ಕಾಫಿ-ಟೀ ಪುಡಿಯಲ್ಲಿ ಈ ಎರಡು ಪದಾರ್ಥ ಬಳಸಿ ಬುಡದಿಂದಲೂ ಕಡು ಕಪ್ಪಾದ ಕೂದಲು ನಿಮ್ಮದಾಗಿಸಿ!

White Hair Remedies: ಬಿಳಿ ಕೂದಲನ್ನು ಕಪ್ಪಾಗಿಸಲು ಪದೇ ಪದೇ ಹೇರ್ ಡೈ ಮಾಡುತ್ತಿದ್ದೀರಾ? ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಮನೆಯಲ್ಲೇ ತಯಾರಿಸಿ ಬ್ಲಾಕ್ ಹೇರ್ ಡೈ. 

Homemade Hair Dye: ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳ ಬದಲಿಗೆ  ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ತುಂಬಾ ಪ್ರಯೋಜನಕಾರಿ. ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಹೇರ್ ಡೈ ಬಗ್ಗೆ ಇಲ್ಲಿದೆ ಮಾಹಿತಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /10

ಬಿಳಿ ಕೂದಲಿಗೆ ಪದೇ ಪದೇ ಹೇರ್ ಡೈ ಹಚ್ಚುತ್ತೀರಾ...? ಇದರಿಂದ ಆ ಕ್ಷಣಕ್ಕೆ ಕೂದಲು ಕಪ್ಪಗಾಗುತ್ತದೆ. ಆದರೆ, ಕೆಲ ದಿನಗಳ ಬಳಿಕ ಮತ್ತೆ ಕೂದಲಿಗೆ ಬಣ್ಣ ಹಚ್ಚಬೇಕಾಗುತ್ತದೆ. 

2 /10

ಆದರೆ, ನೀವು ನಿಮ್ಮ ಮನೆಯಲ್ಲಿರುವ ಟೀ ಪುಡಿ, ಕಾಫಿ ಪುಡಿ, ಕೊಬ್ಬರಿ ಎಣ್ಣೆ ಮತ್ತು  ನಿಂಬೆ ಹಣ್ಣು ಬಳಸಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು. 

3 /10

ಒಂದೆರಡು ಸ್ಪೂನ್ ಕೊಬ್ಬರಿ ಎಣ್ಣೆಗೆ, ಅರ್ಧ ಚಮಚ ನಿಂಬೆ ಹಣ್ಣನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಎರಡೆರಡು ಚಮಚ ಕಾಫಿ-ಟೀ ಪುಡಿಯನ್ನು ಬೆರೆಸಿ ಸ್ವಲ್ಪ ಹೊತ್ತು ಹಾಗೆ ಇಡಿ. ಬಳಿಕ ಇದನ್ನು ಶೋಧಿಸಿಕೊಳ್ಳಿ. 

4 /10

ನಂತರ ಶೋಧಿಸಿಟ್ಟ ಡಿಕಾಕ್ಷನ್ ಅನ್ನು ಬಿಸಿ ಮಾಡಿ. ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರಿಟ್ಟು ಅದು ಬಿಸಿಯಾದ ಬಳಿಕ ಆ ನೀರಿನಲ್ಲಿ ಶೋಧಿಸಿರುವ ಡಿಕಾಕ್ಷನ್ ಬಟ್ಟಲನ್ನು ಇಟ್ಟು ಸಣ್ಣ ಉರಿಯಲ್ಲಿ 5 ನಿಮಿಷ ಡಬಲ್ ಬಾಯ್ಲಿಂಗ್ ಮಾಡಿ. 

5 /10

ಈ ರೀತಿಯಾಗಿ ತಯಾರಿಸಿದ ಹೇರ್ ಡೈ ಅನ್ನು ಕೂದಲಿನ ಬುಡದಿಂದಲೂ ತುದಿಯವರೆಗೂ ಹಚ್ಚಿ ಲಘುವಾಗಿ ಮಸಾಜ್ ಮಾಡಿ. 

6 /10

ಇದರ ಉತ್ತಮ ಫಲಿತಾಂಶಕ್ಕಾಗಿ ರಾತ್ರಿ ವೇಳೆ ಈ ಹೇರ್ ಪ್ಯಾಕ್ ಹಾಕಿ ಮಸಾಜ್ ಮಾಡಿ, ಮರುದಿನ ಹೇರ್ ವಾಶ್ ಮಾಡುವುದು ತುಂಬಾ ಪ್ರಯೋಜನಕಾರಿ. 

7 /10

ಈ ಹೇರ್ ಪ್ಯಾಕ್ ಬಳಸಿದಾಗ ಶಾಂಪೂ ಬದಲಿಗೆ ಸೀಗೆಪುಡಿ ಅಥವಾ ಸೀಗೆಕಾಯಿ ಬಳಸುವುದರಿಂದ ಕೂದಲು ಕಡು ಕಪ್ಪಾಗುತ್ತದೆ. 

8 /10

ಈ ಹೇರ್ ಪ್ಯಾಕ್ ಅನ್ನು ಒಮ್ಮೆ ಹಚ್ಚಿದರೆ ಸಾಕು ಕೂದಲು ಕಪ್ಪಾಗುತ್ತದೆ. ಆದರೆ, ನಿಯಮಿತವಾಗಿ ಇದನ್ನು ಬಳಸುತ್ತಾ ಬಂದರೆ ಕೂದಲು ಒಳಗಿನಿಂದಲೂ ಕಪ್ಪಾಗುತ್ತದೆ. 

9 /10

ಮನೆಯಲ್ಲಿಯೇ ತಯಾರಿಸಿದ ಈ ಹೋಂ ಮೇಡ್ ಹೇರ್ ಡೈ ಬಿಳಿ ಕೂದಲನ್ನು ಕಪ್ಪಾಗಿಸುವುದಷ್ಟೇ ಅಲ್ಲ, ಬಿಳಿಕೂದಲು ಬಾರದಂತೆ ತಡೆಯುತ್ತದೆ. ಶಾಶ್ವತವಾದ ಕಪ್ಪು ಕೂದಲನ್ನು ನೀಡುವ ಈ ಹೇರ್ ಡೈ ಬಳಕೆಯಿಂದ ಯಾವುದೇ ಅಡ್ಡಪರಿಣಾಮಗಳೂ ಇರುವುದಿಲ್ಲ. 

10 /10

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.