ಕನ್ಯಾ ರಾಶಿಗೆ ಶುಕ್ರನ ಪ್ರವೇಶ: ಸೆಪ್ಟೆಂಬರ್ 24ರಿಂದ ಈ ರಾಶಿಯವರಿಗೆ ಸುವರ್ಣ ದಿನಗಳು ಆರಂಭ

ಶುಕ್ರ ರಾಶಿ ಪರಿವರ್ತನೆಯ ಪರಿಣಾಮ: ಸೆಪ್ಟೆಂಬರ್ 24 ರಂದು, ಶುಕ್ರವು ಕನ್ಯಾರಾಶಿಗೆ ಪ್ರವೇಶಿಸುತ್ತಿದ್ದಾನೆ, ಇದು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರಲಿದೆ. ಆದಾಗ್ಯೂ, ಶುಕ್ರನ ಸಂಕ್ರಮವು ಮೂರು ರಾಶಿಚಕ್ರ ಚಿಹ್ನೆಗಳಿಗೆ ಸುವರ್ಣ ದಿನಗಳನ್ನು ತರಲಿದೆ. 

Shukra Gochar Good Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರನನ್ನು ಸಂತೋಷ, ವೈಭವ, ಸೌಂದರ್ಯ, ಆನಂದ-ಐಷಾರಾಮಿ ಜೀವನವನ್ನು ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. ಸೆಪ್ಟೆಂಬರ್ 24 ರಂದು, ಶುಕ್ರವು ಕನ್ಯಾರಾಶಿಗೆ ಪ್ರವೇಶಿಸುತ್ತಿದ್ದಾನೆ, ಇದು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರಲಿದೆ. ಆದಾಗ್ಯೂ, ಶುಕ್ರನ ಸಂಕ್ರಮವು ಮೂರು ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತರಲಿದ್ದು ಅವರ ಅದೃಷ್ಟವನ್ನೇ ಬದಲಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಸೆಪ್ಟೆಂಬರ್ 24 ರಂದು ಬೆಳಿಗ್ಗೆ 8.51 ರ ಸುಮಾರಿಗೆ ಕನ್ಯಾರಾಶಿಯಲ್ಲಿ ಶುಕ್ರ ಸಂಕ್ರಮಣ ನಡೆಯುತ್ತಿದೆ. ಶುಕ್ರನು ಕನ್ಯಾರಾಶಿಗೆ ಪ್ರವೇಶಿಸಿದ ನಂತರ, ಈಗಾಗಲೇ ಕನ್ಯಾ ರಾಶಿಯಲ್ಲಿರುವ ಸೂರ್ಯ ಮತ್ತು ವಕ್ರಿ ಬುಧನೊಂದಿಗೆ ಯುತಿ ಉಂಟಾಗಲಿದೆ. ಹಾಗಾದರೆ ಕನ್ಯಾರಾಶಿಯಲ್ಲಿ ಶುಕ್ರನ ಸಂಚಾರದಿಂದ ಯಾವ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ...

2 /4

ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹವೇ ಆಗಿದ್ದು, ಕನ್ಯಾರಾಶಿಗೆ ಶುಕ್ರ ಪ್ರವೇಶದ ನಂತರ ವೃಷಭ ರಾಶಿಯವರಿಗೆ ಸಕಲ ಇಷ್ಟಾರ್ಥಗಳು ನೆರವೇರುತ್ತವೆ. ಇದಲ್ಲದೆ, ಸಮಾಜದಲ್ಲಿ ಗೌರವ  ಹೆಚ್ಚಾಗುತ್ತವೆ. ಹೂಡಿಕೆಗಳ ಮೇಲೆ ಉತ್ತಮ ಲಾಭ ಪಡೆಯಬಹುದು. ಇದಲ್ಲದೇ ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಲಾಭ ಬರುವ ಸಾಧ್ಯತೆ ಇದೆ.

3 /4

ಕನ್ಯಾರಾಶಿಗೆ ಶುಕ್ರನ ಪ್ರವೇಶದಿಂದ ಮಿಥುನ ರಾಶಿಯ ಅದೃಷ್ಟವು ಮೇಲುಗೈ ಸಾಧಿಸುತ್ತದೆ ಮತ್ತು ಆದಾಯವು ಹೆಚ್ಚಾಗಬಹುದು. ಮಿಥುನ ರಾಶಿಯ ಜನರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದರೊಂದಿಗೆ, ವೈವಾಹಿಕ ಜೀವನವೂ ಸಂತೋಷವಾಗಿರಲಿದೆ. ಉದ್ಯೋಗಿಗಳಿಗೆ ಬಡ್ತಿ ಯೋಗವಿದೆ. ಅಲ್ಲದೆ, ಮಿಥುನ ರಾಶಿಯವರಿಗೆ ಈ ಸಂದರ್ಭದಲ್ಲಿ ಹಠಾತ್ ಧನ ಯೋಗವೂ ಇದೆ. ಮನೆ-ವಾಹನ ಖರೀದಿ ಯೋಗವೂ ಇದೆ. 

4 /4

ಕನ್ಯಾ ರಾಶಿಯವರಿಗೆ  ಸೆಪ್ಟೆಂಬರ್ 24ರ ನಂತರ ಸುವರ್ಣ ದಿನಗಳು ಆರಂಭವಾಗಲಿವೆ.   ಶುಕ್ರ ಸಂಕ್ರಮವು ತುಂಬಾ ಚೆನ್ನಾಗಿರಲಿದೆ. ನೀವು ಪ್ರತಿಯೊಂದು ವಿಷಯದಲ್ಲೂ ಗೆಲುವು ಸಾಧಿಸುತ್ತೀರಿ. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಕನ್ಯಾ ರಾಶಿಯ ಜನರು ತಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ಸಾಧಿಸುತ್ತಾರೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.