Wall Clock Vastu Tips: ಗೋಡೆಯ ಗಡಿಯಾರದಲ್ಲಿ ಧೂಳು ಸಂಗ್ರಹಗೊಳ್ಳದಂತೆ ನೋಡಿಕೊಳ್ಳಿರಿ. ಕಾಲಕಾಲಕ್ಕೆ ಅದನ್ನು ಸ್ವಚ್ಛಗೊಳಿಸುತ್ತಿರಬೇಕು. ಗಡಿಯಾರವನ್ನು ಮನೆಯ ಪೂರ್ವ, ಉತ್ತರ ಮತ್ತು ಪಶ್ಚಿಮದಲ್ಲಿ ಮಾತ್ರ ಇರಿಸಬೇಕು.
Wall Clock Vastu: ವಾಸ್ತು ಪ್ರಕಾರ ಗೋಡೆಯ ಗಡಿಯಾರವನ್ನು ನೇತುಹಾಕುವುದರಿಂದ ಮನೆಯ ಪ್ರತಿಯೊಂದು ಮೂಲೆಯಲ್ಲಿ ಧನಾತ್ಮಕ ಶಕ್ತಿಯ ನಿರಂತರ ಹರಿವು ಉಂಟಾಗುತ್ತದೆ ಎಂದು ಹೇಳಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಗೋಡೆಯ ಗಡಿಯಾರವನ್ನು ಉತ್ತರ, ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೇತು ಹಾಕುವುದು ಶುಭವೆಂದು ಉಲ್ಲೇಖಿಸಲಾಗಿದೆ. ಆದರೆ ಗಡಿಯಾರಗಳ ವಿಷಯದಲ್ಲಿ ಕೆಲವು ವಾಸ್ತು ಸಲಹೆಗಳನ್ನು ನೀವು ಪಾಲಿಸಬೇಕು. ಕೆಲವು ಗಡಿಯಾರಗಳು ನಿಮ್ಮ ಮನೆಯಲ್ಲಿದ್ದರೆ ನಿಮ್ಮ ಅದೃಷ್ಟವೇ ಕೈಕೊಡಬಹದು. ಹೀಗಾಗಿ ಗಡಿಯಾರಗಳ ಬಗ್ಗೆ ವಾಸ್ತು ತಜ್ಞರು ನೀಡಿರುವ ಸಲಹೆಗಳ ಬಗ್ಗೆ ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಮನೆಯ ಮುಖ್ಯ ಬಾಗಿಲಿನ ಮೇಲೂ ಗಡಿಯಾರವನ್ನು ಇಡಬೇಡಿ. ಮುರಿದ ಅಥವಾ ಒಡೆದ ಗಡಿಯಾರಗಳನ್ನು ಆದಷ್ಟು ಬೇಗ ಸರಿಪಡಿಸಬೇಕು.
ಗಡಿಯಾರ ಕೆಟ್ಟಿದ್ದರೆ ಅದನ್ನು ಮನೆಯಲ್ಲಿ ಇಡಬೇಡಿ. ಗಡಿಯಾರವನ್ನು ಅಪ್ಪಿತಪ್ಪಿಯೂ ಯಾರಿಗೂ ಉಡುಗೊರೆಯಾಗಿ ನೀಡಬಾರದು.
ಗಡಿಯಾರದ ಸಮಯವು ಮುಂದೆ ಅಥವಾ ಹಿಂದೆ ಇದ್ದರೆ ಅದನ್ನು ಸರಿಯಾದ ಸಮಯದೊಂದಿಗೆ ಹೊಂದಿಸಬೇಕು. ಗಡಿಯಾರವನ್ನು ಮುಂದಕ್ಕೆ ಅಥವಾ ಹಿಂದಕ್ಕೆ ಹೊಂದಿಸಬೇಡಿ.
ಗೋಡೆಯ ಗಡಿಯಾರದಲ್ಲಿ ಧೂಳು ಸಂಗ್ರಹಗೊಳ್ಳದಂತೆ ನೋಡಿಕೊಳ್ಳಿರಿ. ಕಾಲಕಾಲಕ್ಕೆ ಅದನ್ನು ಸ್ವಚ್ಛಗೊಳಿಸುತ್ತಿರಬೇಕು. ಗಡಿಯಾರವನ್ನು ಮನೆಯ ಪೂರ್ವ, ಉತ್ತರ ಮತ್ತು ಪಶ್ಚಿಮದಲ್ಲಿ ಮಾತ್ರ ಇರಿಸಬೇಕು.
ಮನೆಯ ಡ್ರಾಯಿಂಗ್ ರೂಮಿನಲ್ಲಿ ಲೋಲಕದ ಗಡಿಯಾರವನ್ನು ಅಳವಡಿಸಬೇಕು. ದುಂಡಗಿನ, ಆಯತಾಕಾರದ ಗಡಿಯಾರಗಳು ಮಂಗಳಕರ ಪರಿಣಾಮಗಳನ್ನು ತರುತ್ತವೆ