Avoid These Things In Bed: ವಾಸ್ತು ಶಾಸ್ತ್ರದಲ್ಲಿ ನಮ್ಮ ಶಯನ ಕಕ್ಷೆಯಲ್ಲಿರುವ ಹಾಸಿಗೆಗೆ ಸಂಬಂಧಿಸಿದಂತೆ ಹಲವು ಸಂಗತಿಗಳನ್ನು ಉಲ್ಲೇಖಿಸಲಾಗಿದ್ದು, ಅವು ಮನೆಯಲ್ಲಿ ವಾಸ್ತು ದೋಷಗಳನ್ನು ಉಂಟುಮಾಡುತ್ತವೆ.
Avoid These Things In Bed: ವಾಸ್ತು ಶಾಸ್ತ್ರದಲ್ಲಿ ನಮ್ಮ ಶಯನ ಕಕ್ಷೆಯಲ್ಲಿರುವ ಹಾಸಿಗೆಗೆ ಸಂಬಂಧಿಸಿದಂತೆ ಹಲವು ಸಂಗತಿಗಳನ್ನು ಉಲ್ಲೇಖಿಸಲಾಗಿದ್ದು, ಅವು ಮನೆಯಲ್ಲಿ ವಾಸ್ತು ದೋಷಗಳನ್ನು ಉಂಟುಮಾಡುತ್ತವೆ. ಬೆಡ್ ರೂಮಿನಲ್ಲಿ ಇಟ್ಟಿರುವ ಬೆಡ್ ಒಳಗಿರುವ ಖಾಲಿ ಜಾಗದಲ್ಲಿ ಅನೇಕ ಬಾರಿ ಬೇರೆ ಏನೇನೋ ಸಾಮಾನುಗಳನ್ನು ನಾವು ಇರಿಸುತೇವೆ. ಆದರೆ ವಾಸ್ತು ಶಾಸ್ತ್ರದಲ್ಲಿ ಅದಕ್ಕೂ ಕೆಲವು ನಿಯಮಗಳನ್ನು ನೀಡಲಾಗಿದೆ. ಕೆಲ ವಸ್ತುಗಳನ್ನು ಹಾಸಿಗೆಯಲ್ಲಿ ಇಡುವುದರಿಂದ, ಒಬ್ಬ ವ್ಯಕ್ತಿಯು ಬಡತನವನ್ನು ಎದುರಿಸಬೇಕಾಗಬಹುದು.
ಇದನ್ನೂ ಓದಿ-Shani Auspicious Effect: ಶನಿಯ ಶುಭ ದೆಸೆ ಇದ್ದರೆ ಜೀವನದಲ್ಲಿ ಏನೆಲ್ಲಾ ಸಿಗುತ್ತದೆ ಗೊತ್ತಾ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಧಾರ್ಮಿಕ ಪುಸ್ತಕಗಳು, ಧರ್ಮಗ್ರಂಥಗಳು ಇತ್ಯಾದಿಗಳನ್ನು ನೀವು ಮಲಗುವ ಹಾಸಿಗೆಯಲ್ಲಿ ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಮಾಡುವುದರಿಂದ ನೀವು ಪಾಪದಲ್ಲಿ ಪಾಲುದಾರರಾಗುತ್ತೀರಿ. ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳು, ಉಪಕರಣಗಳು ಮತ್ತು ಇತರ ವಿಷಯಗಳನ್ನು ಧರ್ಮಗ್ರಂಥಗಳಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಮತ್ತು ಮಲಗುವ ಹಾಸಿಗೆ ವಾಸ್ತು ಪ್ರಕಾರ ಅಶುದ್ಧವಾಗಿದೆ. ಇದು ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಕಹಿಯನ್ನು ತರುತ್ತದೆ.
2. ಹಿಂದೂ ಧರ್ಮದಲ್ಲಿ, ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅನೇಕ ಬಾರಿ ಜನರು ಒಂದೇ ಬಾರಿಗೆ ಅನೇಕ ಪೊರಕೆಗಳನ್ನು ಖರೀದಿಸುತ್ತಾರೆ ಮತ್ತು ಅವುಗಳನ್ನು ಖಾಲಿ ಹಾಸಿಗೆಯ ಮೇಲೆ ಅಥವಾ ಹಾಸಿಗೆಯ ಕೆಳಗೆ ಇರಿಸುತ್ತಾರೆ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಂಡು ಅಂತಹ ವ್ಯಕ್ತಿಯ ಮನೆಯಿಂದ ಹೊರಟು ಹೋಗುತ್ತಾಳೆ. ಇದರಿಂದಾಗಿ ವ್ಯಕ್ತಿ ಹಣದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
3. ಸಾಮಾನ್ಯವಾಗಿ ಅನೇಕ ಜನರು ಮನೆಯ ವಸ್ತುಗಳನ್ನು ಹಾಸಿಗೆಯೊಳಗೆ ಇಡುತ್ತಾರೆ ಅಥವಾ ಹಾಸಿಗೆಯಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ, ಅನೇಕ ಅನಗತ್ಯ ವಸ್ತುಗಳನ್ನು ಹಾಸಿಗೆಯೊಳಗೆ ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದಲ್ಲಿ ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ನಿಮ್ಮ ಎಲೆಕ್ಟ್ರಿಕ್ ಸಾಮಾನುಗಳನ್ನು ಹಾಸಿಗೆಯೊಳಗೆ ಇರಿಸಿದರೆ, ವ್ಯಕ್ತಿಯು ಮಾನಸಿಕ ಮತ್ತು ಆರ್ಥಿಕ ಬಿಕ್ಕಟ್ಟಿನ ಮೂಲಕ ಹಾಡು ಹೋಗಬೇಕಾಗುತ್ತದೆ. ವಾಸ್ತು ತಜ್ಞರ ಪ್ರಕಾರ, ಮುಚ್ಚಿದ ಎಲೆಕ್ಟ್ರಾನಿಕ್ ವಸ್ತುಗಳನ್ನು ಅಪ್ಪಿತಪ್ಪಿಯೂ ಹಾಸಿಗೆಯ ಒಳಗೆ ಅಥವಾ ಹಾಸಿಗೆಯ ಕೆಳಗೆ ಇಡಬೇಡಿ. ಹೀಗೆ ಮಾಡುವುದರಿಂದ ಹಣದ ಅನಾವಶ್ಯಕ ಖರ್ಚು ಹೆಚ್ಚಾಗುತ್ತದೆ.
4. ಹಾಸಿಗೆಯೊಳಗೆ ಕಬ್ಬಿಣದ ವಸ್ತುಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಕಬ್ಬಿಣ ಶನಿದೇವನಿಗೆ ಸಂಬಂಧಿಸಿದೆ ಮತ್ತು ಕಬ್ಬಿಣದ ವಸ್ತುಗಳನ್ನು ಹಾಸಿಗೆಯಲ್ಲಿ ಇಡುವುದರಿಂದ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗುತ್ತವೆ. ಇದು ವ್ಯಕ್ತಿಯ ಜೀವನದಲ್ಲಿ ಅನೇಕ ರೀತಿಯ ಅಡೆತಡೆಗಳನ್ನು ಸೃಷ್ಟಿಸುತ್ತದೆ. ಇದರಿಂದ ಕುಟುಂಬದಲ್ಲಿ ವೈಮನಸ್ಸು ಉಂಟಾಗಿ ಶಾಂತಿ ಕದಡುತ್ತದೆ.
5. ಕಬೋರ್ಡ್‌ನಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಜನರು ತಮ್ಮ ಹರಿದ ಅಥವಾ ಕೊಳಕು ಬಟ್ಟೆಗಳನ್ನು ಹಾಸಿಗೆಯೊಳಗೆ ಇಡುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಇದನ್ನು ತಪ್ಪು ಎಂದು ಹೇಳಲಾಗಿದೆ. ಹಳೆಯ, ಹರಿದ, ಕೊಳೆಯಾದ ಬಟ್ಟೆಗಳನ್ನು ಹಾಸಿಗೆಯಲ್ಲಿ ಇರಿಸುವುದರಿಂದ ಬಡತನ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಇದರಿಂದ ಹಣ ನೀರಿನಂತೆ ಪೋಲಾಗುತ್ತದೆ ಎನ್ನಲಾಗುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)