಸದ ಸ್ಥಳದಲ್ಲಿ ಸಹಜತೆ ಇರುತ್ತದೆ. ಸಹೋದ್ಯೋಗಿಗಳು ಮತ್ತು ಉನ್ನತ ಸ್ಥಾನದಲ್ಲಿರುವ ಜನರಿಂದ ನೀವು ಅತ್ಯುತ್ತಮ ಬೆಂಬಲ ಮತ್ತು ಸಹಕಾರವನ್ನು ಪಡೆಯುತ್ತೀರಿ. ಬುದ್ಧಿವಂತರಾಗಿರುವುದರಿಂದ ನೀವು ಕೆಲಸದ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವಿರಿ. ನೀವು ಸಮಾಜದಲ್ಲಿ ಗೌರವವನ್ನು ಪಡೆಯುತ್ತೀರಿ. ಧಾರ್ಮಿಕ ಮತ್ತು ಹಿತಚಿಂತಕ ಸ್ವಭಾವದವರಾಗಿರುವ ನೀವು ದೇವರಲ್ಲಿ ನಂಬಿಕೆಯನ್ನು ಹೊಂದಿರುತ್ತೀರಿ ಮತ್ತು ಇತರರಿಗೆ ಸಹಾಯ ಮಾಡುವಿರಿ.

8 /12

8. ವೃಶ್ಚಿಕ: ಈ ವಾರ ವ್ಯಾಪಾರದಲ್ಲಿ ಯಶಸ್ಸು ಇರುವುದಿಲ್ಲ. ಉನ್ನತ ಸ್ಥಾನಗಳಲ್ಲಿ ಕುಳಿತಿರುವ ಜನರೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಲಾಗುವುದು. ಕುಟುಂಬದಲ್ಲಿ ಸಂತೋಷ ಇರುತ್ತದೆ, ನಿಮ್ಮ ಅಭ್ಯಾಸಗಳನ್ನು ಬದಲಾಯಿಸುವುದು ಅವಶ್ಯಕ. ಕುಟುಂಬಕ್ಕೆ ಸಂಬಂಧಿಸಿದಂತೆ ಯಾವುದೇ ಒಳ್ಳೆಯ ಸುದ್ದಿಯನ್ನು ಪಡೆಯುವ ಮೂಲಕ ಸಂತೋಷದ ವಾತಾವರಣ ಇರುತ್ತದೆ.

9 /12

9. ಧನು: ಈ ವಾರ ನೀವು ನಿಮ್ಮ ಪ್ರೀತಿಪಾತ್ರರ ಬೆಂಬಲವನ್ನು ಪಡೆಯುತ್ತೀರಿ. ಬುದ್ಧಿವಂತರಾಗಿರುವುದರಿಂದ ನೀವು ಕೆಲಸದ ಕ್ಷೇತ್ರದಲ್ಲಿ ಉತ್ತಮ ಲಾಭಗಳನ್ನು ಗಳಿಸುವಿರಿ. ನೀವು ಸಂತೋಷದ ಹೃದಯದ ವ್ಯಕ್ತಿ. ನಿಮ್ಮ ಬೌದ್ಧಿಕ ಶಕ್ತಿ ಚೆನ್ನಾಗಿರುತ್ತದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡುವರು. ನೀವು ಯಾವುದೇ ಕೆಲಸದ ಬಗ್ಗೆ ಆಳವಾಗಿ ಯೋಚಿಸುವವರು.

10 /12

10. ಮಕರ: ಈ ವಾರ ನೀವು ಕುಟುಂಬ ಸದಸ್ಯರೊಂದಿಗೆ ಏನೇ ಕೆಲಸ ಮಾಡಿದರೂ ಯಶಸ್ಸು ಸಿಗಲಿದೆ. ಹಣ ಬೇಕಾಗಬಹುದು, ಆದ್ದರಿಂದ ನೀವು ಸಾಲ ತೆಗೆದುಕೊಳ್ಳಲು ಯೋಚಿಸುತ್ತೀರಿ. ವೈವಾಹಿಕ ಜೀವನದಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಈ ವಾರ ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ.

11 /12

11. ಕುಂಭ: ಈ ವಾರ ಕುಟುಂಬಸದಸ್ಯರೊಂದಿಗೆ ಉತ್ತಮ ಕಾಲ ಕಳೆಯುವಿರಿ. ದೇಹದಲ್ಲಿ ಚುರುಕುತನವೂ ಕಾಣಿಸುತ್ತದೆ. ನಿಮಗೆ ಹಣ ಗಳಿಕೆಗೆ ಹಲವು ಅವಕಾಶಗಳು ಸಿಗಲಿವೆ. ನೀವು ಕುಟುಂಬ ಸದಸ್ಯರಿಂದ ಮೊದಲಿಗಿಂತ ಹೆಚ್ಚಿನ ಪ್ರೀತಿ, ಗೌರವ ಮತ್ತು ಬೆಂಬಲವನ್ನು ಪಡೆಯುವಿರಿ.

12 /12

12. ಮೀನ: ಈ ವಾರ ನಿಮಗೆ ತುಂಬಾ ಶುಭಕರವಾಗಿರುತ್ತದೆ ಮತ್ತು ಸುತ್ತಮುತ್ತಲಿನಿಂದ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಉನ್ನತ ದರ್ಜೆಯ ಜನರೊಂದಿಗೆ ಸಂಬಂಧಗಳು ರೂಪುಗೊಳ್ಳುತ್ತವೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಲಾಭ ಇರುತ್ತದೆ, ಕುಟುಂಬದಲ್ಲಿ ಶುಭ ಕಾರ್ಯಕ್ರಮದಿಂದಾಗಿ ಮನಸ್ಸಿಗೆ ಸಂತೋಷ ಸಿಗುತ್ತದೆ.