ಸಾಲದ ಸಮಸ್ಯೆ ಹೆಚ್ಚಾಗುತ್ತಿದ್ದರೆ ಮನೆಯಲ್ಲಿರುವ ಈ ವಸ್ತುಗಳನ್ನು ತಕ್ಷಣ ಹೊರ ಹಾಕಿ .!

Vastu Tips for Home :ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಟ್ಟಿರುವ ಕೆಲವು ವಸ್ತುಗಳಿಂದ ಸಾಲ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಸಹ ಉಂಟಾಗುತ್ತವೆ. 
 

Vastu Tips for Home : ಇತ್ತೀಚಿನ ದಿನಗಳಲ್ಲಿ ಜನರು ಐಷಾರಾಮಿ ಜೀವನಕ್ಕಾಗಿ ಸಾಲ ಮಾಡುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ಹೀಗೆ ಮಾಡುತ್ತಾ ಮಾಡುತ್ತಾ ಸಾಲದ ಹೊರೆಯಲ್ಲಿ ಮುಳುಗುವುದು ತಿಳಿಯುವುದೇ ಇಲ್ಲ. ಸಾಲ ಹೆಚ್ಚಾಗುವುದರ ಹಿಂದೆ ವಾಸ್ತು  ಸಮಸ್ಯೆ ಕೂಡಾ ಇದ್ದಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಟ್ಟಿರುವ ಕೆಲವು ವಸ್ತುಗಳಿಂದ ಸಾಲ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಸಹ ಉಂಟಾಗುತ್ತವೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ನಿಮ್ಮ ಮನೆಯಲ್ಲಿ ಒಡೆದ  ಹೂವಿನ ಕುಂಡ ಇದ್ದರೆ ತಕ್ಷಣ ಅದನ್ನು ಹೊರಹಾಕಿ. ಸಾಮಾನ್ಯವಾಗಿ ಜನರು ಒಡೆದ ಹೂವಿನ ಕುಂಡಗಳನ್ನು  ಮನೆಯ ಛಾವಣಿಯ ಮೇಲೆ ಇಡುತ್ತಾರೆ. ವಾಸ್ತು ಪ್ರಕಾರ, ಒಡೆದ ಹೂವಿನ ಕುಂಡಗಳು ಮನೆಯ ಸಮೃದ್ಧಿಗೆ ಅಶುಭವೆಂದು ಪರಿಗಣಿಸಲಾಗಿದೆ. 

2 /5

ಗೋಡೆಗೆ ನೇತು ಹಾಕಿರುವ ಗಡಿಯಾರ ಎಲ್ಲರ ಮನೆಯಲ್ಲೂ ಇರುತ್ತದೆ. ಗಡಿಯಾರಕ್ಕೆ ಸಂಬಂಧಿಸಿದ ಹಲವು ನಿಯಮಗಳನ್ನು ವಾಸ್ತುವಿನಲ್ಲಿ ಉಲ್ಲೇಖಿಸಲಾಗಿದೆ. ಮನೆಯಲ್ಲಿ ಯಾವುದೇ ಗಡಿಯಾರ  ಕೆಟ್ಟು ನಿಂತಿದ್ದರೆ, ಆ ಮನೆಯ ಏಳಿಗೆ ಕೂಡಾ ನಿಂತು ಹೋಗುತ್ತದೆ ಎಂದು ಹೇಳಲಾಗುತ್ತದೆ.   

3 /5

ವಾಸ್ತು ಪ್ರಕಾರ ಒಡೆದ ಕನ್ನಡಿಯೂ ಸಾಲಕ್ಕೆ ಕಾರಣವಾಗಬಹುದು. ಹೀಗಾಗಿ ಮನೆಯಲ್ಲಿ ಒಡೆದ ಕನ್ನಡಿ ಇದ್ದರೆ ತಕ್ಷಣ ಅದನ್ನು ಮನೆಯಿಂದ ಹೊರ ಹಾಕಿ. ಮಲಗುವ ಕೋಣೆಯಲ್ಲಿ ಡ್ರೆಸ್ಸಿಂಗ್ ಟೇಬಲ್ ಇಟ್ಟರೆ ಅದರ ಕನ್ನಡಿ ಹಾಸಿಗೆಯ ಮುಂದೆ ಇರಬಾರದು. ಕಪಾಟಿನಲ್ಲಿ ಕನ್ನಡಿ ಇದ್ದರೆ ಅದನ್ನು ಮುಚ್ಚಿಡಿ. 

4 /5

ಮುರಿದ ಪೀಠೋಪಕರಣಗಳನ್ನು ಮನೆಯಲ್ಲಿ ಇಡಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ಇದರಿಂದಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಯಾಗುತ್ತದೆ. ಕುಟುಂಬ ಸದಸ್ಯರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಹಾಸಿಗೆ ಹರಿದಿದ್ದರೆ,  ವೈವಾಹಿಕ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ. 

5 /5

ಒಡೆದ ಪಾತ್ರೆಗಳನ್ನು ಮನೆಯಲ್ಲಿ ಇಡಬೇಡಿ. ಇವುಗಳಿಂದ ಸಾಲವೂ ಹೆಚ್ಚಾಗಬಹುದು. ಹಲವು ಬಾರಿ ಒಡೆದ ಪಾತ್ರೆಗಳನ್ನು ಮನೆಯ ಸ್ಟೋರ್ ರೂಂನಲ್ಲಿ ಇಡಲಾಗುತ್ತದೆ. ಆದರೆ ವಾಸ್ತುವಿನ ದೃಷ್ಟಿಯಿಂದ ಇದು ತಪ್ಪು.  (  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)