ಜಗತ್ತಿನಲ್ಲಿ ಸಂಪೂರ್ಣವಾಗಿ Underground ನಗರವಿದೆ. ಈ ಗ್ರಾಮ ಆಸ್ಟ್ರೇಲಿಯಾದಲ್ಲಿದೆ.
ಬೆಂಗಳೂರು : ನೆಲಮಾಳಿಗೆಯಲ್ಲಿರುವ ಮನೆಗಳು ಮತ್ತು ಸೇನಾ ಬಂಕರ್ಗಳಂತಹ ಶೆಲ್ಟರ್ಗಳ ಬಗ್ಗೆ ನೀವು ಇಲ್ಲಿಯವರೆಗೆ ಕೇಳಿರಬೇಕು. ಆದರೆ ಜಗತ್ತಿನಲ್ಲಿ ಸಂಪೂರ್ಣವಾಗಿ Underground ನಗರವಿದೆ. ಈ ಗ್ರಾಮ ಆಸ್ಟ್ರೇಲಿಯಾದಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ದಕ್ಷಿಣ ಆಸ್ಟ್ರೇಲಿಯಾದ ಈ ಗ್ರಾಮದ ಹೆಸರು ಕೂಬರ್ ಪಾಡಿ. ಇದನ್ನು ವಿಶ್ವದ ವಿಶಿಷ್ಟ ಗ್ರಾಮ ಎಂದು ಕರೆಯಬಹುದು. ಇಲ್ಲಿನ ಜನಸಂಖ್ಯೆಯ ಶೇಕಡ 70ರಷ್ಟು ಜನರು ನೆಲದಡಿಯಲ್ಲಿ ವಾಸಿಸುತ್ತಿದ್ದಾರೆ. ಅವರ ಮನೆ ಅಥವಾ ಕಚೇರಿ ಬಹಳಷ್ಟು ಐಷಾರಾಮಿಯಾಗಿದ್ದು, ಇದೆಲ್ಲವೂ ನೆಲದಿಂದ ನೂರಾರು ಅಡಿ ಕೆಳಗಿರುವ ವಸಾಹತು.
ಈ ನೆಲ ಮಾಲಿಗೆಯಲ್ಲಿರುವ ಮನೆಗಳು ಹೊರಗಿನಿಂದ ಬಹಳ ಸಾಮಾನ್ಯವಾಗಿರುವಂತೆ ಕಾಣಿಸುತ್ತದೆ, ಆದರೆ ಎಲ್ಲಾ ಸೌಕರ್ಯಗಳು ಒಳಗೆ ಇರುತ್ತವೆ.
ಇಲ್ಲಿನ ನಿವಾಸಿಗಳು ತಮ್ಮ ಮನೆಗಳು ಮತ್ತು ಕಚೇರಿಗಳೊಂದಿಗೆ ತಮ್ಮ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಿದ್ದಾರೆ. ವರದಿಯ ಪ್ರಕಾರ, ಇಲ್ಲಿ ಚರ್ಚ್ಗಳು, ಚಿತ್ರಮಂದಿರಗಳು, ವಸ್ತುಸಂಗ್ರಹಾಲಯಗಳು, ಆರ್ಟ್ ಗ್ಯಾಲರಿಗಳು, ಬಾರ್ ಮತ್ತು ಹೋಟೆಲ್ಗಳು ಸಹ ಈ ಗ್ರಾಮದಲ್ಲಿವೆ.
ಕೂಬರ್ ಪೇಡಿಯಲ್ಲಿ ಗಣಿಗಾರಿಕೆ ಕೆಲಸವು 1915 ರಲ್ಲಿ ಪ್ರಾರಂಭವಾಯಿತು. ವಾಸ್ತವವಾಗಿ, ಇದು ಮರುಭೂಮಿ ಪ್ರದೇಶವಾಗಿದ್ದು, ಬೇಸಿಗೆಯಲ್ಲಿ ಇಲ್ಲಿ ತಾಪಮಾನವು ತುಂಬಾ ಹೆಚ್ಚು ಮತ್ತು ಚಳಿಗಾಲದಲ್ಲಿ ತುಂಬಾ ಕಡಿಮೆಯಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿ ವಾಸಿಸುವ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಈ ಸಮಸ್ಯೆಯನ್ನು ಹೋಗಲಾಡಿಸಲು ಗಣಿಗಾರಿಕೆಯ ನಂತರ ಜನರು ಖಾಲಿ ಗಣಿಗಳಲ್ಲಿ ವಾಸಿಸುವುದಕ್ಕೆ ಆರಂಭಿಸಿದರು.
ಇಲ್ಲಿ ನೆಲದಡಿಯಲ್ಲಿ ನಿರ್ಮಿಸಲಾದ ಮನೆಗಳು ಸಂಪೂರ್ಣ ಸುಸಜ್ಜಿತವಾಗಿದ್ದು ಸಕಲ ಸೌಕರ್ಯಗಳಿಂದ ಕೂಡಿದೆ. ಈ ಪಟ್ಟಣದಲ್ಲಿ ಸುಮಾರು 1500 ಮನೆಗಳಿದ್ದು, 3500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಈ ಮನೆಗಳನ್ನು ಡಿಗ್ ಔಟ್ ಎಂದು ಕರೆಯಲಾಗುತ್ತದೆ. ಇಲ್ಲಿ ಬೇಸಿಗೆಯಲ್ಲಿ ಎಸಿ ಮತ್ತು ಚಳಿಗಾಲದಲ್ಲಿ ಹೀಟರ್ ಅಗತ್ಯವಿಲ್ಲ. ಇಲ್ಲಿನ ಉಷ್ಣತೆಯು ಯಾವಾಗಲೂ ಆರಾಮದಾಯಕವಾಗಿರುತ್ತದೆ. ಈ ಪ್ರದೇಶದಲ್ಲಿ ಅನೇಕ ಹಾಲಿವುಡ್ ಚಲನಚಿತ್ರಗಳನ್ನು ಸಹ ಚಿತ್ರೀಕರಿಸಲಾಗಿದೆ.