ಕಡಿಮೆ ಬೆಲೆಗೆ ಸಿಗುತ್ತಿದೆ Top 5 Smartphone, ವೈಶಿಷ್ಟ್ಯ ತಿಳಿಯಿರಿ

ಇವತ್ತು ಇಲ್ಲಿ ನಾವು ಹೇಳುತ್ತಿರುವ  ಪೋನ್ ಗಳು ವಾಟರ್ ಪ್ರೂಫ್ ಮಾತ್ರವಲ್ಲ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಅಲ್ಲದೆ  ಫೋನ್ ಗಳ ಬೆಲೆ ಕೂಡಾ ಕಡಿಮೆ..

ನವದೆಹಲಿ :  ಇಂದಿನ ಕಾಲದಲ್ಲಿ ಎಲ್ಲರಿಗೂ ಸ್ಮಾರ್ಟ್ ಫೋನ್ ಬೇಕು. ಉತ್ತಮ ಫೀಚರ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗವಾಗಿ ಪಡೆಯುವುದು ಕಷ್ಟ. ಹಾಗಂತ ದುಬಾರಿ ಫೋನ್ ಖರೀದಿಸಿ ಅವುಗಳನ್ನು ನಿರ್ವಹಿಸುವುದು ಕೂಡಾ ಕಷ್ಟದ ಕೆಲಸ. ಈ ದುಬಾರಿ ಬೆಲೆಯ ಫೋನುಗಳು ನೀರಿನಲ್ಲಿ ಬಿದ್ದು ಹಾಳಾಗಿರುವ ಬಗ್ಗೆ ಬಹಳ ಸಲ ಕೇಳಿರಬಹುದು. ಆದರೆ, ಇವತ್ತು ಇಲ್ಲಿ ನಾವು ಹೇಳುತ್ತಿರುವ  ಪೋನ್ ಗಳು ವಾಟರ್ ಪ್ರೂಫ್ ಮಾತ್ರವಲ್ಲ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಅಲ್ಲದೆ  ಫೋನ್ ಗಳ ಬೆಲೆ ಕೂಡಾ ಕಡಿಮೆ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

 IP68 ರಕ್ಷಣೆಯ ವೈಶಿಷ್ಟ್ಯವನ್ನು ಹೊಂದಿರುವ  ಫೋನ್ ನೀರಿನಲ್ಲಿ ಬಿದ್ದರೂ ಹಾಳಾಗುವುದಿಲ್ಲ.  6.5-ಇಂಚಿನ AMOLED ಡಿಸ್‌ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಹೊಂದಿರುವ ಈ ಸ್ಯಾಮ್‌ಸಂಗ್ ಫೋನ್‌ನಲ್ಲಿ 8GB RAM ಮತ್ತು 128GB ಸ್ಟೋರೇಜ್ ಇದೆ. ಎಕ್ಸಿನೋಸ್ 990 ಚಿಪ್ ನಿಂದ ನಡೆಸಲ್ಪಡುವ ಈ ಫೋನ್ ಅನ್ನು ನೀವು ಫ್ಲಿಪ್ ಕಾರ್ಟ್ ನಲ್ಲಿ ಈಗ 39,865 ರೂ ಗಳಿಗೆ ಖರೀದಿಸಬಹುದು. 

2 /5

ಅಮೆಜಾನ್ ನಲ್ಲಿ 39,999 ರೂ.ಗಳಿಗೆ ಸಿಗುವ  ಫೋನ್ ವಾಟರ್ ಪ್ರೂಫ್ ಫೋನ್ ಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. IP53 ಡಸ್ಟ್ ಮತ್ತು ವಾಟರ್ ರೆಜಿಸ್ಟೆಂಟ್ ಹೊಂದಿರುವ ಈ ಫೋನ್‌ವಿಶೆಷತೆಗಳಿವೆ.  8GB RAM ಮತ್ತು 256GB UFS 3.1 ಸ್ಟೋರೇಜ್ ಹೊಂದಿರುವ ಈ ಫೋನ್ ಸ್ನಾಪ್‌ಡ್ರಾಗನ್ 888 ನಿಂದ ಚಾಲಿತವಾಗಿದೆ. 6.67-ಇಂಚಿನ AMOLED ಡಿಸ್‌ಪ್ಲೇ ಮತ್ತು 120Hz ರಿಫ್ರೆಶ್ ರೇಟ್ನೊಂದಿಗೆ Mi 11X ಪ್ರೊ 108MP ಕ್ಯಾಮೆರಾ ಜೊತೆಗೆ 8MP ಅಲ್ಟ್ರಾ-ವೈಡ್ ಸೆನ್ಸರ್ ಮತ್ತು 5MP ಸೆನ್ಸರ್‌ನೊಂದಿಗೆ ಬರುತ್ತದೆ.

