ಮೂರು ವಾರಗಳವರೆಗೆ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲು ಹರಿಸುತ್ತಾನೆ ಧನಕಾರಕ ಶುಕ್ರ

 
 ಶುಕ್ರನ ರಾಶಿ ಬದಲಾವಣೆ ಮೂರು ರಾಶಿಯವರ ಅದೃಷ್ಟದ  ಬಾಗಿಲು ತೆರೆದಿದೆ.

ಬೆಂಗಳೂರು : ಶುಕ್ರನು ಸಂಪತ್ತು, ಐಷಾರಾಮಿ, ಪ್ರೀತಿ, ಸಂತೋಷ ಮತ್ತು ಸೌಂದರ್ಯದ ಅಂಶವಾಗಿದೆ. ಮಾರ್ಚ್ 12 ರಂದು, ಶುಕ್ರ ಗ್ರಹವು ಮೇಷ ರಾಶಿಯನ್ನು ಪ್ರವೇಶಿಸಿದೆ. ಇನ್ನು ಏಪ್ರಿಲ್ 6 ರವರೆಗೆ ಇದೇ ರಾಶಿಯಲ್ಲಿ ಇರಲಿದೆ. ಶುಕ್ರನ ರಾಶಿ ಬದಲಾವಣೆ ಮೂರು ರಾಶಿಯವರ ಅದೃಷ್ಟದ  ಬಾಗಿಲು ತೆರೆಯಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ರಾಶಿ ಪರಿವರ್ತನೆ ಮಾಡಿಕೊಂಡಿರುವ ಶುಕ್ರ ಏಪ್ರಿಲ್ 6 ರವರೆಗೆ  ಮೇಷ  ರಾಶಿಯಲ್ಲಿ ಇರಲಿದೆ. ಶುಕ್ರನ ರಾಶಿ ಬದಲಾವಣೆ ಮೂರು ರಾಶಿಯವರ ಅದೃಷ್ಟದ  ಬಾಗಿಲು ತೆರೆಯಲಿದೆ. 

2 /4

ಮೇಷ ರಾಶಿ : ಶುಕ್ರನ ಸಂಕ್ರಮಣವು ಮೇಷ ರಾಶಿಯವರಿಗೆ ಶುಭ ಫಲಿತಾಂಶಗಳನ್ನೇ ನೀಡಲಿದೆ. ಮೇಷ ರಾಶಿಯಲ್ಲಿ ರಾಹು ಮತ್ತು ಶುಕ್ರನ ಸಂಯೋಗ  ಸೃಷ್ಟಿಯಾಗುತ್ತಿರುವುದು ಈ ರಾಶಿಯವರಿಗೆ ಮಂಗಳಕರವಾಗಿರಲಿದೆ. ಜೀವನ ಸಂಗಾತಿಯಿಂದ ಸಂತೋಷ ಸಿಗಲಿದೆ. ವ್ಯಾಪಾರದಲ್ಲಿ ಲಾಭ ಹೆಚ್ಚಳವಾಗುವ ಮೂಲಕ ಆದಾಯ ಕೂಡಾ ಹೆಚ್ಚಲಿದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಉದ್ಯೋಗಿಗಳಿಗೂ ಸಮಯ ಉತ್ತಮವಾಗಿದೆ.  

3 /4

ಮಿಥುನ ರಾಶಿ : ಶುಕ್ರ ಸಂಕ್ರಮಣವು ಮಿಥುನ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ವಿಶೇಷವಾಗಿ ಹಣಕಾಸಿನ ವಿಷಯದಲ್ಲಿ ಪರಿಸ್ಥಿತಿ ಸುಧಾರಿಸಲಿದೆ. ವಿದೇಶದಿಂದ ಧನ ಲಾಭವಾಗಲಿದೆ. ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಪ್ರೇಮ ಜೀವನದಲ್ಲಿಯೂ ಸಂಗಾತಿಗಳ ನಡುವೆ ಪ್ರೀತಿ ಹೆಚ್ಚಾಗುತ್ತದೆ.  ಮನೆಯಲ್ಲಿ ಧಾರ್ಮಿಕ ಅಥವಾ ಶುಭ ಕಾರ್ಯಗಳು ನಡೆಯಬಹುದು. 

4 /4

ಮಕರ ರಾಶಿ : ಶುಕ್ರನ ರಾಶಿ ಪರಿವರ್ತನೆ ಮಕರ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡಲಿದೆ.  ಶುಕ್ರನ ಸಂಕ್ರಮಣದಿಂದ ರೂಪುಗೊಂಡ ಕೇಂದ್ರ ತ್ರಿಕೋನ ರಾಜಯೋಗ ಮಕರ ರಾಶಿಯವರ ಅದೃಷ್ಟ ಬೆಳಗಲಿದೆ.  ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಪ್ರಗತಿಯಾಗಲಿದೆ. ಜೀವನದಲ್ಲಿ ನೆಮ್ಮದಿ ಸಂತೋಷ ಹೆಚ್ಚಾಗುತ್ತವೆ. ಆಸ್ತಿ ಖರೀದಿಗೆ ಅವಕಾಶವಿರುವುದು. ಹೊಸ ಕಾರು ಖರೀದಿಸುವ ಸಾಧ್ಯತೆಯೂ ಇದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)