ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ದೇವರಿಗೆ ದುಡ್ಡಿನ ಅಲಂಕಾರ!

ಮಂಡ್ಯ ತಾಲೂಕಿನ ಹಳುವಾಡಿ ಗ್ರಾಮದ ನಿತ್ಯ ದೇವತೆ ಪಟ್ಟಲದಮ್ಮ ದೇವಿಗೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ದೇವರಿಗೆ ದುಡ್ಡಿನ ಅಲಂಕಾರ ಮಾಡಲಾಗಿದೆ. 

ಮಂಡ್ಯ ತಾಲೂಕಿನ ಹಳುವಾಡಿ ಗ್ರಾಮದ ನಿತ್ಯ ದೇವತೆ ಪಟ್ಟಲದಮ್ಮ ದೇವಿಗೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ದೇವರಿಗೆ ದುಡ್ಡಿನ ಅಲಂಕಾರ ಮಾಡಲಾಗಿದೆ. 

 

1 /4

ದೇವರಿಗೆ 100,200,500,2000,50,20,10, ರೂಗಳ ಹೊಸ ನೋಟುಗಳನ್ನು ಬಳಸಲಾಗಿದೆ. ಅರ್ಚಕ ನಂದೀಶ್ ಅವರು ಒಟ್ಟು 2.10 ಲಕ್ಷ ರೂಗಳನ್ನು ಬಳಸಿ ದೇವರು ಹಾಗೂ ಗರ್ಭಗುಡಿಗೆ ದುಡ್ಡಿನ ಅಲಂಕಾರ ಮಾಡಿದ್ದರು‌. 

2 /4

ನೋಟಿನ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ದೇವಿಗೆ ಸುತ್ತಮುತ್ತಲ ಗ್ರಾಮಸ್ಥರು, ನೂರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು.

3 /4

ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ  ದೇವರಿಗೆ ಹಣದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. 

4 /4

ದೇವರಿಗೆ ಅಲಂಕಾರಕ್ಕಾ 4 ಲಕ್ಷ ರೂ. ಮೌಲ್ಯ  100,200,500,2000,50,20,10, ರೂಗಳ ಹೊಸ ನೋಟುಗಳನ್ನು ಬಳಸಿ ಅರ್ಚಕ ಲಕ್ಷ್ಮೀಶ್ ದೇವರು ಹಾಗೂ ಗರ್ಭಗುಡಿಗೆ ನೋಟಿನಿಂದ ಅಲಂಕಾರ ಮಾಡಿದ್ದರು‌. ನೋಟಿನ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಚಾಮುಂಡೇಶ್ಚರಿ  ದೇವಿಗೆ ಸುತ್ತಮುತ್ತಲ ಗ್ರಾಮದ ನೂರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು.