ನೀವು ತಿಳಿಯಲೇಬೇಕಾದ ನಿಂಬೆ ರಸದ 5 ಉಪಯೋಗ!

   

  • Feb 19, 2018, 19:45 PM IST
1 /5

ಸ್ಥೂಲಕಾಯ ನಿವಾರಣೆ : ನೀವೇನಾದರೂ ನಿಮ್ಮ ತೂಕವನ್ನು ಕಡಿಮೆಮಾಡಿಕೊಳ್ಳಬೇಕು ಎಂದುಕೊಂಡಿದ್ದರೆ, ಇದು ಸುಲಭ ಉಪಾಯ. ಪ್ರತಿನಿತ್ಯ ಬೆಳಿಗ್ಗೆ ಒಂದು ಲೋಟ ಬಿಸಿನೀರಿಗೆ ನಿಬೆ ಹಣ್ಣಿನ ರಸ ಹಾಕಿ ಕುಡಿಯಿರಿ. ದಿನಕ್ಕೆ ಎರಡು ಬಾರಿಯಾದರೂ ನಿಂಬೆರಸ ಮತ್ತು ಜೇನುತುಪ್ಪ ಮಿಶ್ರಿತ ನೀರು ಸೇವನೆ ಮತ್ತು ಗಂಟೆಗೊಮ್ಮೆ ಒಂದು ಲೋಟ ನೀರು ಕುಡಿದರೆ, ಉತ್ತಮ ಫಲಿತಾಂಶ ಕಾಣಬಹುದು. 

2 /5

ಮಲಬದ್ಧತೆ ನಿವಾರಣೆ : ನಿಂಬೆಹಣ್ಣಿನಲ್ಲಿ ಅಧಿಕವಾಗಿ ಸಿಟ್ರಿಕ್ ಆಸಿಡ್ ಇದೆ. ಈ ಸಿಟ್ರಿಕ್ ಆಸಿಡ್ ದೇಹದಲ್ಲಿನ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಇನ್ನು ನಿಂಬೆಹಣ್ಣಿನಲ್ಲಿ  ವಿಟಮಿನ್ ಸಿ ಪೆಕ್ಟಿನ್ ಫೈಬರ್ ವಿಟಮಿನ್ ಎ ಹೆಚ್ಚು ಪ್ರಮಾಣದಲ್ಲಿದೆ. ನಿಂಬೆ ಹಣ್ಣಿನ ರಸವನ್ನು ಪ್ರತಿನಿತ್ಯ ಸೇವಿಸುವುದರಿಂದ ಮಲಬದ್ದತೆ ಸಮಸ್ಯೆ ದೂರಾಗುತ್ತದೆ.

3 /5

ಹೊಟ್ಟೆ ನೋವು ನಿವಾರಣೆ : ಬ್ಯಾಕ್ಟೀರಿಯಾದಿಂದ ಉಂಟಾಗುವ ಉದರ ಸಂಬಂಧಿ ರೋಗಗಳಿಗೆ ನಿಂಬೆ ಹಣ್ಣು ರಾಮಭಾಣ. ನಿಂಬೆಹಣ್ಣು ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಸಹಾಯ ಮಾಡುತ್ತದೆ. ನಿಂಬೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮಿದುಳಿನ ನರಕೋಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

4 /5

ಚರ್ಮ ಸಮಸ್ಯೆಗಳಿಗೆ ರಾಮಬಾಣ : ಮುಖದ ಮೇಲೆ ಉಂಟಾಗುವ ಮೊಡವೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣು ಸಹಾಯ ಮಾಡುತ್ತದೆ. ನಿಂಬೆ ಹಣ್ಣಿಗೆ ಒಂದು ಹನಿ ಜೇನುತುಪ್ಪ ಬೆರೆಸಿ, ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆದರೆ ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗಿ, ಚರ್ಮ ಕಾಂತಿಯುತವಾಗಿರುತ್ತದೆ. ಡೆಡ್ ಸ್ಕಿನ್ ತೆಗೆಯಲು ನಿಂಬೆ ಹಣ್ಣು ಉತ್ತಮ ಔಷಧ. 

5 /5

ಮಧುಮೇಹ ನಿಯಂತ್ರಣ : ಮಧುಮೇಹ ಸಂಬಂಧಿ ಕಣ್ಣಿನ ರೋಗಗಳನ್ನು ನಿವಾರಿಸುವುದರೊಂದಿಗೆ, ನಿಂಬೆ ಹಣ್ಣಿನಲ್ಲಿರುವ ಹೆಸ್ಪರ್ಟಿನ್(hesperetin) ಎಂಬ ರಾಸಾಯನಿಕ ರಕ್ತದಲ್ಲಿರುವ ಸಕ್ಕರೆಯ ಅಂಶ (ಸಕ್ಕರೆಯ ಪ್ರಮಾಣವು ರಕ್ತದಲ್ಲಿ ಹೆಚ್ಚು ಇದ್ದಾಗ)ವನ್ನು ಸಹ ಕಡಿಮೆ ಮಾಡುತ್ತದೆ.