Holi 2023 Special Recipes: ಹೋಳಿ ಹಬ್ಬದ ಮಜ ಇಮ್ಮಡಿಗೊಳಿಸಬೇಕೆ? ಈ ಲೇಖನ ಓದಿ

10 Best Holi Special Recipes: ಭಾರತವನ್ನು ಹಬ್ಬಗಳ ದೇಶವೆಂದು ಕರೆಯಲಾಗುತ್ತದೆ, ಹೋಳಿಹಬ್ಬವಾಗಿರಲಿ ಅಥವಾ ದೀಪಾವಳಿ, ಈದ್ ಅಥವಾ ಬಕ್ರೀದ್, ಈ ಹಬ್ಬಗಳ ಸಂದರ್ಭದಲ್ಲಿ ಮನೆಯಲ್ಲಿ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. 

10 Best Holi Special Recipes: ಭಾರತವನ್ನು ಹಬ್ಬಗಳ ದೇಶವೆಂದು ಕರೆಯಲಾಗುತ್ತದೆ, ಹೋಳಿಹಬ್ಬವಾಗಿರಲಿ ಅಥವಾ ದೀಪಾವಳಿ, ಈದ್ ಅಥವಾ ಬಕ್ರೀದ್, ಈ ಹಬ್ಬಗಳ ಸಂದರ್ಭದಲ್ಲಿ ಮನೆಯಲ್ಲಿ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಎಲ್ಲಾ ಜನರು ಪರಸ್ಪರ ಒಟ್ಟಾಗಿ ಎಲ್ಲಾ ಹಬ್ಬಗಳನ್ನು ಬಹಳ ವಿಜೃಂಭಣೆಯಿಂದ ಮತ್ತು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಉದಾಹರಣೆಗೆ, ಈ ಬಾರಿ ಹೋಳಿಯನ್ನು ಮಾರ್ಚ್ 8 ರಂದು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

 

ಇದನ್ನೂ ಓದಿ-Holi 2023: ಹೋಳಿ ಹಬ್ಬದ ಬಳಿಕ ನಿರ್ಮಾಣಗೊಳ್ಳುತ್ತಿದೆ ಗಜಲಕ್ಷ್ಮಿ ರಾಜಯೋಗ, ಈ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ!

 

ಹೋಳಿ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ದೇಶಾದ್ಯಂತದ  ಜನರು ವಿಶೇಷ ರೀತಿಯ ಖಾದ್ಯ ಪದಾರ್ಥಗಳನ್ನು ತಯಾರಿಸುತ್ತಾರೆ ಇಲ್ಲಿ ನಾವು ನಿಮಗೆ ಹೋಳಿ ಹಬ್ಬಕ್ಕಾಗಿ ತಯಾರಿಸುವ 10 ಅತ್ಯುತ್ತಮ ಖಾದ್ಯ ಪದಾರ್ಥಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ.ಅವುಗಳನ್ನು ನೀವೂ ಕೂಡ ತಯಾರಿಸಿ ನಿಮ್ಮ ಹೋಳಿಹಬ್ಬವನ್ನು ವಿಶೇಷವಾಗಿಸಿ. ಹೋಳಿ ಹಬ್ಬವು ವಿಭಿನ್ನ ರೀತಿಯ ಮೊಜುಗಳಿಂದ ಕೂಡಿರುತ್ತದೆ, ಹೋಳಿಯನ್ನು ನಿಮ್ಮ ಸ್ನೇಹಿತರು, ನಿಕಟ ಸಂಬಂಧಿಗಳು ಮತ್ತು ಕುಟುಂಬದ ಸದಸ್ಯರೊಂದಿಗೆ ಮುಕ್ತವಾಗಿ ಆಡಿ ಮತ್ತು ಹೋಳಿಯ ಈ ವಿಶೇಷ ಖಾದ್ಯವನ್ನು ಮಾಡುವ ಮೂಲಕ ಹೋಳಿಯ ಮೋಜನ್ನು ಇಮ್ಮಡಿಗೊಳಿಸಿ.

