Vastu Tips: ಮನೆಯಲ್ಲಿ ಸಮೃದ್ಧಿ ಮತ್ತು ನೆಮ್ಮದಿ ನೆಲೆಸಲು ಗೃಹವಾಸ್ತು ಹೀಗಿರಬೇಕು!

ವಾಸ್ತು ಶಾಸ್ತ್ರದಲ್ಲಿ ಎಲ್ಲಾ ರೀತಿಯ ವಾಸ್ತು ದೋಷ ತೊಡೆದುಹಾಕಲು ಪರಿಣಾಮಕಾರಿ ಕ್ರಮಗಳನ್ನು ತಿಳಿಸಲಾಗಿದೆ.

ಮನೆಯಲ್ಲಿ ಸುಖ-ಶಾಂತಿ ಇರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ವಾಸ್ತು ದೋಷದಿಂದ ಇದು ಸಾಧ್ಯವಾಗುವುದಿಲ್ಲ. ಮನೆಯಲ್ಲಿ ಆರ್ಥಿಕ ಸಮೃದ್ಧಿಯಾಗಬೇಕೆಂದರೆ ಗೃಹ ವಾಸ್ತು ಉತ್ತಮವಾಗಿರಬೇಕು. ವಾಸ್ತು ಶಾಸ್ತ್ರದಲ್ಲಿ ಎಲ್ಲಾ ರೀತಿಯ ವಾಸ್ತು ದೋಷ ತೊಡೆದುಹಾಕಲು ಪರಿಣಾಮಕಾರಿ ಕ್ರಮಗಳನ್ನು ತಿಳಿಸಲಾಗಿದೆ. ನಿಮ್ಮ ಮನೆಯಲ್ಲಿ ಸಮೃದ್ಧಿ ಮತ್ತು ನೆಮ್ಮದಿ ನೆಲೆಸಬೇಕೆಂದರೆ ವಾಸ್ತು ಸೂಕ್ತವಾಗಿರಬೇಕು. ಮನೆಯಲ್ಲಿನ ಅನೇಕ ವಾಸ್ತುದೋಷಗಳನ್ನು ಹೋಗಲಾಡಿಸುವ ಕೆಲವು ಪರಿಣಾಮಕಾರಿ ಪರಿಹಾಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಮನೆ ಕಟ್ಟುವಾಗ ಮತ್ತು ಕೊಳ್ಳುವಾಗ ಪ್ರತಿ ಕೋಣೆಯಲ್ಲಿಯೂ ಸೂರ್ಯನ ಬೆಳಕು ಬರುತ್ತಿದೆಯೇ ಎಂಬುದನ್ನು ಗಮನಿಸಬೇಕು. ಇದರಿಂದ ಮನೆಯಲ್ಲಿ ಯಾವುದೇ ನಕಾರಾತ್ಮಕತೆ ಇರುವುದಿಲ್ಲ ಮತ್ತು ಇಂತಹ ಮನೆಗಳಲ್ಲಿ ಜನರು ಪರಸ್ಪರ ಪ್ರೀತಿಯಿಂದ ಬದುಕುತ್ತಾರೆ.

2 /5

ನಿಮ್ಮ ಮನೆಯಲ್ಲಿನ ಬೆಡ್ ಬಗ್ಗೆ 2 ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದು ನಿಮ್ಮ ಬೆಡ್ ಲೋಹದಿಂದ ಮಾಡಿರಬಾರದು. ಮರದ ಬೆಡ್ ಮೇಲೆ ಮಲಗುವುದು ಶುಭ. ತೇಗ ಅಥವಾ ರೋಸ್ ವುಡ್ ಮರದಿಂದ ಬೆಡ್ ಮಾಡಿದ್ದರೆ ತುಂಬಾ ಒಳ್ಳೆಯದು. ಇದಲ್ಲದೆ ಗಂಡ ಮತ್ತು ಹೆಂಡತಿ ಅಂತಹ ಬೆಡ್ ಮೇಲೆ ಮಲಗಬೇಕು. ಅದರ ಮೇಲೆ ಕೇವಲ ಒಂದು ಹಾಸಿಗೆ ಮಾತ್ರ ಹಾಕಿರಬೇಕು.   

3 /5

ನಿಮ್ಮ ಮನೆಯಲ್ಲಿ ಊಟದ ಕೋಣೆ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಇದು ಸಾಧ್ಯವಾಗದಿದ್ದರೆ ಡೈನಿಂಗ್ ಟೇಬಲ್ ಅನ್ನು ಆಗ್ನೇಯ ದಿಕ್ಕಿನಲ್ಲಿಯೂ ಇಡಬಹುದು. ಇದು ಕುಟುಂಬದಲ್ಲಿ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. 

4 /5

ಮನೆಯ ಯಾವುದೇ ಗೋಡೆಯಲ್ಲಿ ಬಿರುಕು ಕಂಡುಬಂದರೆ ತಕ್ಷಣವೇ ಅದನ್ನು ಸರಿಪಡಿಸಿ. ಇದು ಮನೆಯಲ್ಲಿ ಅಶಾಂತಿ ಮತ್ತು ಅಶುಭ ಫಲಿತಾಂಶಗಳನ್ನು ಉಂಟುಮಾಡುತ್ತದೆ.  

5 /5

ಮನೆಯಲ್ಲಿ ಪದೇ ಪದೇ ಜಗಳ ನಡೆಯುತ್ತಿದ್ದರೆ ತುಳಸಿ ಗಿಡವನ್ನು ಮನೆಯ ಉತ್ತರ ದಿಕ್ಕಿಗೆ ನೆಡಿ. ಸಂಜೆ ಅದರ ಅಡಿಯಲ್ಲಿ ದೀಪವನ್ನು ಹಚ್ಚಿ ಪೂಜಿಸುವುದರಿಂದ ಕೆಲವೇ ದಿನಗಳಲ್ಲಿ ನಿಮಗೆ ವ್ಯತ್ಯಾಸವು ಗೋಚರಿಸುತ್ತದೆ. (ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. Zee News ಇದನ್ನು ದೃಢಪಡಿಸುವುದಿಲ್ಲ.)