Lakshmi Kamal And Vishnu Kamal: ವಾಸ್ತು ಶಾಸ್ತ್ರದಲ್ಲಿ ಹಲವು ಗಿಡ-ಮರಗಳ ಕುರಿತು ಉಲ್ಲೇಖಿಸಲಾಗಿದ್ದು, ಅವುಗಳನ್ನು ಮನೆಯಲ್ಲಿ ನೆಡುವುದರಿಂದ ದೇವಾದಿ-ದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ.
Lakshmi Kamal And Vishnu Kamal: ವಾಸ್ತು ಶಾಸ್ತ್ರದಲ್ಲಿ ಹಲವು ಗಿಡ-ಮರಗಳ ಕುರಿತು ಉಲ್ಲೇಖಿಸಲಾಗಿದ್ದು, ಅವುಗಳನ್ನು ಮನೆಯಲ್ಲಿ ನೆಡುವುದರಿಂದ ದೇವಾದಿ-ದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ. ಶ್ರೀವಿಷ್ಣು ಹಾಗೂ ತಾಯಿ ಲಕ್ಷ್ಮಿಯ ಸಂಕೇತವೆಂದು ಭಾವಿಸಲಾಗುವ ಎರಡು ವಿಭಿನ್ನ ಸಸ್ಯಗಳನ್ನು ಮನೆಯಲ್ಲಿ ಒಟ್ಟಿಗೆ ಇಡುವುದರಿಂದ ಮನೆಯಲ್ಲಿ ಅಕ್ಷಯ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಆ ಸಸ್ಯಗಳು ಯಾವುವು ಮತ್ತು ಅವುಗಳನ್ನು ನೆಡಬೇಕಾದರೆ ಯಾವ ನಿಯಮಗಳನ್ನು ಪಾಲಿಸಬೇಕು ತಿಳಿದುಕೊಳ್ಳೋಣ ಬನ್ನಿ,
ಇದನ್ನೂ ಓದಿ-Samudra Shastra: ಇಂತಹ ಕೂದಲು ಉಳ್ಳವರು ಗೆಳೆತನದಲ್ಲಿ ಚಿನ್ನದಂತಿರುತ್ತಾರೆ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಅನೇಕ ಬಾರಿ ಉತ್ತಮ ವೇತನ ಹೊಂದಿದ್ದರೂ ಕೂಡ ಅದನ್ನು ಉಳಿಸುವುದು ಕೆಲ ವ್ಯಕ್ತಿಗಳಿಗೆ ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಕೆಟ್ಟ ಗ್ರಹ-ನಕ್ಷತ್ರಗಳ ಕಾರಣದಿಂದಾಗಿ, ಮನೆಯಲ್ಲಿ ವಾಸ್ತು ದೋಷಗಳು ಉಂಟಾಗುತ್ತವೆ, ಇದು ವ್ಯಕ್ತಿಯ ಪ್ರಗತಿಯಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಕೆಲ ಗಿಡ ಮರಗಳ ಕುರಿತು ಉಲ್ಲೇಖಿಸಲಾಗಿದ್ದು, ಅವು ಮನೆಯ ವಾತಾವರಣದಲ್ಲಿ ತ್ವರಿತ ಬದಲಾವಣೆಗಳನ್ನು ತರುತ್ತವೆ.
2. ವಾಸ್ತು ತಜ್ಞರು ಇವುಗಳಲ್ಲಿ ಒಂದನ್ನು ವಿಷ್ಣು ಕಮಲ್ ಮತ್ತು ಮತ್ತೊಂದನ್ನು ಲಕ್ಷ್ಮಿ ಕಮಲ್ ಸಸ್ಯಗಳೆಂದು ಉಲ್ಲೇಖಿಸಿದ್ದಾರೆ. ವಾಸ್ತವದಲ್ಲಿ ಈ ಎರಡು ವಿಭಿನ್ನ ಸಸ್ಯಗಲಾಗಿವೆ. ಆದರೆ ಮನೆಯಲ್ಲಿ ಅವುಗಳನ್ನು ಜೋಡಿಯಾಗಿ ನೆಡುವುದರಿಂದ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು ಮತ್ತು ವ್ಯಕ್ತಿಯ ಅನೇಕ ಸಮಸ್ಯೆಗಳು ದೂರವಾಗುತ್ತವೆ.
3. ಲಕ್ಷ್ಮಿ ಕಮಲ್ ಮತ್ತು ವಿಷ್ಣು ಕಮಲ ಕಡಿಮೆ ನೀರು ಇರುವ ಪ್ರದೇಶ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಕಂಡುಬರುವ ಸಸ್ಯಗಳಗಿವೆ. ಈ ಸಸ್ಯಗಳು ರಸದಲ್ಲಿ ಸಮೃದ್ಧವಾಗಿವೆ. ನಿಖರವಾಗಿ ಕಮಲದ ಹೂವಿನಂತೆ ಕಾಣುತ್ತದೆ. ತಾಯಿ ಲಕ್ಷ್ಮಿ ಕುಳಿತುಕೊಳ್ಳುವ ಕಮಲದ ಹೂವಿನ ಬಣ್ಣ ಹಸಿರು. ಹೀಗಾಗಿ ವಿಷ್ಣು ಕಮಲದ ಹೂವಿನ ಎಲೆಗಳ ಬಣ್ಣ ಬದಲಾಗುತ್ತಲೇ ಇರುತ್ತದೆ. ಇದು ಕಂದು ಅಥವಾ ತಿಳಿ ಕೆಂಪು ಬಣ್ಣವನ್ನು ಹೊಂದಿರುತ್ತದೆ.
4. ಮನೆಯಲ್ಲಿ ಈ ಗಿಡಗಳನ್ನು ನೆಟ್ಟರೆ ಧನಾತ್ಮಕ ಶಕ್ತಿ ಹರಡುತ್ತದೆ. ಇದರಿಂದ ಮನೆಯ ವಾಸ್ತು ದೋಷಗಳು ನಿವಾರಣೆಯಾಗಿ ಮನೆಯಲ್ಲಿ ಐಶ್ವರ್ಯ ಬರುತ್ತದೆ. ವ್ಯಕ್ತಿಯು ವ್ಯವಹಾರದಲ್ಲಿ ಪ್ರಗತಿಯನ್ನು ಸಾಧಿಸುತ್ತಾನೆ. ಇದನ್ನು ಮನೆಯ ಮುಖ್ಯ ದ್ವಾರದಲ್ಲಿ ನೆಟ್ಟರೆ ಉತ್ತಮ ಎನ್ನುತ್ತಾರೆ ವಾಸ್ತು ತಜ್ಞರು. ಅಥವಾ ಮನೆಯ ಪೂರ್ವ-ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ತುಳಸಿ ಗಿಡದಂತೆ ಈ ಗಿಡಗಳನ್ನು ಕೂಡ ಪೂಜಿಸಲಾಗುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)