Viral News: ಹಣ ಉಳಿಸಲು ಪತಿಯ ಬಟ್ಟೆಯಿಂದ ಪತ್ನಿ ಈ ಕೆಲಸ ಮಾಡಿದಳು..!

ಹಣ ಉಳಿಸಲು ಗೃಹಣಿಯರು ಅದ್ಭುತ ಮಾರ್ಗಗಳನ್ನು ಕಂಡುಕೊಂಡಿರುತ್ತಾರೆ.

ಕಡಿಮೆ ಹಣದಲ್ಲಿ ಸಂಸಾರ ಮತ್ತು ಮನೆ ನಡೆಸುವ ಕಲೆ ಗೃಹಣಿಯರಿಗೆ ಸಿದ್ಧಿಸಿರುತ್ತದೆ. ಹಣ ಉಳಿಸಲು ಅವರು ಅದ್ಭುತ ಮಾರ್ಗಗಳನ್ನು ಕಂಡುಕೊಂಡಿರುತ್ತಾರೆ. ಇದು ಕೆಲವೊಮ್ಮೆ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಆದರೆ ನಾಟಿಂಗ್ಹ್ಯಾಮ್ ನಲ್ಲಿ ವಾಸಿಸುತ್ತಿರುವ ಈ ಮಹಿಳೆ ಹಣ ಉಳಿಸಲು ಮಾಡಿರುವ ಕೆಲಸವನ್ನು ಯಾರಿಂದಲೂ ಊಹಿಸಲೂ ಸಾಧ್ಯವಿಲ್ಲ. ಚಳಿಗಾಲದಲ್ಲಿ ಶಾಪಿಂಗ್(Winter Collection) ಮಾಡುವಾಗ ಈ ಮಹಿಳೆ ತುಂಬಾ ಬುದ್ಧಿವಂತಿಕೆಯಿಂದ 77 ಸಾವಿರ ರೂ.ನಷ್ಟು ಹಣ ಉಳಿಸಿದ್ದಾರೆ. ಅವರು ಮಾಡಿದ್ದಾದರೂ ಏನು ಅಂತೀರಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕಡಿಮೆ ಬೆಲೆಯಲ್ಲಿ ಉತ್ತಮವಾದ ವಸ್ತುಗಳನ್ನು ಖರೀದಿಸಲು ಇಷ್ಟಪಡುವ ಗೃಹಣಿಯರಲ್ಲಿ ಗ್ರೇಸ್ ಸೆರ್ಗುಯಿ ಕೂಡ ಒಬ್ಬರು. ಅವರು ತುಂಬಾ ಬುದ್ಧಿವಂತಿಕೆಯಿಂದ ಈ ವಿಷಯವನ್ನು ಹ್ಯಾಂಡಲ್ ಮಾಡುತ್ತಾರೆ. ಶಾಪಿಂಗ್‌ಗಾಗಿ ಖರ್ಚು ಮಾಡಿದ ಪ್ರತಿ ಪೈಸೆ ಹಣವನ್ನು ಹೇಗೆ ಮರುಪಡೆಯುವುದು ಎಂದು ಅವರಿಗೆ ತಿಳಿದಿದೆ. ಇದಕ್ಕಾಗಿ ಅವರು ವಿಚಿತ್ರವಾದ ಕೆಲಸವನ್ನು ಮಾಡುತ್ತಾರೆ. ತನಗಾಗಿ ಪ್ರತ್ಯೇಕವಾಗಿ ಬಟ್ಟೆಗಳನ್ನು ಖರೀದಿಸದೆ, ಅವರು ಪತಿ ರಯಾನ್ ಕೆನ್ವರ್ಡ್ ಬಟ್ಟೆಗಳನ್ನು ಧರಿಸುತ್ತಾಳೆ ಮತ್ತು ಈ ಮೂಲಕ ಅವಳು ದೊಡ್ಡ ಮಟ್ಟದಲ್ಲಿ ಹಣ ಉಳಿಸುತ್ತಾಳೆ.

2 /5

ದಿ ಸನ್ ನ ವರದಿಯ ಪ್ರಕಾರ, ದಂಪತಿಗಳು ಇತ್ತೀಚೆಗೆ ಚಳಿಗಾಲಕ್ಕಾಗಿ ಶಾಪಿಂಗ್ ಮಾಡಿದ್ದರು. ಅಚ್ಚರಿಯ ವಿಷಯವೆಂದರೆ ಇಬ್ಬರು ಸೇರಿ 77 ಸಾವಿರ ರೂ.ನಷ್ಟು ಹಣ ಉಳಿಸಿದ್ದಾರೆ. ಈ ದಂಪತಿ ಇಬ್ಬರಿಗೂ ಹೊಂದುವಂತಹ ಬಟ್ಟೆಗಳನ್ನೇ ಖರೀದಿಸಿದ್ದಾರೆ.

