Tuesday Remedies: ಹಿಂದೂ ಧರ್ಮದಲ್ಲಿ, ವಾರದ ಪ್ರತಿ ದಿನವನ್ನು ಕೆಲವು ದೇವರಿಗೆ ಸಮರ್ಪಿಸಲಾಗುತ್ತದೆ. ಮಂಗಳವಾರವನ್ನು ಬಜರಂಗಬಲಿಗೆ ಸಮರ್ಪಿಸಲಾಗಿದೆ. ಈ ದಿನ ಹನುಮಾನ್ ಜೀ ಪೂಜೆ, ಉಪವಾಸ ಮತ್ತು ಕೆಲವು ನಿಯಮಗಳನ್ನು ಅನುಸರಿಸುವ ಮೂಲಕ ಜೀವನದಲ್ಲಿ ಸಂತೋಷವನ್ನು ಪಡೆಯಬಹುದು. ಹನುಮಂತನು ಎಲ್ಲಾ ತೊಂದರೆಗಳನ್ನು ನಿವಾರಿಸುವ ಮೂಲಕ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುವನು ಎಂದು ಹೇಳಲಾಗುತ್ತದೆ. ಆದರೆ ಮಂಗಳವಾರ ಕೆಲವು ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ತೊಂದರೆಗಳು ಎದುರಾಗುವುದು ಎಂದೂ ಕೂಡ ಹೇಳಲಾಗುತ್ತದೆ. ಹಾಗಾಗಿ ಮಂಗಳವಾರ ಕೆಲವು ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಮಂಗಳವಾರ ಉಪ್ಪು ತಿನ್ನಬೇಡಿ: ಹನುಮಂತನ ಆಶೀರ್ವಾದ ಪಡೆಯಲು ಮಂಗಳವಾರದಂದು ಉಪವಾಸ ಮಾಡುವವರು ಈ ದಿನ ಉಪ್ಪನ್ನು ಸೇವಿಸಬಾರದು. ಹಣ್ಣನ್ನು ಸೇವಿಸುವಾಗಲಿ ಅಥವಾ ಒಂದು ಹೊತ್ತಿನ ಊಟವಾಗಲಿ, ಎರಡೂ ಸಂದರ್ಭಗಳಲ್ಲಿ ಉಪ್ಪನ್ನು ತಿನ್ನಬೇಡಿ.
ಮಂಗಳವಾರ ಹವನ ಮಾಡಬೇಡಿ: ದೇವರ ಆಶೀರ್ವಾದ ಪಡೆಯಲು ಪೂಜೆ ಮತ್ತು ಹವನವನ್ನು ಮಾಡಲಾಗುತ್ತದೆ, ಆದರೆ ಮಂಗಳವಾರದಂದು ಹವನ ಮಾಡಬಾರದು. ಇದು ಅಶುಭ.
ಬಿಳಿ ಸಿಹಿತಿಂಡಿಗಳನ್ನು ಖರೀದಿಸಬೇಡಿ ಅಥವಾ ತಿನ್ನಬೇಡಿ: ಮಂಗಳವಾರದಂದು ಬಿಳಿ ಅಥವಾ ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಎಂದಿಗೂ ಖರೀದಿಸಬೇಡಿ. ನೀವು ಸಿಹಿತಿಂಡಿಗಳನ್ನು ದಾನ ಮಾಡುತ್ತಿದ್ದರೆ, ನೀವೇ ಆ ಸಿಹಿತಿಂಡಿಗಳನ್ನು ತಿನ್ನಬೇಡಿ. ಇಲ್ಲದಿದ್ದರೆ, ದಾನದ ಫಲವು ಸಿಗುವುದಿಲ್ಲ. ಇದನ್ನೂ ಓದಿ- Dhanteras 2021: ಧನತ್ರಯೋದಶಿ ದಿನ ಈ ವಸ್ತುಗಳನ್ನು ದಾನ ಮಾಡುವುದರಿಂದ ಹೊಳೆಯುತ್ತೆ ಅದೃಷ್ಟ
ಕಬ್ಬಿಣವನ್ನು ಖರೀದಿಸಬೇಡಿ: ಮಂಗಳವಾರ ಕಬ್ಬಿಣದ ವಸ್ತುಗಳನ್ನು ಖರೀದಿಸಬೇಡಿ. ಹಾಗೆ ಮಾಡುವುದೆಂದರೆ ಜೀವನದಲ್ಲಿನ ತೊಂದರೆಗಳು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಕೂದಲು ಕತ್ತರಿಸಬೇಡಿ: ಧಾರ್ಮಿಕ ಗ್ರಂಥಗಳಿಂದ ಜ್ಯೋತಿಷ್ಯದವರೆಗೆ, ಮಂಗಳವಾರ ಕೂದಲು ಮತ್ತು ಉಗುರುಗಳನ್ನು ಕತ್ತರಿಸದಂತೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಬುಧವಾರ, ಶುಕ್ರವಾರ ಕೂದಲು ಮತ್ತು ಉಗುರುಗಳನ್ನು ಕತ್ತರಿಸಲು ಉತ್ತಮ ದಿನಗಳು. ಇದನ್ನೂ ಓದಿ- Money Tips: ಹಣದ ಕೊರತೆಯಿಂದ ಬೇಸತ್ತಿದ್ದೀರಾ? ಈ ಕ್ರಮಗಳನ್ನು ತೆಗೆದುಕೊಳ್ಳಿ, ಅದೃಷ್ಟ ಬದಲಾಗುತ್ತದೆ
ಕೆಂಪು ಕರವಸ್ತ್ರವನ್ನು ಇಟ್ಟುಕೊಳ್ಳುವುದರಿಂದ, ನೀವು ಆಶೀರ್ವಾದವನ್ನು ಪಡೆಯುತ್ತೀರಿ: ಹನುಮಾನ್ ಜೀ ಆಶೀರ್ವಾದ ಪಡೆಯಲು, ಮಂಗಳವಾರ ಕೆಂಪು ಕರವಸ್ತ್ರ ಅಥವಾ ಬಟ್ಟೆಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಇದಲ್ಲದೆ ಹನುಮಾನ್ ದೇವಸ್ಥಾನದಲ್ಲಿ ಮಲ್ಲಿಗೆ ಎಣ್ಣೆಯ ದೀಪವನ್ನು ಬೆಳಗಿಸಿ. ಇದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಜೀವನದಲ್ಲಿ ಸಂತೋಷ ತುಂಬುತ್ತದೆ ಎಂಬ ನಂಬಿಕೆ ಇದೆ. ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.