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /10

1. ಚಂದ್ರಕಲಾ: ಹೋಳಿ ಹಬ್ಬದ ವಿಶೇಷ ತಿನಿಸುಗಳು ವಿಷಯಕ್ಕೆ ಬಂದರೆ ಅದರಲ್ಲ ಮೊತ್ತಮೊದಲ ಹೆಸರು ಬರುವುದು ಎಂದರೆ ಅದು ಚಂದ್ರಕಲಾ ಸಿಹಿ ತಿಂಡಿ. ಉತ್ತರ ಭಾರದದಲ್ಲಿ ಈ ಸಿಹಿಯನ್ನು ಬಹುತೇಕ ಮನೆಗಳಲ್ಲಿ ತಯಾರಿಸುತ್ತಾರೆ.  

2 /10

2. ದಹಿವಡೆ: ಈ ಪಟ್ಟಿಯಲ್ಲಿ ಬರುವ ಎರಡನೇ ಹೆಸರು ಎಂದರೆ ಅದುವೇ ದಹಿವಡೆ. ಹಸಿರು ಚಟ್ನಿ, ಸಿಹಿ ಹುಣಸೆ ಚಟ್ನಿಯ ಜೊತೆಗೆ ದಹಿ ವಡೆ ಸೇವನೆಯ ಮಜವೇ ವಿಭಿನ್ನವಾಗಿರುತ್ತದೆ.   

3 /10

3. ರಾಜಕಚೌರಿ: ಹೋಳಿ ಹಬ್ಬದ ದಿನ ಮನೆಮನೆಗಳಲ್ಲಿ ಚಾಟ್ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಈ ಚಾಟ್ ಪದಾರ್ಥಗಳಲ್ಲಿ ಬರುವ ಮೊದಲ ಹೆಸರು ಎಂದರೆ ಅದುವೇ ರಾಜಕಚೌರಿ.  

4 /10

4. ಉದ್ದಿನ ಬೇಳೆ ಕಚೋರಿ: ಹೋಳಿ ಹಬ್ಬದ ವಿಶೇಷ ವ್ಯಂಜನಗಳಲ್ಲಿ ಉದ್ದಿನ ಬೇಳೆಯಿಂದ ತಯಾರಿಸಲಾಗುವ ಉದ್ದಿನ ಬೇಳೆ ಕಚೋರಿ ಕೂಡ ಒಂದು. ಇದನ್ನು ಕೂಡ ಹಸಿರು ಚಟ್ನಿ ಮತ್ತು ಸಿಹಿಯಾದ ಹುಣಸೆ ಚಟ್ನಿಯ ಮೂಲಕ ಸೇವಿಸಿ ಮಜಾ ಮಾಡಬಹುದು.  

5 /10

5. ರಬಡಿ ಖೀರ್: ಹೋಳಿಯ ಪವಿತ್ರ ಸಂದರ್ಭದಲ್ಲಿ ನೀವು ಪಾಯಸ ತಯಾರಿಸಲು ಯೋಚಿಸುತ್ತಿದ್ದರೆ, ರಬಡಿ ಖೀರ್ ಅನ್ನು ನೀವು ತಯಾರಿಸಬಹುದು. ಇದರಲ್ಲಿ ರಬಡಿ ಹಾಗೂ ಅಕ್ಕಿಯನ್ನು ಬಳಸಲಾಗುವ ಕಾರಣ ಜಬರ್ದಸ್ತ್ ಟೇಸ್ಟ್ ನೀಡುತ್ತದೆ.  