3 /5

2020 ರಲ್ಲಿ ಬಂದ ಐಫೋನ್ ಎಸ್ಇ IP57 ಸ್ಪೆಸಿಫಿಕೇಶನ್ ನೊಂದಿಗೆ  ಬರುತ್ತದೆ. ಆದ್ದರಿಂದ ಇದು 1 ಮೀಟರ್ ವರೆಗೆ ನೀರಿನಲ್ಲಿ ಹಾಳಾಗದಂತೆ ಸ್ವಲ್ಪ ಸಮಯ ಉಳಿಯಬಹುದು. 64GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋನ್ 4.7 ಇಂಚಿನ ಡಿಸ್ಪ್ಲೇ, 7MP ಫ್ರಂಟ್ ಕ್ಯಾಮೆರಾ ಮತ್ತು 12MP ಬ್ಯಾಕ್ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ ಆಪಲ್ ನ A13 ಬಯೋನಿಕ್ ಚಿಪ್ ನಿಂದ ಚಾಲಿತವಾಗಿದೆ. ನೀವು ಈ ಫೋನ್ ಅನ್ನು ರಿಲಯನ್ಸ್ ಡಿಜಿಟಲ್ ನಲ್ಲಿ .39,900 ರೂ. ಗೆ ಖರೀದಿಸಬಹುದು. 

4 /5

ಸ್ಯಾಮ್‌ಸಂಗ್‌ನ ಮತ್ತೊಂದು ಫೋನ್ ಕೂಡಾ ಈ ಪಟ್ಟಿಯಲ್ಲಿದೆ. 1 ಮೀಟರ್ ವರೆಗೆ ನೀರಿನಲ್ಲಿ ಸುರಕ್ಷಿತವಾಗಿರಿಸುವ ಸಾಮರ್ಥ್ಯ ಹೊಂದಿರುವ ಈ ಫೋನ್,  IP67 ಸ್ಪೆಸಿಫಿಕೇಶನ್ ನೊಂದಿಗೆ  ಬರುತ್ತದೆ. ಸ್ನಾಪ್‌ಡ್ರಾಗನ್ 720 ನಿಂದ ನಡೆಸಲ್ಪಡುವ ಈ ಫೋನ್ 6.7-ಇಂಚಿನ AMOLED ಡಿಸ್‌ಪ್ಲೇ ಸ್ಕ್ರೀನ್, 8GB RAM ಮತ್ತು 256GB ಸ್ಟೊರೇಜ್ ನೊಂದಿಗೆ ಲಭ್ಯವಿರುತ್ತದೆ. 64MP ಟ್ರಿಪಲ್ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ ಕೂಡ ಇದರ ವೈಶಿಷ್ಟ್ಯವಾಗಿದೆ. ಅಮೆಜಾನ್‌ನಲ್ಲಿ ಈ ಫೋನ್ 38,650 ರೂ.ಗಳಿಗೆ ಸಿಗುತ್ತದೆ.   

5 /5

ಈ ಫೋನ್‌ನ IPX4 ವೈಶಿಷ್ಟ್ಯವನ್ನು ಹೊಂದಿದ್ದು, ಇದರ ಮೇಲೆ ಎಷ್ಟೇ ನೀರು ಬಿದ್ದರೂ, ಏನೂ ಆಗುವುದಿಲ್ಲ ಎಂಬ ಭರವಸೆಯನ್ನು ಕಂಪನಿ ನೀಡುತ್ತದೆ. ಮೀಡಿಯಾ ಟೆಕ್ ಡೈಮೆನ್ಶನ್ 1000+ ನಿಂದ ನಡೆಸಲ್ಪಡುವ ಈ ಫೋನ್ 128GB ನೀಡುವುದಲ್ಲದೆ, ಸ್ಟೋರೇಜ್ ಅನ್ನು ಹೊಂದಿದೆ. ಈ ಫೋನ್ ಅನ್ನು ಅಮೆಜಾನ್‌ ನಲ್ಲಿ, 35,990 ರೂ. ಗೆ ಖರೀದಿಸಬಹುದು.