Rose Color Meaning: ಪ್ರತಿ ಬಣ್ಣದ ಗುಲಾಬಿಗೂ ಕೂಡ ಅದರದೇ ಆದ ಅರ್ಥವಿದೆ. ಹಾಗಿದ್ದರೆ, ಯಾವ ಬಣ್ಣದ ಗುಲಾಬಿ ಏನನ್ನು ಸೂಚಿಸುತ್ತದೆ ಎಂದು ತಿಳಿಯಿರಿ.
Rose Color Meaning: ಪ್ರೇಮಿಗಳ ದಿನದಂದು ಪ್ರೇಮಿಗಳು ಗುಲಾಬಿ ನೀಡುವ ಮೂಲಕ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಹೆಚ್ಚಿನ ಜನರು ಕೆಂಪು ಗುಲಾಬಿಯನ್ನೇ ನೀಡುತ್ತಾರೆ. ಆದರೆ, ಕೆಲವು ಬೇರೆ ಬೇರೆ ಬಣ್ಣದ ಗುಲಾಬಿಯನ್ನು ನೀಡುತ್ತಾರೆ. ವಾಸ್ತವವಾಗಿ, ಪ್ರತಿ ಬಣ್ಣದ ಗುಲಾಬಿಗೂ ಕೂಡ ಅದರದೇ ಆದ ಅರ್ಥವಿದೆ. ಹಾಗಿದ್ದರೆ, ಯಾವ ಬಣ್ಣದ ಗುಲಾಬಿ ಏನನ್ನು ಸೂಚಿಸುತ್ತದೆ ಎಂದು ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನಮ್ಮಲ್ಲಿ ಹೆಚ್ಚಿನ ಮಂದಿಗೆ ರೆಡ್ ರೋಸ್ ಅರ್ಥಾತ್ ಕೆಂಪು ಗುಲಾಬಿ ಎಂದರೆ ತುಂಬಾ ಪ್ರಿಯ. ಇದು ಪ್ರೀತಿ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ.
ಗುಲಾಬಿ ಬಣ್ಣದ ರೋಸ್ ಮೆಚ್ಚುಗೆಯನ್ನು ಸೂಚಿಸುತ್ತದೆ. ಪ್ರೇಮಿಗಳ ದಿನದ ಸಂದರ್ಭದಲ್ಲಿ ಯಾರಿಗಾದರೂ ಗುಲಾಬಿ ಬಣ್ಣದ ರೋಸ್ ನೀಡಿದರೆ ಅದು ಅವರ ಪ್ರೀತಿಯನ್ನು ಮೆಚ್ಚಿಕೊಂಡಿರುವುದನ್ನು ಸೂಚಿಸುತ್ತದೆ.
ಕಿತ್ತಳೆ ಬಣ್ಣವು ಪ್ರೀತಿಸುವವರ ಬಗೆಗಿನ ನಿಮ್ಮ ಅಪಾರವಾದ ಉತ್ಸಾಹವನ್ನು ಸೂಚಿಸುತ್ತದೆ.
ಬಿಳಿ ಬಣ್ಣವು ಶಾಂತಿ, ಸರಳತೆಯ ಸಂಕೇತ. ಈಗಷ್ಟೇ ಚಿಗುರೊಡೆಯುತ್ತಿರುವ ಪ್ರೇಮ ನಿವೇದನೆಗೆ ಬಿಳಿ ಗುಲಾಬಿ ನೀಡುವುದು ಹೆಚ್ಚು ಸೂಕ್ತ.
ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವರಿಗೆ ನಿಮ್ಮ ಪ್ರೀತಿಯ ಬಗ್ಗೆ ತಿಳಿಸಲು ಪೀಚ್ ಬಣ್ಣದ ಗುಲಾಬಿಗಳನ್ನ್ಜು ನೀಡಿ.
ಹಳದಿ ಬಣ್ಣವು ಅಜೀವ ಸ್ನೇಹದ ಭರವಸೆಯನ್ನು ನೀಡುತ್ತದೆ. ನೀವು ನಿಮ್ಮ ಸ್ನೇಹಿತರಿಗೆ ಗುಲಾಬಿಯನ್ನು ನೀಡಲು ಬಯಸಿದರೆ ಹಳದಿ ಬಣ್ಣದ ಗುಲಾಬಿಗಳನ್ನು ನೀಡಬಹುದು.