Top 5 heighest Paid South actress: ದಕ್ಷಿಣ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆ ಸಮಂತಾ ಅಲ್ಲ, ಈ ತಾರೆಯರು

Top 5 heighest Paid South actress: ದಕ್ಷಿಣ ಚಿತ್ರರಂಗದ ಬೆಡಗಿಯರ ಅದ್ಭುತ ಪ್ರದರ್ಶನ ಯಾರಿಗೆ ತಾನೇ ತಿಳಿದಿಲ್ಲ. ಆದರೆ, ಓಟಿಟಿ ವೇದಿಕೆಗಳ ಮೂಲಕ ಅವರು ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ದಕ್ಷಿಣ ಚಿತ್ರರಂಗದ ತಾರೆಯರ ಅದ್ಭುತ ಪ್ರದರ್ಶನ ಕೇವಲ ದಕ್ಷಿಣ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. 

Top 5 heighest Paid South actress: ದಕ್ಷಿಣ ಚಿತ್ರರಂಗದ ಬೆಡಗಿಯರ ಅದ್ಭುತ ಪ್ರದರ್ಶನ ಯಾರಿಗೆ ತಾನೇ ತಿಳಿದಿಲ್ಲ. ಆದರೆ, ಓಟಿಟಿ ವೇದಿಕೆಗಳ ಮೂಲಕ ಅವರು ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ದಕ್ಷಿಣ ಚಿತ್ರರಂಗದ ತಾರೆಯರ ಅದ್ಭುತ ಪ್ರದರ್ಶನ ಕೇವಲ ದಕ್ಷಿಣ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಹೀಗಾಗಿ ಇಂದು ನಾವು ನಮಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣದ ತಾರೆಯರ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಆದರೆ, ಈ ಪಟ್ಟಿಯಲ್ಲಿ ಸಮಂತಾ ಮೊದಲಲ್ಲ ಎಂಬುದು ಕೇಳಿದರೆ ನಿಮಗೂ ಕೂಡ ಆಶ್ಚರ್ಯವಾಗುತ್ತದೆ. ಬನ್ನಿ ಯಾರು ನಂಬರ್ ಒನ್ ಹಾಗೂ ಸಮಂತಾ ಸ್ಥಾನ ಎಷ್ಟನೆಯದ್ದು ತಿಳಿದುಕೊಳ್ಳೋಣ,
 

ಇದನ್ನೂ ಓದಿ-ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಈ 5 ಪ್ರಮುಖ ವಿಷಯಗಳು ತಿಳಿದಿರಲಿ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನಯನ್ ತಾರಾ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ಎರಡು ದಶಕಗಳು ಕಳೆದಿವೆ. 37 ವರ್ಷ ವಯಸ್ಸಿನ ಈ ಸುಂದರ ಹಾಗೂ ಪ್ರತಿಭಾನ್ವಿತ ಬೆಡಗಿ ತೆಲುಗು, ತಮಿಳು ಹಾಗೂ ಮಲಯಾಳಿ ಚಿತ್ರಗಳಲ್ಲಿ ನಟಿಸುತ್ತಾಳೆ. ಮುಂದಿನ ವರ್ಷ ಶಾರುಕ್ ಖಾನ್ ಅಭಿನಯದ 'ಜವಾನ್' ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾಳೆ. ಮಾಧ್ಯಮ ವರದಿಗಳ ಪ್ರಕಾರ ನಯನತಾರಾ ತನ್ನ ಪ್ರತಿಯೊಂದು ಚಿತ್ರಕ್ಕೂ ಸುಮಾರು 5 ರಿಂದ 10 ಕೋಟಿ ಸಂಭಾವನೆ ಪಡೆಯುತ್ತಾಳೆ ಎನ್ನಲಾಗುತ್ತದೆ. ಇಟೈಮ್ಸ್ ಪ್ರಕಾರ, ನಯನ್ ತಾರಾ ದಕ್ಷಿಣ ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾಳೆ.