3 /5

ಗ್ರೇಸ್ ಮತ್ತು ರಯಾನ್ ಯಾವಾಗಲೂ ಇಬ್ಬರೂ ಬಳಸಬಹುದಾದ ವಸ್ತುಗಳನ್ನು ಮಾತ್ರ ಖರೀದಿಸುತ್ತಾರೆ. ಇವುಗಳಲ್ಲಿ ಮುಖ್ಯವಾಗಿ ಬಟ್ಟೆ, ಕನ್ನಡಕ, ಬೆಲ್ಟ್ ಇತ್ಯಾದಿ ಸೇರಿವೆ. ಈ ರೀತಿಯಾಗಿ ಅವರ ಶಾಪಿಂಗ್‌ನ ವೆಚ್ಚವನ್ನು ಉಳಿಸಲಾಗುತ್ತದೆ. ನೀವು ಕೂಡ ಇದನ್ನೇ ಪಾಲಿಸಿ ಅಂತಾ ಸಲಹೆ ನೀಡಿದ್ದಾರೆ.

4 /5

34 ವರ್ಷದ ಗ್ರೇಸ್ ಹೇಳುವ ಪ್ರಕಾರ, ‘ನಾವು ಖರೀದಿಸುವ ಕೆಲವು ಬಟ್ಟೆಗಳು ತುಂಬಾ ದುಬಾರಿಯಾಗಿವೆ. ಆದ್ದರಿಂದ ನಮ್ಮಿಬ್ಬರಿಗೂ ಪ್ರತ್ಯೇಕ ಬಟ್ಟೆಗಳನ್ನು ಖರೀದಿಸುವ ಬದಲು ನಾವು ಇಬ್ಬರ ನಡುವೆ ಒಂದು ಉತ್ಪನ್ನವನ್ನು ಮಾತ್ರ ತೆಗೆದುಕೊಳ್ಳುತ್ತೇವೆ. ಇಬ್ಬರೂ ಅದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬಳಸುತ್ತೇವೆ’ ಅಂತಾ ಹೇಳಿದ್ದಾರೆ.

5 /5

ಈ ದಂಪತಿ ಇಬ್ಬರೂ ಧರಿಸಬಹುದಾದ ಬಟ್ಟೆಗಳನ್ನು ಹುಡುಕಲು ತುಂಬಾ ಕಷ್ಟಪಡುತ್ತಾರೆ. ಗ್ರೇಸ್ ಹೇಳುವ ಪ್ರಕಾರ, ‘ನಮಗೆ ಹೊಂದಾಣಿಕೆಯಾಗುವ ಶರ್ಟ್‌ಗಳನ್ನು ನಾವು ಖರೀದಿಸುತ್ತೇವೆ. ನಾವು ಅವುಗಳನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ಖರೀದಿಸಿದ್ದೇವೆ. ಈ ಕಾರಣದಿಂದಾಗಿ ನಾವು ಡಬಲ್ ಉಳಿತಾಯವನ್ನು ಪಡೆದುಕೊಂಡಿದ್ದೇವೆ. ಕೆಲವು ಬ್ರಾಂಡ್‌ಗಳು ತಮ್ಮ ಉತ್ಪನ್ನಗಳನ್ನು ನೇರವಾಗಿ ಯೂನಿಸೆಕ್ಸ್ ಎಂದು ಕರೆಯದಿದ್ದರೂ, ಅವುಗಳನ್ನು ಹುಡುಕಲು ನಾವು ಕಷ್ಟಪಡಬೇಕು. ಆದರೆ ನೀವು ಮತ್ತು ನಿಮ್ಮ ಸಂಗಾತಿ ಒಂದೇ ಶೈಲಿ ಮತ್ತು ಎತ್ತರವನ್ನು ಹೊಂದಿರುವಾಗ ಬಟ್ಟೆಗಳನ್ನು ಹಂಚಿಕೊಳ್ಳುವಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಭಾವಿಸುತ್ತೇನೆ’ ಅಂತಾ ಹೇಳಿದ್ದಾರೆ.