ದಟ್ಟ, ಸದೃಢ ಕಪ್ಪು ಕೂದಲಿಗೆ ಬಳಸಿ ಈ ಸರಳ ಮನೆ ಮದ್ದು

ಬೆಂಗಳೂರು : ಇಂದಿನ ಯುಗದಲ್ಲಿ ಪ್ರತಿಯೊಬ್ಬರೂ  ಕೂದಲು ಉದುರುವುದು ಮತ್ತು ದುರ್ಬಲ ಕೂದಲಿನಿಂದ ತೊಂದರೆಗೊಳಗಾಗುತ್ತಾರೆ. ಇದರ ಪರಿಹಾರಕ್ಕಾಗಿ ಜನರು ಅನೇಕ ರೀತಿಯ ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಕೂದಲ ರಕ್ಷಣೆಯ ಸಲಹೆಗಳು: ಇಂದಿನ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮ ಉದುರುವಿಕೆ ಮತ್ತು ದುರ್ಬಲ ಕೂದಲಿನಿಂದ ತೊಂದರೆಗೊಳಗಾಗುತ್ತಾರೆ. ಇದನ್ನು ಹೋಗಲಾಡಿಸಲು ಜನರು ಅನೇಕ ರೀತಿಯ ದುಬಾರಿ ಉತ್ಪನ್ನಗಳನ್ನು ಸಹ ಬಳಸುತ್ತಾರೆ. ಆದರೆ ಅದರಿಂದ ವಿಶೇಷ ಪ್ರಯೋಜನವಿಲ್ಲ. ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವ ಮೂಲಕ ಕೂದಲನ್ನು ದಪ್ಪ, ಕಪ್ಪು ಮತ್ತು ಸದೃಢವಾಗಿ ಮಾಡಬಹುದು.  ಮಾಡಬಹುದು.   

2 /7

ಆಲಿವ್, ಕ್ಯಾಸ್ಟರ್, ತೆಂಗಿನಕಾಯಿ ಮತ್ತು ಬಾದಾಮಿ ಎಣ್ಣೆಯನ್ನು ನಿಯಮಿತವಾಗಿ ಕೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲಿನ ಬೆಳವಣಿಗೆಯು ವೇಗವಾಗಿರುತ್ತದೆ. ಅಲ್ಲದೆ  ಹೊಳೆಯುವ  ಮತ್ತು ಸ್ಟ್ರಾಂಗ್ ಕೂದಲು ನಿಮ್ಮದಾಗುತ್ತದೆ.  

3 /7

ಪೋಷಕಾಂಶಗಳ ಕೊರತೆಯಿಂದಾಗಿ ಕೂದಲು  ಉದುರಲು ಆರಂಭವಾಗುತ್ತದೆ. ಅದಕ್ಕಾಗಿ ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. 

4 /7

ಗ್ರೀನ್ ಟೀ ಚಯಾಪಚಯವನ್ನು ಸುಧಾರಿಸುವ ಮೂಲಕ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟು ಮಾತ್ರವಲ್ಲದೆ ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಕಪ್ ಗ್ರೀನ್ ಟೀ ಸೇವಿಸುವ ಮೂಲಕ ನಿಮ್ಮ ಕೂದಲನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. 

5 /7

ಈರುಳ್ಳಿಯಲ್ಲಿರುವ ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತ ನಿವಾರಕ ಗುಣಲಕ್ಷಣಗಳು ತಲೆಹೊಟ್ಟು ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಈರುಳ್ಳಿ ರಸಕ್ಕೆ ತೆಂಗಿನೆಣ್ಣೆ ಮತ್ತು ವಿಟಮಿನ್ ಇ ಮಾತ್ರೆ ಸೇರಿಸಿ ಕೂದಲಿಗೆ ಹಚ್ಚಿಕೊಳ್ಳಬಹುದು. 2 ರಿಂದ 3 ಗಂಟೆಗಳ ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ.

6 /7

ಅನೇಕ ಜನರು ಬೆಳಿಗ್ಗೆ ಸ್ನಾನದ ನಂತರ ತಮ್ಮ ಕೂದಲಿಗೆ ಎಣ್ಣೆಯನ್ನು ಹಚ್ಚುತ್ತಾರೆ. ಆದರೆ ಹೀಗೆ ಮಾಡುವುದರಿಂದ, ದಿನವಿಡೀ ತಲೆಯಲ್ಲಿ ಬಹಳಷ್ಟು ಧೂಳು ಸಂಗ್ರಹವಾಗುತ್ತದೆ. ಇದರಿಂದಾಗಿ ಕೂದಲು ಕೂಡಾ ಹಾಳಾಗುತ್ತದೆ. ಯಾವಾಗಲೂ ರಾತ್ರಿಯಲ್ಲಿ ಎಣ್ಣೆಯನ್ನು ಹಚ್ಚಬೇಕು ಮತ್ತು ಮರುದಿನ ಬೆಳಿಗ್ಗೆ ಎದ್ದು ಕೂದಲನ್ನು ತೊಳೆಯಬೇಕು. 

7 /7

ಮೆಂತ್ಯ ಬೀಜಗಳು ಕೂದಲು ಉದುರುವಿಕೆಯನ್ನು ತಡೆಗಟ್ಟಲು ಮತ್ತು ಅವುಗಳನ್ನು ಆರೋಗ್ಯಕರವಾಗಿಡಲು ಸಹಕಾರಿಯಾಗಿದೆ. ಇದರೊಂದಿಗೆ ಕೂದಲಿನ ಹೊಳಪನ್ನು ಕೂಡಾ ಹೆಚ್ಚಿಸುತ್ತದೆ. ವಿವಿಧ ರೀತಿಯಲ್ಲಿ ಮೆಂತ್ಯೆ ಬೀಜಗಳನ್ನು ಸೇವಿಸಬಹುದು ಅಥವಾ ಅದರ ಎಣ್ಣೆಯನ್ನು ಕೂದಲಿಗೆ ಹಚ್ಚಬಹುದು.