Smartphones: ಬಜೆಟ್ ಬೆಲೆಯ ಟಾಪ್ 5 ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ

ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಇಂದು ಪ್ರತಿಯೊಬ್ಬರ ಕೈಯಲ್ಲಿಯೂ ಸ್ಮಾರ್ಟ್‌ಫೋನ್‌ಗಳನ್ನು ಕಾಣಬಹುದು. ಯುವಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುತ್ತಾರೆ. ಬ್ಯಾಟರಿ, ಕ್ಯಾಮೆರಾ ಸೇರಿದಂತೆ ಅನೇಕ ಉತ್ತಮ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್‌ ಖರೀದಿಸುವ ಬಯಕೆ ಎಲ್ಲರಿಗೂ ಇರುತ್ತದೆ. ನಿಮಗೆ ಹೊಂದು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

Samsung Galaxy F22: ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ 4GB RAM ಮತ್ತು 128GB ಸಂಗ್ರಹ(Storage)ಸಾಮರ್ಥ್ಯದೊಂದಿಗೆ ಬರುತ್ತದೆ. ಮೈಕ್ರೋ ಎಸ್‌ಡಿ ಕಾರ್ಡ್ ಸಹಾಯದಿಂದ ಈ ಸಂಗ್ರಹಣೆಯನ್ನು 1TB ವರೆಗೆ ವಿಸ್ತರಿಸಬಹುದು. ಇದರ ಕ್ವಾಡ್ ಕ್ಯಾಮೆರಾ ಸೆಟಪ್ ನಲ್ಲಿ ನೀವು 48MP ಮುಖ್ಯ ಕ್ಯಾಮೆರಾವನ್ನು ಪಡೆಯುತ್ತೀರಿ. ಈ ಫೋನ್ 6,000mAh ಬ್ಯಾಟರಿಯೊಂದಿಗೆ ಬರುತ್ತದೆ. ನೀವು ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ 14,999 ರೂ.ಗೆ ಖರೀದಿಸಬಹುದು.

2 /5

Hawaii Nova 3i: ಈ Hawaii ಸ್ಮಾರ್ಟ್‌ಫೋನ್ 6.3 ಇಂಚಿನ ಸ್ಕ್ರೀನ್, 16MP ಹಿಂಬದಿಯ ಕ್ಯಾಮೆರಾ, 3340mAh ಬ್ಯಾಟರಿಯೊಂದಿಗೆ ಬರುತ್ತದೆ. ಇದರಲ್ಲಿ ನೀವು 128GB ಸ್ಟೋರೇಜ್ ಸೌಲಭ್ಯವನ್ನು ಪಡೆಯುತ್ತೀರಿ. ಇದರ ಬೆಲೆ 18,229 ರೂ. ಇದೆ.

3 /5

Oppo F19S: ಇದು ಅತ್ಯಂತ ತೆಳುವಾದ ಸ್ಮಾರ್ಟ್‌ಫೋನ್‌ ಆಗಿದ್ದು, 6.43-ಇಂಚಿನ ಪೂರ್ಣ HD + AMOLED ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದರ ಹಿಂಬದಿಯ ಕ್ಯಾಮೆರಾ ಡ್ಯುಯಲ್-ಕರ್ವ್ಡ್ ವಿನ್ಯಾಸದಲ್ಲಿ ಬರುತ್ತದೆ ಮತ್ತು ಮುಖ್ಯ ಲೆನ್ಸ್ 48MP ಆಗಿದೆ. ಇದರಲ್ಲಿ ನೀವು 128GB ಸ್ಟೋರೇಜ್ ಸೌಲಭ್ಯವನ್ನು ಪಡೆಯುತ್ತೀರಿ ಮತ್ತು ಇದರ ಬ್ಯಾಟರಿ 5000mAh ಆಗಿದೆ. ನೀವು ಇದನ್ನು ಫ್ಲಿಪ್‌ಕಾರ್ಟ್‌ನಿಂದ 18,990 ರೂ.ಗೆ ಖರೀದಿಸಬಹುದು.

4 /5

  iQOO 3: 128GB ಸ್ಟೋರೇಜ್ ಹೊಂದಿರುವ ಈ ಫೋನಿನಲ್ಲಿ, ನೀವು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಪಡೆಯುತ್ತೀರಿ. ಇದರಲ್ಲಿ ಮುಖ್ಯ ಸೆನ್ಸರ್ 48MP ಆಗಿದೆ. 6.44-ಇಂಚಿನ ಫುಲ್ HD + ಡಿಸ್ಪ್ಲೇಯೊಂದಿಗೆ, ನೀವು 16MP ಫ್ರಂಟ್ ಕ್ಯಾಮೆರಾ, 4440mAh ಬ್ಯಾಟರಿ ಮತ್ತು 55W ಸೂಪರ್ ಫ್ಲ್ಯಾಶ್ ಚಾರ್ಜಿಂಗ್ ಅನ್ನು ಸಹ ಪಡೆಯುತ್ತೀರಿ. ಫ್ಲಿಪ್ ಕಾರ್ಟ್ ನಲ್ಲಿ ಇದರ ಬೆಲೆ 34,990 ರೂ. ಇದೆ.  

5 /5

realme GT 5G: ಇದು 6.43 ಇಂಚಿನ ಪೂರ್ಣ ಎಚ್‌ಡಿ + ಡಿಸ್‌ಪ್ಲೇಯೊಂದಿಗೆ ಬರಲಿದ್ದು, ಈ ಫೋನಿನ ವಿಶೇಷತೆಯೆಂದರೆ ಅದು ಬೇಗನೆ ಬಿಸಿಯಾಗುವುದಿಲ್ಲ. ಇದರಲ್ಲಿ ನೀವು 64MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 4500mAH ಬ್ಯಾಟರಿಯನ್ನು ಸಹ ಪಡೆಯುತ್ತೀರಿ. ನೀವು ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ 37,999 ರೂ.ಗೆ ಖರೀದಿಸಬಹುದು.