6 /10

6. ಭಾಂಗ್ ಪಕೋಡ: ಉತ್ತರ ಭಾರತದಲ್ಲಿ ವಿಶೇಷವಾಗಿ ಈ ವ್ಯಂಜನವನ್ನು ತಯಾರಿಸಲಾಗುತ್ತದೆ. ದಕ್ಷಿಣ ಭಾರತದ ಜನರು ವಿಶೇಷ ರೀತಿಯ ಭಜ್ಜಿ ತಯಾರಿಸಿ ಹೋಳಿ ಮಜವನ್ನು ಇಮ್ಮಡಿಗೊಳಿಸಬಹುದು.  

7 /10

7.ಭಾಂಗ್ ಶರಬತ್: ಇದನ್ನು ಕೂಡ ಉತ್ತರ ಭಾರತದಲ್ಲಿ ವಿಶೇಷವಾಗಿ ಹೋಳಿ ಹಬ್ಬದ ದಿನದಂದು ತಯಾರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಬಿಸಿಲಿನ ಬೇಗೆ ಜಾಸ್ತಿ ಇರುವುದರಿಂದ ನೀವು ವಿಶೇಷ ರೀತಿಯ ತಂಪು ಪಾನೀಯವನ್ನು ತಯಾರಿಸಿ ಅದರ ಮಜವನ್ನು ಸವಿಯಬಹುದು.  

8 /10

8. ಶಾಹೀ ಪನೀರ್: ಯಾವುದೇ ಪಾರ್ಟಿ ಅಥವಾ ಹಬ್ಬದ ಸಂದರ್ಭದಲ್ಲಿ ಸುಲಭವಾಗಿ ತಯಾರಿಸಬಹುದಾದ ವ್ಯಂಜನಗಳಲ್ಲಿ ಶಾಹೀಪನೀರ್ ಶಾಮೀಲಾಗಿದೆ. ಹೀಗಿರುವಾಗ ಹೋಳಿ ಹಬ್ಬದ ಮಜಾ ಇಮ್ಮಡಿಗೊಳಿಸಲು ನೀವೂ ಕೂಡ ಮಧ್ಯಾಹ್ನದ ಊಟದಲ್ಲಿ ಶಾಹೀಪನೀರ್ ಆನಂದಿಸಬಹುದು.   

9 /10

9. ಛೋಲಾ-ಭಟುರೆ: ಉತ್ತರ ಭಾರತದಲ್ಲಿ ಈ ವ್ಯಂಜನವನ್ನು ಹೋಳಿ ಸಂದರ್ಭದಲ್ಲಿ ವಿಶೇಷವಾದ ರೀತಿಯಲ್ಲಿ ತಯಾರಿಸಲಾಗುತ್ತದೆ. ದಕ್ಷಿಣ ಭಾರತಕ್ಕೆ ಬಂದರೆ ನೀವು ಕಡಲೆಕಾಳು ಉಸುಳಿ ಮತ್ತು ಪೂರಿ ತಯಾರಿಸಿ ಅದರ ಮಜವನ್ನು ಸವಿಯಬಹುದು.  

10 /10

10. ವೆಜ್ ಬಿರಿಯಾನಿ: ಹಾಗೆ ನೋಡಿದರೆ ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತದ ವಿಶೇಷ ಖಾದ್ಯ ಪದಾರ್ಥಗಳಲ್ಲಿ ಬಿರಿಯಾನಿ ಒಂದು ಕಾಮನ್ ರೆಸಿಪಿಯಾಗಿ ಹೊರಹೊಮ್ಮಿದೆ. ಹೀಗಿರುವಾಗ ಹೋಳಿ ಹಬ್ಬದ ಪವಿತ್ರ ಸಂದರ್ಭದಲ್ಲಿ ನೀವೂ ಕೂಡ ನಿಮ್ಮ ನಿಮ್ಮ ಮನೆಗಳಲ್ಲಿ ವೆಜ್ ಬಿರಿಯಾನಿ ತಯಾರಿಸಿ ಅದರ ಮಜವನ್ನು ಸವಿಯಬಹುದು.