Vastu Tips: ಮನೆಯ ಮುಖ್ಯ ದ್ವಾರಕ್ಕಾಗಿ ಇಲ್ಲಿದೆ ಉಪಯುಕ್ತ ವಾಸ್ತು ಸಲಹೆ

ಮನೆಯ ಮುಖ್ಯ ದ್ವಾರದ ವಾಸ್ತು ಸಲಹೆಗಳನ್ನು ಪಾಲಿಸುವುದರಿಂದ ನಿಮಗೆ ಅನೇಕ ರೀತಿಯ ಪ್ರಯೋಜನಗಳು ಲಭಿಸುತ್ತದೆ.

ನವದೆಹಲಿ: ವಾಸ್ತುಶಾಸ್ತ್ರದಲ್ಲಿ ಅನೇಕ ವಿಷಯಗಳ ಬಗ್ಗೆ ತಿಳಿಸಲಾಗಿದೆ. ನಿಮ್ಮ ಮನೆಯ ಮುಖ್ಯ ದ್ವಾರದ ವಾಸ್ತು ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಈ ಸಲಹೆಗಳನ್ನು ಪಾಲಿಸುವುದರಿಂದ ಮನೆಯ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ ಮತ್ತು ಧನಾತ್ಮಕ ಶಕ್ತಿಯ ಸಂವಹನವನ್ನು ಹೆಚ್ಚಿಸುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವಾಸ್ತುಶಾಸ್ತ್ರದಲ್ಲಿ ಮನೆಯ ಮುಖ್ಯ ಬಾಗಿಲಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಮನೆಯ ಮುಖ್ಯ ದ್ವಾರದಿಂದ ದುಷ್ಟ ಶಕ್ತಿಗಳು ಮನೆಗೆ ಪ್ರವೇಶಿಸುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಈ ಕಾರಣದಿಂದ ಮನೆಯಲ್ಲಿ ನಕಾರಾತ್ಮಕತೆ ನೆಲೆಸದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನೀವು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.

2 /5

ಮನೆಯ ಮುಂದೆ ಯಾವುದೇ ದೇವಸ್ಥಾನ, ಕಂಬ ಅಥವಾ ಕಟ್ಟಡ ಇರಬಾರದು. ಇವುಗಳಲ್ಲಿ ಯಾವುದಾದರ ನೆರಳು ಮುಖ್ಯ ದ್ವಾರದ ಮೇಲೆ ಬಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸಲು ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಕುಂಕುಮ ಮತ್ತು ಅರಿಶಿನದ ದ್ರಾವಣದೊಂದಿಗೆ ಸ್ವಸ್ತಿಕ ಅಥವಾ ಓಂ ಚಿಹ್ನೆಯನ್ನು ರಚಿಸಿರಿ.

3 /5

ಮನೆಯ ಮುಖ್ಯ ಬಾಗಿಲು ಮನೆಯ ಒಳಭಾಗಕ್ಕೆ ತೆರೆದುಕೊಳ್ಳುವಂತಿರಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗಿ ಮನೆಯೊಳಗೆ ಶಾಂತಿ ನೆಲೆಸುತ್ತದೆ.

4 /5

ಒಡೆದ ಗಾಜಿನ ವಸ್ತುಗಳು, ಜಂಕ್ ಇತ್ಯಾದಿಗಳನ್ನು ಮನೆಯ ಮುಖ್ಯ ಬಾಗಿಲಿನ ಬಳಿ ಇಡಬೇಡಿ. ಈ ರೀತಿ ಮಾಡಿದರೆ ಅದು ಮನೆಯ ಸದಸ್ಯರ ಪ್ರಗತಿ ಮತ್ತು ಸಂಪತ್ತಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ ಇದರಿಂದ ನಿಮಗೆ ಹಣದ ನಷ್ಟವಾಗುತ್ತದೆ.

5 /5

ಮನೆಯ ಮುಖ್ಯದ್ವಾರವು ಅದೃಷ್ಟದೊಂದಿಗೆ ಸಂಪರ್ಕ ಹೊಂದಿದೆ ಎಂದು ವಾಸ್ತುತಜ್ಞರು ಹೇಳುತ್ತಾರೆ. ವಾಸ್ತು ಪ್ರಕಾರ ಮನೆಯ ಮುಖ್ಯ ಬಾಗಿಲು ತೆರೆಯುವಾಗ ಯಾವುದೇ ಶಬ್ದ ಬರಬಾರದು. ಅದೇ ರೀತಿ ಬಾಗಿಲು ನೆಲಕ್ಕೆ ತಾಗಿರಬಾರದು. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ, ಇದು ಮನೆಗೆ ಅಶುಭವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಗಿಲಿಗೆ ಎಣ್ಣೆಯನ್ನು ಹಚ್ಚಿ ಸರಿಪಡಿಸಬೇಕು.