Money Remedies: ಮನೆಯಲ್ಲಿ ಮನಿ ಪ್ಲಾಂಟ್ ಇರುವುದು ಸಾಮಾನ್ಯ, ಆದರೆ ಒಳ್ಳೆಯ, ಹಸಿರು ಮನಿ ಪ್ಲಾಂಟ್ ಇದ್ದರೂ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಮುಂದುವರೆದರೆ ಅದರ ಹಿಂದೆ ಕೆಲವು ಕಾರಣಗಳು ಇರಬಹುದು. ಇದಕ್ಕಾಗಿ, ಮನಿ ಪ್ಲಾಂಟ್‌ಗೆ ಸಂಬಂಧಿಸಿದ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ದೊರೆತು, ಉತ್ತಮ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಇದಕ್ಕಾಗಿ, ಮನಿ ಪ್ಲಾಂಟ್‌ಗೆ ಸಂಬಂಧಿಸಿದಂತೆ ಹಾಲಿನ ಕೆಲವು ತಂತ್ರಗಳನ್ನು ಮಾಡಬೇಕಾಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅದ್ಭುತ ಪ್ರಗತಿಯನ್ನು ಕಾಣಬಹುದು ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮನೆಯಲ್ಲಿ ಹಣದ ಒಳಹರಿವು ಹೆಚ್ಚಿಸಲು ಮನಿ ಪ್ಲಾಂಟ್ ಅನ್ನು ನೆಡಲಾಗುತ್ತದೆ ಮತ್ತು ಲಕ್ಷ್ಮಿ ದೇವಿಯು ಸಂಪತ್ತಿನ ಅಧಿದೇವತೆ. ಹಾಗಾಗಿ, ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನಿ ಪ್ಲಾಂಟ್ ಜೊತೆಗೆ ಹಾಲಿನ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ತಾಯಿ ಲಕ್ಷ್ಮಿ ಕೃಪೆಯಿಂದ ಆದಾಯವು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.
ಮನಿ ಪ್ಲಾಂಟ್ ಅನ್ನು ಕದ್ದು ನೆಡಬೇಕು ಎಂಬ ಸಾಮಾನ್ಯ ನಂಬಿಕೆ ಜನರಲ್ಲಿದೆ. ಆದರೆ ವಾಸ್ತು ಶಾಸ್ತ್ರದಲ್ಲಿ ಎಲ್ಲಿಯೂ ಅಂತಹ ಉಲ್ಲೇಖವಿಲ್ಲ. ಆದ್ದರಿಂದ, ಮನಿ ಪ್ಲಾಂಟ್ ಅನ್ನು ಕದಿಯಬೇಡಿ ಮತ್ತು ಗಾಜಿನ ಬಾಟಲಿಯಲ್ಲಿ ಇಡಬೇಡಿ.
ಮನಿ ಪ್ಲಾಂಟ್‌ಗೆ ಪ್ರತಿದಿನ ಸ್ವಲ್ಪ ಹಸಿ ಹಾಲನ್ನು ಅರ್ಪಿಸಿ ನಿಮ್ಮ ಆಸೆಯನ್ನು ಹೇಳಿದರೆ, ಈ ಆಸೆ ಶೀಘ್ರದಲ್ಲೇ ಈಡೇರುತ್ತದೆ.
ಆದಷ್ಟು ಬೇಗ ಶ್ರೀಮಂತರಾಗಬೇಕೆಂದರೆ ದುಡಿಮೆಯಲ್ಲಿ ಶ್ರಮ ಪಡುವುದರ ಜೊತೆಗೆ ಮನಿ ಪ್ಲಾಂಟ್ ನಲ್ಲಿ ಹಾಲು ಮಿಶ್ರಿತ ನೀರನ್ನು ಹಾಕಿ. ಇದರಿಂದ ಸಂಪತ್ತು ಹೆಚ್ಚುತ್ತದೆ.
ನಿಮ್ಮ ಹಣ ಎಲ್ಲಾದರೂ ಸಿಲುಕಿದ್ದರೆ, ಎಷ್ಟು ಪ್ರಯತ್ನಪಟ್ಟರೂ ಸೇರಬೇಕಾದ ಹಣ ನಿಮ್ಮ ಕೈ ಸೇರದಿದ್ದರೆ ಸೋಮವಾರದಂದು ಪೇಪರ್‌ನಲ್ಲಿ ಹೆಸರು ಬರೆದು ಮನಿ ಪ್ಲಾಂಟ್‌ನ ಬುಡದಲ್ಲಿ ಹೂತು ಹಾಕುವುದರಿಂದ ಕೆಲವೇ ದಿನಗಳಲ್ಲಿ ಹಣ ಕೈ ಸೇರುತ್ತದೆ ಎಂಬ ನಂಬಿಕೆ ಇದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ.