ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 4 ರಾಶಿಯ ಜನರು ಪ್ರತಿ ಕೆಲಸವನ್ನು ತಮ್ಮ ಇಚ್ಛೆಗೆ ಅನುಗುಣವಾಗಿಯೇ ಮಾಡುತ್ತಾರೆ.
ನವದೆಹಲಿ : ಜ್ಯೋತಿಷ್ಯದಲ್ಲಿ, ಎಲ್ಲಾ 12 ರಾಶಿಗಳ ಜನರ ಸ್ವಭಾವದ ಕೆಲವು ಗುಣಲಕ್ಷಣಗಳನ್ನು ಹೇಳಲಾಗಿದೆ. ರಾಶಿಗನುಗುನವಾಗಿ ವ್ಯಕ್ತಿಯ ಸಾಮರ್ಥ್ಯಗಳು ಮತ್ತು ನ್ಯೂನತೆಗಳನ್ನು ಕೂಡಾ ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 4 ರಾಶಿಯ ಜನರು ಪ್ರತಿ ಕೆಲಸವನ್ನು ತಮ್ಮ ಇಚ್ಛೆಗೆ ಅನುಗುಣವಾಗಿಯೇ ಮಾಡುತ್ತಾರೆ. ತಮ್ಮ ಮನಸ್ಸಿಗೆ ಯಾವುದು ಇಷ್ಟವೋ ಹಾಗೆಯೇ ನಡೆದುಕೊಳ್ಳುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕರ್ಕ ರಾಶಿಯ ಜನರು ನಿರ್ಭೀತರು. ಅವರು ತಮ್ಮ ಪ್ರೀತಿಪಾತ್ರರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಮತ್ತು ಅವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ. ಆದರೆ ಈ ಜನರಿಗೆ ಕೆಲವು ಕೆಲಸ ಮಾಡುವಂತೆ ಹೇಳಿದಾಗ ಮಾತ್ರ ಸಿಟ್ಟುಗೊಳ್ಳುತ್ತಾರೆ. ಅವರು ತಮ್ಮ ಇಷ್ಟದಂತೆಯೇ ನಡೆದುಕೊಳ್ಳುತ್ತಾರೆ.
ಈ ರಾಶಿಚಕ್ರದ ಜನರು ಬಲವಾದ ಆತ್ಮವಿಶ್ವಾಸವುಲ್ಲವರು ಮಾತ್ರವಲ್ಲ ಹಠಮಾರಿ ಸ್ವಭಾವದವರು. ಈ ರಾಶಿಯವರು ಕೂಡಾ ಉತ್ತಮ ನಾಯಕರಾಗಿರುತ್ತಾರೆ. ಸ್ವಂತ ಇಚ್ಛೆಯಂತೆಯೇ ನಡೆದುಕೊಳ್ಳುತ್ತಾರೆ. ಅವರ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುವುದು ಮೂರ್ಖತನ. ಅವರು ಏನು ಮಾಡಬೇಕೋ ಅದನ್ನೇ ಮಾಡುತ್ತಾರೆ. ಕೆಲವೊಮ್ಮೆ ತಮ್ಮ ಸ್ವೇಚ್ಛಾಚಾರದಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಶನಿಯು ಮಕರ ರಾಶಿಯ ಜನರ ಮೇಲೆ ಪ್ರಭಾವ ಬೀರುತ್ತಾನೆ. ಅವರು ಪ್ರಾಮಾಣಿಕರು, ಶ್ರಮಜೀವಿಗಳು ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾರೆ. ಇದಲ್ಲದೆ, ಅವರು ಹಠಮಾರಿ ಮತ್ತು ಸ್ವಾಭಿಮಾನಿಗಳೂ ಆಗಿರುತ್ತಾರೆ. ಮಾಡಲು ನಿರ್ಧರಿಸಿದ ಕೆಲಸವನ್ನು ಮಾಡಿಯೇ ತೀರುತ್ತಾರೆ.
ಮೀನ ರಾಶಿಯ ಜನರು ತುಂಬಾ ನಿರ್ಭೀತರು ಮತ್ತು ಪ್ರತಿ ಸವಾಲನ್ನು ಎದುರಿಸಲು ಧೈರ್ಯಶಾಲಿಗಳು. ಅವರು ಎಂದಿಗೂ ಯಾರಿಗೂ ತಲೆಬಾಗುವುದಿಲ್ಲ. ಅವರು ತಮ್ಮ ಸ್ವಂತ ನಿಯಮಗಳ ಮೇಲೆ ಜೀವನವನ್ನು ನಡೆಸುತ್ತಾರೆ. ತಮ್ಮ ಸ್ವಾಭಿಮಾನದ ಮೇಲೆ ರಾಜಿ ಮಾಡಿಕೊಳ್ಳುವುದಿಲ್ಲ.