Instagram ನಲ್ಲಿ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ದಕ್ಷಿಣ ಭಾರತದ ಟಾಪ್ 5 ನಟಿಯರು.! ಮೊದಲ ಸ್ಥಾನ ಯಾರಿದ್ದಾರೆ ಗೊತ್ತೆ.?

Top south indian actress: ದಕ್ಷಿಣ ಭಾರತದ ಕೆಲವು ನಟಿಯರು Instagram ನಲ್ಲಿ ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದರಿಂದಾಗಿ ಹೆಚ್ಚು ಹಣ ಗಳಿಸುತ್ತಿದ್ದಾರೆ. ಬನ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ಕೋಟಿಗಟ್ಟಲೆ ಸಂಪಾದಿಸುವ ನಟಿಯರು ಯಾರ್ಯಾರು ಅಂತ ನೋಡೋಣ.. 

Top 5 South Indian Actress : ನಟಿಯರ ಜನಪ್ರಿಯತೆ ಹೆಚ್ಚಾದಂತೆ ಅವರ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ಗಳ ಸಂಖ್ಯೆಯೂ ಹೆಚ್ಚುತ್ತದೆ.. ಇದರಿಂದ ಅವರು ಹಣ ಸಂಪಾದನೆ ಮಾಡಬಹುದು.. ಬನ್ನಿ.. ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ 5 ದಕ್ಷಿಣ ಭಾರತದ ನಟಿಯರು ಯಾರು ಅಂತ ತಿಳಿಯೋಣ..
 

1 /6

ಈ ಪಟ್ಟಿಯಲ್ಲಿ ನಟಿ ಶ್ರುತಿ ಹಾಸನ್ ಐದನೇ ಸ್ಥಾನದಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ನಂಬರ್ ಒನ್ ಸ್ಥಾನದಲ್ಲಿದ್ದ ನಟಿ, ಆ ನಂತರ ಕಾರಣಾಂತರದಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಈಗ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಸಲಾರ್ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಸಧ್ಯ ಶೃತಿ Instagram ನಲ್ಲಿ 24.8 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.   

2 /6

4ನೇ ಸ್ಥಾನದಲ್ಲಿ ಪೂಜಾ ಹೆಗ್ಡೆ ಇದ್ದಾರೆ. ತೆಲುಗಿನಲ್ಲಿ ನಂಬರ್ ಒನ್ ನಟಿ ಎನಿಸಿಕೊಂಡಿದ್ದ ಚೆಲುವೆ, ಸಧ್ಯ ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ಪೂಜಾ ನಟನೆಯ ಬಹುತೇಕ ಸಿನಿಮಾಗಳು ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಇನ್ನೂ ನಟಿಗೆ Instagram ನಲ್ಲಿ 27 ಮಿಲಿಯನ್ ಅನುಯಾಯಿಗಳಿದ್ದಾರೆ.   

3 /6

ನಟಿ ಕಾಜಲ್ ಅಗರ್ವಾಲ್ ಮೂರನೇ ಸ್ಥಾನದಲ್ಲಿದ್ದಾರೆ. ಅವರನ್ನು 27.1 ಮಿಲಿಯನ್ ಜನರು ಅನುಸರಿಸುತ್ತಿದ್ದಾರೆ. ಸಧ್ಯ ಇಂಡಿಯನ್ 2 ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಕಾಜಲ್ ಮತ್ತೆ ಕಮ್‌ಬ್ಯಾಕ್‌ ಮಾಡಲು ಕಾಯುತ್ತಿದ್ದಾರೆ.   

4 /6

ನಟಿ ಸಮಂತಾ ತಮ್ಮ ಎಲ್ಲಾ ವಿಷಯಗಳನ್ನು ಹೆಚ್ಚಾಗಿ Instagram ಮೂಲಕ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಇನ್‌ಸ್ಟಾದಲ್ಲಿ ಅತೀ ಹೆಚ್ಚು ಫಾಲೋವರ್ಸ್‌ ಹೊಂದಿರುವ ನಟಿಯರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಸ್ಯಾಮ್‌ ಇದ್ದಾರೆ. ನಟಿ ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ 35.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.   

5 /6

ರಶ್ಮಿಕಾ ಮಂದನಾ ಮೊದಲ ಸ್ಥಾನದಲ್ಲಿದ್ದಾರೆ. 43.3 ಮಿಲಿಯನ್ ಫಾಲೋವರ್ಸ್ ಹೊಂದಿರುವ ನ್ಯಾಷುನಲ್‌ ಕ್ರಶ್‌ ಸದ್ಯ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗೆ ತೆರೆಕಂಡ ʼಅನಿಮಲ್ʼ ಸಿನಿಮಾದ ಮೂಲಕ ಕಿರಿಕ್‌ ಬೆಡಗಿಯ ಕ್ರೇಜ್‌ ಹೆಚ್ಚಾಯಿತು. ತಮಿಳು, ತೆಲುಗು ಸಿನಿರಂಗದಲ್ಲಿ ಸಕ್ರಿಯವಾಗಿರುವ ನಟಿ, ಸಧ್ಯ ಪುಷ್ಪಾ 2 ಚಿತ್ರದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ.  

6 /6

ತಮಿಳಿನಲ್ಲಿ ನಂಬರ್ ಒನ್ ನಟಿ ಎಂದು ಪರಿಗಣಿಸಲ್ಪಟ್ಟಿರುವ ನಯನತಾರಾ 8.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಕೆಲವೇ ತಿಂಗಳುಗಳ ಹಿಂದೆ ತನ್ನ Instagram ಪುಟವನ್ನು ಪ್ರಾರಂಭಿಸಿದ್ದರಿಂದ, ಅವರ ಫಾಲೋರ್ವಸ್‌ ಸಂಖ್ಯೆ ತುಂಬಾ ಕಡಿಮೆ ಇದೆ. ಅದೇ ರೀತಿ ನಟಿ ತ್ರಿಷಾ ಕೂಡ 6.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ತ್ರಿಷಾ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ಸಕ್ರಿಯವಾಗಿರುವುದಿಲ್ಲ.