ಮೆಹೆಂದಿ, ನೆಲ್ಲಿಕಾಯಿ ಸಾಸಿವೆ ಯಾವುದೂ ಬೇಡ !ತೆಂಗಿನೆಣ್ಣೆಯನ್ನು ಹೀಗೆ ಬಳಸಿದರೆ ಸಾಕು ಬಿಳಿ ಕೂದಲು ಕಡು ಕಪ್ಪಾಗುವುದು ಗ್ಯಾರಂಟಿ !

Coconut oil For White Hair : ಕೂದಲು ಆರೋಗ್ಯಕರವಾಗಿರಬೇಕಾದರೆ ತೆಂಗಿನ ಎಣ್ಣೆ ಹಚ್ಚಬೇಕು. ಈಗ ಕೂದಲ ಆರೈಕೆಗಾಗಿ ಅನೇಕ ರೀತಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಿಗಬಹುದು. ಆದರೆ ತೆಂಗಿನೆಣ್ಣೆ ಕೂದಲಿನ ಆರೋಗ್ಯಕ್ಕೆ ಪರಮೌಷಧಿ.ಹೀಗಾಗಿಯೇ ಶತಮಾನಗಳಿಂದ ತೆಂಗಿನೆಣ್ಣೆಯನ್ನು ಕೂದಲಿಗೆ ಬಳಸಲಾಗುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಕೂದಲನ್ನು ಸುರಕ್ಷಿತವಾಗಿಡಲು ನಿಯಮಿತವಾಗಿ ತೆಂಗಿನ ಎಣ್ಣೆಯನ್ನು ಬಳಸಬೇಕು. ಇದರಿಂದ ಅನೇಕ ವಿಶಿಷ್ಟ ಪ್ರಯೋಜನಗಳನ್ನು ಪಡೆಯಬಹುದು.  ಹಲವು ರೀತಿಯ ಶ್ಯಾಂಪೂಗಳು,ಕಂಡಿಷನರ್‌ಗಳು,ಸ್ಟೈಲಿಂಗ್ ಜೆಲ್‌ಗಳು ಮತ್ತು ಇತರ ಹೇರ್ ಕೇರ್ ಪ್ರಾಡಕ್ಟ್ ಗಳಲ್ಲಿ ತೆಂಗಿನೆಣ್ಣೆಯನ್ನು ಬಳಸಲಾಗುತ್ತದೆ.ತೆಂಗಿನ ಎಣ್ಣೆಯನ್ನು ಪ್ರಿವಾಶ್ ಚಿಕಿತ್ಸೆ ಅಥವಾ ಕಂಡೀಷನಿಂಗ್ ಮಾಸ್ಕ್ ಆಗಿಯೂ  ಬಳಸಬಹುದು.

2 /7

ತೆಂಗಿನ ಎಣ್ಣೆಯು ನೈಸರ್ಗಿಕವಾಗಿ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ನಿಮ್ಮ ಕೂದಲನ್ನು ಮೃದುಗೊಳಿಸುತ್ತದೆ. ಕೂದಲು ಹಾನಿಯಾಗದಂತೆ ತಡೆಯುತ್ತದೆ. ವಾರಕ್ಕೆ ಎರಡು ಬಾರಿಯಾದರೂ ಈ ಎಣ್ಣೆಯನ್ನು ಬಳಸಿದರೆ ಸಾಕಷ್ಟು ಅನುಕೂಲವಾಗಲಿದೆ. 

3 /7

ತೆಂಗಿನ ಎಣ್ಣೆಯು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಕೂದಲಿನಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.ಇದರಿಂದ  ಕಪ್ಪಕೂದಲು ಬಿಳಿಯಾಗುವ ಪ್ರಕ್ರಿಯೆ ನಿಧಾನವಾಗುತ್ತದೆ. ಸಣ್ಣ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆಯ ನಿವಾರಣೆಗೆ ನಿಯಮಿತವಾಗಿ ತೆಂಗಿನೆಣ್ಣೆ ಬಳಸಬೇಕು.

4 /7

ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ತೆಂಗಿನ ಎಣ್ಣೆಗೆ ಕರಿಬೇವು, ಮೆಂತ್ಯೆ,ಈರುಳ್ಳಿ ಸೇರಿಸಿ ಚೆನ್ನಾಗಿ ಬಿಸಿ ಮಾಡಿ.ನಂತರ,ಈ ಎಣ್ಣೆಯನ್ನು ತಣ್ಣಗಾಗಿಸಿ  ವಾರಕ್ಕೆ ಎರಡು ಬಾರಿ ನಿಯಮಿತವಾಗಿ ಕೂದಲಿಗೆ ಹಚ್ಚಿ. ಹೀಗೆ ಮಾಡಿದರೆ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. 

5 /7

ಬಿಳಿ ಕೂದಲು ಮತ್ತು ತಲೆಹೊಟ್ಟು ಸಮಸ್ಯೆಯನ್ನು ಕಡಿಮೆ ಮಾಡಲು ತೆಂಗಿನ ಎಣ್ಣೆ ಮತ್ತು ನಿಂಬೆ ರಸವನ್ನು ಹಚ್ಚಬೇಕು. ವಾರಕ್ಕೆ ಎರಡು ಬಾರಿ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿದರೆ ತಲೆಹೊಟ್ಟು ಮತ್ತು ಬಿಳಿ ಕೂದಲ ಸಮಸ್ಯೆ ನಿವಾರಣೆಯಾಗುತ್ತದೆ.   

6 /7

ತೆಂಗಿನೆಣ್ಣೆಯು ಕೂದಲಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.ಕೂದಲ ಆರೈಕೆಯಲ್ಲಿ ಕಾಲಜನ್ ಅನ್ನು ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.  

7 /7

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.