Shukra Gochar: ವೃಶ್ಚಿಕ ರಾಶಿಗೆ ಶುಕ್ರನ ಪ್ರವೇಶ- ಮೂರು ರಾಶಿಯವರಿಗೆ ರಾಜ ಯೋಗ

Shukra Gochar 2023: ಸಂಪತ್ತು-ಐಷಾರಾಮಿ ಜೀವನಕಾರಕನಾದ ಶುಕ್ರನು ಈ ತಿಂಗಳಾಂತ್ಯದಲ್ಲಿ ರಾಶಿ ಪರಿವರ್ತನೆ ಹೊಂದಿ ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಜ್ಯೋತಿಷ್ಯ ಶಾಸ್ತ್ರದಲ್ಲಿ, ಅತ್ಯಂತ ಮಂಗಳಕರ ಗ್ರಹಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಶುಕ್ರ ಗ್ರಹವನ್ನು ಸಂಪತ್ತು, ವೈಭವ ಮತ್ತು ಐಶ್ವರ್ಯವನ್ನು ಕರುಣಿಸುವ ಗ್ರಹ ಎಂದು ನಂಬಲಾಗಿದೆ. 

2 /8

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯ ರಾಜನಂತೆ ಜೀವನ ಸಾಗಿಸುತ್ತಾನೆ. ಅವರ ಜೀವನದಲ್ಲಿ ಎಂದಿಗೂ ಸುಖ-ಸಂಪತ್ತಿಗೆ ಕೊರತೆಯೇ ಇರುವುದಿಲ್ಲ ಎಂದು ಹೇಳಲಾಗುತ್ತದೆ.

3 /8

ಇದೀಗ ಈ ತಿಂಗಳ ಅಂತ್ಯದಲ್ಲಿ ಎಂದರೆ ನವೆಂಬರ್ 30, 2023ರಂದು ಶುಕ್ರನು ರಾಶಿ ಪರಿವರ್ತನೆ ಹೊಂದಿ ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ. 

4 /8

ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಚಾರವು ದ್ವಾದಶ ರಾಶಿಯವರ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. 

5 /8

ಆದಾಗ್ಯೂ, ಈ ತಿಂಗಳಾಂತ್ಯದಲ್ಲಿ ಶುಕ್ರ ರಾಶಿ ಪರಿವರ್ತನೆಯು ಮೂರು ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದ್ದು, ಅಪಾರ ಧನ-ಸಂಪತ್ತನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. ಈ ಅದೃಷ್ಟದ ರಾಶಿಗಳು ಯಾವುವೆಂದರೆ... 

6 /8

ತುಲಾ ರಾಶಿಯ ಅಧಿಪತಿ ಗ್ರಹವೂ ಆಗಿರುವ ಶುಕ್ರನಾ ರಾಶಿ ಪರಿವರ್ತನೆಯು ತುಲಾ ರಾಶಿಯವರಿಗೆ ದಿಢೀರ್ ಧನಲಾಭವನ್ನು ನೀಡಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಸುಖ-ದಾಂಪತ್ಯ ಜೀವನವನ್ನು ಅನುಭವಿಸುವಿರಿ. 

7 /8

ಶುಕ್ರನ ಸಂಚಾರದಲ್ಲಿನ ಬದಲಾವನೆಯು ಮಕರ ರಾಶಿಯವರಿಗೆ ಬಂಪರ್ ಧನಲಾಭವನ್ನು ನೀಡಲಿದೆ. ಇದು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಲಿದ್ದು ಹೊಸ ಆಸ್ತಿ-ವಾಹನ ಖರೀದಿ ಯೋಗವೂ ಇದೆ. 

8 /8

ಶುಕ್ರ ರಾಶಿ ಬದಲಾವಣೆಯಿಂದಾಗಿ ಮೀನ ರಾಶಿಯವರ ಅದೃಷ್ಟವೇ ಬದಲಾಗಲಿದೆ. ವಿದೇಶ ಪ್ರವಾಸ ಸಾಧ್ಯತೆ ಇದ್ದು, ಇದರಿಂದ ಆದಾಯದಲ್ಲಿ ಹೆಚ್ಚಳವನ್ನು ನಿರೀಕ್ಷಿಸಬಹುದು. ಮಾತ್ರವಲ್ಲ, ಸಮಾಜದಲ್ಲಿ ಕೀರ್ತಿ, ಗೌರವವೂ ಹೆಚ್ಚಾಗಲಿದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.