ಈ ಬಿಡುವಿಲ್ಲದ ಜೀವನದಲ್ಲಿ ನಿಮಗೆ ವರ್ಕೌಟ್ ಮಾಡಲು ಸಮಯವಿಲ್ಲದಿದ್ದರೆ ಚಿಂತಿಸಬೇಡಿ. ಕೆಲವು ಸರಳ ಸಲಹೆಗಳನ್ನು ಅಳವಡಿಸಿಕೊಂಡರೆ, ನೀವು ವರ್ಕ್ಔಟ್ ಮಾಡದಿದ್ದರೂ ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಬಹುದು. ವ್ಯಾಯಾಮದ ಹೊರತಾಗಿ, ನಿಮ್ಮ ದಿನಚರಿಗೆ ಕೆಲವು ಹೊಸ ಆರೋಗ್ಯಕರ ಅಭ್ಯಾಸಗಳನ್ನು ಸೇರಿಸುವ ಮೂಲಕ ನೀವು ಫಿಟ್ ಆಗಿ ಉಳಿಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮುಂಜಾನೆ ಬೇಗ ಎದ್ದೇಳುವ ಅಭ್ಯಾಸ ರೂಢಿಸಿಕೊಳ್ಳಿ : ಫಿಟ್ ಆಗಿರಲು ಯಾವಾಗಲೂ ಪ್ರತಿದಿನ ಬೇಗನೆ ಎದ್ದೇಳಲು ಪ್ರಯತ್ನಿಸಿ. ನೀವು ಸೂರ್ಯೋದಯಕ್ಕೆ ಮುಂಚಿತವಾಗಿ ಬೆಳಿಗ್ಗೆ ಎದ್ದರೆ, ನೀವು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಸೇವಿಸಲು ಸಾಧ್ಯವಾಗುತ್ತದೆ. ಕೆಲವು ದಿನಗಳವರೆಗೆ ಇದನ್ನು ಪ್ರಯತ್ನಿಸಿ, ನಿಮಗೇ ಆ ರಿಫ್ರೆಶ್ ಅನುಭವವಾಗುತ್ತದೆ.
ಉತ್ತಮ ಉಪಹಾರ ಅತ್ಯಗತ್ಯ: ಪ್ರತಿದಿನ ಬೆಳಿಗ್ಗೆ, ತಪ್ಪದೇ ಉಪಹಾರ ಸೇವಿಸಬೇಕು. ಉಪಹಾರವು ರಾಜರು ಮತ್ತು ಚಕ್ರವರ್ತಿಗಳಂತೆ ನಿಖರವಾಗಿರಬೇಕು. ಅಂದರೆ, ಹೇರಳವಾಗಿ ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಿ. ಮೊಟ್ಟೆ, ಹಾಲು, ಹಣ್ಣುಗಳು, ಸಿರಿಧಾನ್ಯಗಳು ಸೇರಿದಂತೆ ಎಲ್ಲಾ ಆರೋಗ್ಯಕರ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ಹೀಗೆ ಮಾಡುವುದರಿಂದ ಇಡೀ ದಿನದ ಓಟಕ್ಕೆ ನಿಮ್ಮ ದೇಹ ಸದೃಢವಾಗುತ್ತದೆ.
ಕೆಲಸದ ನಡುವೆ ವಿರಾಮ ತೆಗೆದುಕೊಳ್ಳಿ: ನೀವು ಡೆಸ್ಕ್ ಕೆಲಸವನ್ನು ಮಾಡುತ್ತಿದ್ದರೆ, ನಿಮ್ಮ ಕೆಲಸದ ನಡುವೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು ಮುಖ್ಯ. ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳುವ ಬದಲು, ಪ್ರತಿ ಗಂಟೆಗೆ 5-10 ನಿಮಿಷಗಳ ವಿರಾಮವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿಡುತ್ತದೆ.
ಹೊರಗಿನ ಆಹಾರವನ್ನು ಸೇವಿಸದಿದ್ದರೆ ಒಳಿತು: ನೀವು ಫಿಟ್ ಆಗಿರಲು ಬಯಸಿದರೆ, ಸಾಧ್ಯವಾದಷ್ಟು ಹೊರಗಿನ ಆಹಾರವನ್ನು ತಪ್ಪಿಸಿ. ಹೊರಗಿನ ಆಹಾರ ಸೇವನೆಯು ನಿಮ್ಮ ಸಂಪೂರ್ಣ ಜೀರ್ಣಾಂಗ ವ್ಯವಸ್ಥೆಯನ್ನು ಹಾಳುಮಾಡುತ್ತದೆ, ಇದು ಹಲವು ರೀತಿಯ ಕಾಯಿಲೆಗಳನ್ನು ಆಹ್ವಾನಿಸುತ್ತದೆ. ಮಧ್ಯಾಹ್ನದ ಊಟದಲ್ಲಿ ಹಸಿರು ತರಕಾರಿಗಳನ್ನು ತಿನ್ನುವುದರಿಂದ ನಿಮ್ಮ ಫಿಟ್ನೆಸ್ ಅನ್ನು ಸುಧಾರಿಸಬಹುದು.
ಹೆಚ್ಚು ನೀರು ಕುಡಿಯಿರಿ: ಆಗಾಗ್ಗೆ ನಾವು ನಮ್ಮ ಕೆಲಸದಲ್ಲಿ ಎಷ್ಟು ನಿರತರಾಗುತ್ತೇವೆ ಎಂದರೆ ಬಾಯಾರಿಕೆ ಆಗುತ್ತಿದ್ದರೂ ನೀರು ಕುಡಿಯುವುದನ್ನು ಮುಂದೂಡುತ್ತೇವೆ. ಈ ಅಭ್ಯಾಸವು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವೆಂದು ಸಾಬೀತುಪಡಿಸಬಹುದು. ನಿಮ್ಮ ಈ ಅಭ್ಯಾಸವನ್ನು ಇಂದಿನಿಂದಲೇ ಬದಲಾಯಿಸಿ. ಜೊತೆಗೆ ಊಟಕ್ಕೂ ಮುನ್ನ ಒಂದು ಲೋಟ ನೀರು ಕುಡಿಯುವುದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವಲ್ಲಿಯೂ ಯಶಸ್ವಿಯಾಗಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.