Low BP ನಿಯಂತ್ರಿಸಲು ಈ 5 ಮನೆಮದ್ದುಗಳನ್ನ ಟ್ರೈ ಮಾಡಿ; ತಕ್ಷಣವೇ BP ಕಂಟ್ರೋಲ್‌ ಆಗುತ್ತೆ!!

Low blood pressure: ಮೂರ್ಛೆ, ತಲೆತಿರುಗುವಿಕೆ, ಕಣ್ಣುಗಳ ಮುಂದೆ ಕತ್ತಲೆ, ಸುಸ್ತು, ವಾಂತಿ ಅಥವಾ ವಾಕರಿಕೆ, ಕೈಗಳು, ಪಾದಗಳು ಅಥವಾ ಚರ್ಮವು ತಣ್ಣಗಾಗುವುದು, ಬೆವರುವುದು ಮತ್ತು ಉಸಿರಾಟದ ತೊಂದರೆ ಇವು ಕಡಿಮೆ ರಕ್ತದೊತ್ತಡದ ಲಕ್ಷಣಗಳಾಗಿವೆ.

Home Remedies for Low Blood Pressure: ಮಾನವನ ರಕ್ತದೊತ್ತಡವು 120/80 mmHg ವ್ಯಾಪ್ತಿಯಲ್ಲಿದ್ದಾಗ ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿಯ ರಕ್ತದೊತ್ತಡವು ತುಂಬಾ ಕಡಿಮೆಯಾದಾಗ, ಅದು 90/60 mmHgಗಿಂತ ಕಡಿಮೆಯಿರುತ್ತದೆ. ಕಡಿಮೆ ರಕ್ತದೊತ್ತಡವು ಆರೋಗ್ಯಕ್ಕೆ ತುಂಬಾ ಗಂಭೀರ ಪರಿಣಾಮ ಉಂಟಾಗುತ್ತದೆ. ಅಧಿಕ ರಕ್ತದೊತ್ತಡ ಹೇಗೆ ಅಪಾಯಕಾರಿಯೋ ಹಾಗೆಯೇ ಕಡಿಮೆ ರಕ್ತದೊತ್ತಡ ಸಹ ಹಾನಿಕಾರಕ. ನೀವು ಕಡಿಮೆ ರಕ್ತದೊತ್ತಡ ಹೊಂದಿದ್ದರೆ ಹೆಚ್ಚು ತಲೆತಿರುಗುವಿಕೆ ಅನುಭವಿಸಬಹುದು. ಕಣ್ಣುಗಳ ಮುಂದೆ ಕತ್ತಲೆ ಬರಬಹುದು. ನೀವು ಮೂರ್ಛೆ ಹೋಗಬಹುದು. ಮೆದುಳಿಗೆ ಸಾಕಷ್ಟು ರಕ್ತ ತಲುಪದ ಕಾರಣ ಇದು ಸಂಭವಿಸುತ್ತದೆ. ಕಡಿಮೆ ರಕ್ತದೊತ್ತಡವನ್ನು ಹೈಪೊಟೆನ್ಷನ್ ಎಂತಲೂ ಕರೆಯುತ್ತಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಒಂದು ತುಂಡು ಶುಂಠಿಯನ್ನು ಜಗಿಯುವುದು, ದಾಲ್ಚಿನ್ನಿ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದು, ಹಾಲಿನೊಂದಿಗೆ ಖರ್ಜೂರವನ್ನ ಸೇವಿಸುವುದು, ಟೊಮೇಟೊ, ಒಣದ್ರಾಕ್ಷಿ, ಕ್ಯಾರೆಟ್ ಇತ್ಯಾದಿಗಳನ್ನು ಸೇವಿಸುವುದು ಸಾಮಾನ್ಯ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.  

2 /5

ನಿಂಬೆ ನೀರನ್ನು ಕುಡಿಯುವುದರಿಂದ ಕಡಿಮೆ ರಕ್ತದೊತ್ತಡದ ಸಮಸ್ಯೆಯೂ ದೂರವಾಗುತ್ತದೆ. ದೇಹದಲ್ಲಿ ಕಡಿಮೆ ದ್ರವದ ಕಾರಣ ಅನೇಕ ಬಾರಿ ರಕ್ತದೊತ್ತಡ ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ದಿನವಿಡೀ ಸಾಕಷ್ಟು ದ್ರವವನ್ನು ಸೇವಿಸಿರಿ.  

3 /5

ಬೇಸಿಗೆಯಲ್ಲಿ ನೀವು ಮಜ್ಜಿಗೆಯನ್ನು ಕುಡಿಯುತ್ತಿರಬೇಕು. ಯಾವಾಗ ನಿಮ್ಮ ರಕ್ತದೊತ್ತಡ ಕಡಿಮೆಯಾಗುತ್ತದೋ ಆಗ ಮಜ್ಜಿಗೆ ಸೇವಿಸಿ. ಉಪ್ಪು, ಹುರಿದ ಜೀರಿಗೆ ಪುಡಿ ಸೇರಿಸಿ ಮಜ್ಜಿಗೆ ಕುಡಿಯುವುದರಿಂದ ನಿರ್ಜಲೀಕರಣದ ಜೊತೆಗೆ ಕಡಿಮೆ ರಕ್ತದೊತ್ತಡದ ಸಮಸ್ಯೆಯೂ ಸಹ ನಿವಾರಣೆಯಾಗುತ್ತದೆ.  

4 /5

ತುಳಸಿಯಲ್ಲಿರುವ ಯುಜೆನಾಲ್ ಕಡಿಮೆ ರಕ್ತದೊತ್ತಡವನ್ನ ಸಾಮಾನ್ಯಗೊಳಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ತುಳಸಿ ಎಲೆಗಳನ್ನು ಜಗಿಯುವುದರಿಂದ ರಕ್ತದೊತ್ತಡವೂ ಸಾಮಾನ್ಯವಾಗಿರುತ್ತದೆ. ತುಳಸಿಯಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಇತರವುಗಳು ಕಡಿಮೆ ರಕ್ತದೊತ್ತಡವನ್ನ ಸಾಮಾನ್ಯಕ್ಕೆ ಪರಿವರ್ತಿಸುತ್ತದೆ. ತುಳಸಿಯಲ್ಲಿರುವ ಯುಜೆನಾಲ್ ಅಂಶವು ಕಡಿಮೆ ರಕ್ತದೊತ್ತಡವನ್ನ ಸಾಮಾನ್ಯಗೊಳಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ನೀವು ತುಳಸಿ ಕಷಾಯ, ತುಳಸಿ ಚಹಾವನ್ನು ಸಹ ಕುಡಿಯಬಹುದು.  

5 /5

ನಿಮ್ಮ ರಕ್ತದೊತ್ತಡ ತುಂಬಾ ಕಡಿಮೆಯಿದ್ದರೆ ಪ್ರತಿದಿನ ಕಾಫಿ ಸೇವಿಸಬೇಕು. ಕಾಫಿ-ಟೀಯಲ್ಲಿರುವ ಕೆಫೀನ್ ರಕ್ತದೊತ್ತಡವನ್ನು ಹೆಚ್ಚಿಸಲು ಸಹಾಯ  ಮಾಡುತ್ತದೆ. ನಿಮಗೆ  ಸುಸ್ತು, ಉಸಿರಾಟದ ತೊಂದರೆ ಅಥವಾ ತಲೆತಿರುಗುವಿಕೆ ಉಂಟಾದಾಗ ಚಹಾ ಅಥವಾ ಕಾಫಿ ಕುಡಿಯಿರಿ.