vastu tips: ಎಲ್ಲರ ಮನೆಯ್ಲೂ ಸಾಮಾನ್ಯವಾಗಿ ಪೊರಕೆಯನ್ನು ಬಳಸಲಾಗುತ್ತದೆ, ಆದರೆ ಈ ಪೊರಕೆಯನ್ನು ಕೊಳ್ಳುವಾಗ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಲಕ್ಷ್ಮಿದೇವಿಯನ್ನು ಕೋಪಗೊಳಿಸುತ್ತವೆ.
vastu tips: ಎಲ್ಲರ ಮನೆಯ್ಲೂ ಸಾಮಾನ್ಯವಾಗಿ ಪೊರಕೆಯನ್ನು ಬಳಸಲಾಗುತ್ತದೆ, ಆದರೆ ಈ ಪೊರಕೆಯನ್ನು ಕೊಳ್ಳುವಾಗ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಲಕ್ಷ್ಮಿದೇವಿಯನ್ನು ಕೋಪಗೊಳಿಸುತ್ತವೆ.
ಒಂದು ಮನೆಯ ನಿರ್ವಾಹಣೆಯಲ್ಲಿ ವಾಸ್ತು ತುಂಬಾ ಮುಖ್ಯ ಪಾತ್ರ ವಹಿಸುತ್ತದೆ, ಒಂದು ಮನೆ ಯಾವುದೇ ಸಮಸ್ಯೆಗಳಿಲ್ಲದೆ, ಹಣದ ಕೊರತೆ ಇಲ್ಲದೆ ಜೀವನವನ್ನು ಸುಂದರವಾಗಿ ಸಾಗಿಸಬೇಕು ಎಂದರೆ ಮನೆಯ ವಾಸ್ತು ಅದರಲ್ಲಿ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ.
ವಾಸ್ತು ಶಾಸತ್ರದ ಪ್ರಕಾರ ಶನಿವಾರ ಮತ್ತು ಮಂಗಳವಾರ ಪೊರಕೆಯನ್ನು ಖರೀದಿಸುವುದರಿಂದ ಮನೆಯಲ್ಲಿ ಹಣದ ನಷ್ಟ ಮತ್ತು ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳು ಉಂಟಾಗುತ್ತವೆಯಂತೆ. ಈ ದಿನಗಳಲ್ಲಿ ಪರಕೆಯನ್ನು ಕರೀದಿಸಿ ಮನೆಗೆ ತರುವುದರಿಂದ ಲಕ್ಷ್ಮೀದೇವಿ ಕೋಪಗೊಂಡು ಮನೆಯಿಂದ ಹೊರ ಹೋಗುತ್ತಾಳೆ ಎನ್ನುತ್ತದೆ ವಾಸ್ತು ಶಾಸ್ತ್ರ.
ಮಂಗಳವಾರ ಮತ್ತು ಶನಿವಾರಗಳು ಮಂಗಳ ಮತ್ತು ಶನಿ ಗ್ರಹಗಳೊಂದಿಗೆ ಸಂಬಂಧ ಹೊಂದಿದ್ದು, ಹೋರಾಟ ಮತ್ತು ಕರ್ಮವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಈ ಗ್ರಹಗಳ ದುಷ್ಪರಿಣಾಮಗಳನ್ನು ತಪ್ಪಿಸಲು ಈ ದಿನಗಳಲ್ಲಿ ಪೊರಕೆಗಳನ್ನು ಖರೀದಿಸದಂತೆ ವಾಸತು ಶಾಸ್ತ್ರ ಸೂಚಿಸುತ್ತದೆ.
ಶುಭ ಮುಹೂರ್ತದಲ್ಲಿ ಪೊರಕೆ ಕೊಳ್ಳುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧವಾರ, ಗುರುವಾರ ಮತ್ತು ಶುಕ್ರವಾರದಂದು ಪೊರಕೆಯನ್ನು ಖರೀದಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ ಪೊರಕೆಯನ್ನು ಖರೀದಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.
ಇದು ಆರ್ಥಿಕ ಸಮೃದ್ಧಿಯನ್ನು ತರುವುದು ಮಾತ್ರವಲ್ಲದೆ ಮನೆಯಲ್ಲಿ ಸಂತೋಷ ಮತ್ತು ಆರೋಗ್ಯದ ವಾತಾವರಣವನ್ನು ಸೃಷ್ಟಿಸುತ್ತದೆ. ಇದರೊಂದಿಗೆ ಪೊರಕೆಯನ್ನು ಸರಿಯಾಗಿ ಬಳಸುವುದರಿಂದ ಮನೆಯ ಋಣಾತ್ಮಕ ಶಕ್ತಿಯು ದೂರವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.