2 /5

ಪೂಜಾ ಹೆಗ್ಡೆ 2012ರಲ್ಲಿ ತೆರೆಕಂಡ ತಮಿಳು ಚಿತ್ರ 'ಮುಗಾಮುಡಿ' ತನ್ನ ಚಿತ್ರರಂಗದ ಕರಿಯರ್ ಆರಂಭಿಸಿದ್ದಾರೆ. ತನ್ನ ಪದಾರ್ಪಣೆಯ ಬಳಿಕ ನಿರಂತರವಾಗಿ ಪೂಜಾ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ. ಶೀಘ್ರದಲ್ಲಿಯೇ ಪೂಜಾ 'ಸರ್ಕಸ್' ಹಾಗೂ 'ಕಭಿ ಈದ್ ಕಭಿ ದಿವಾಲಿ' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಮಾಧ್ಯಮ ವರದಿಗಳ ಪ್ರಕಾರ ಪೂಜಾ ಪ್ರತಿಯೊಂದು ಚಿತ್ರಕ್ಕೆ 3.5ರಿಂದ 5 ಕೋಟಿ ಸಂಭಾವನೆ ಪಡೆಯುತ್ತಾಳೆ ಎನ್ನಲಾಗುತ್ತದೆ. 

3 /5

ಇತ್ತೀಚಿನ ದಿನಗಳಲ್ಲಿ ಸಮಂತಾ ರುತ್ ಪ್ರಭು ಕೇವಲ ಒಂದು ಸುಂದರ ಮುಖ ಮಾತ್ರವಲ್ಲದೆ ಒಂದು ಬಲಿಷ್ಠ ಪಾತ್ರದ ರೂಪದಲ್ಲಿ ಹೊರಹೊಮ್ಮಿದ್ದಾಳೆ. ಕೇವಲ ತಮಿಳು ಮತ್ತು ತೆಲುಗು ಚಿತ್ರದಲ್ಲಿ ಮಾತ್ರ ನಟಿಸದೆ ಈ ನಟಿ ಹಿಂದಿ ವೆಬ್ ಸೀರೀಸ್ 'ದಿ ಫ್ಯಾಮಿಲಿ ಮ್ಯಾನ್'ನಲ್ಲಿನ ತನ್ನ ನಟನಾ ಸಾಮರ್ಥ್ಯದ ಮೂಲಕ ಅಭಿಮಾನಿಗಳ ಹೃದಯದ ಮೇಲೆ ಅಧಿಪತ್ಯ ಸಾಧಿಸಿದ್ದಾಳೆ. ಮಾಧ್ಯಮ ವರದಿಗಳ ಪ್ರಕಾರ, ಸಮಂತಾ ತನ್ನ ಒಂದು ಚಿತ್ರಕ್ಕೆ 3.5-4 ಕೋಟಿ ರೂ.ಸಂಭಾವನೆ ಪಡೆಯುತ್ತಾಳೆ ಎನ್ನಲಾಗಿದೆ.

4 /5

ತಮನ್ನಾ ಭಾಟಿಯಾ ಹೆಸರು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮೇಲಿನ ಎಲ್ಲಾ ನಟಿಗಳಿಗೆ ಹೋಲಿಸಿದರೆ, ತಮನ್ನಾ ಅವರಿಗಿಂತಲೂ ಮೊದಲೇ ಬಾಲಿವುಡ್ ಪ್ರವೆಶಿಸಿದ್ದಾಳೆ. ಆದರೆ, ಆಕೆಯ ಚಿತ್ರಗಳು ಯಾವುದೇ ರೀತಿಯ ವಿಶೇಷ ಪ್ರತರ್ಶನ ತೋರಲು ವಿಫಲವಾಗಿವೆ. ಅದಾದ ಬಳಿಕ ತಮನ್ನಾ ತಮಿಳು ಹಾಗೂ ತೆಲುಗು ಚಿತ್ರಗಳ ಮೇಲೆ ತನ್ನ ಗಮನ ಕೆಂದ್ರೀಕರಿಸಿದ್ದಾಳೆ ಮತ್ತು 'ಬಾಹುಬಲಿ'ಯಂತಹ ಐತಿಹಾಸಿಕ ಫ್ರಂಚೈಸಿಯ ಭಾಗವಾಗಿದ್ದಳು. ಮಾಧ್ಯಮ ವರದಿಗಳ ಪ್ರಕಾರ ತಮನ್ನಾ ತನ್ನ ಒಂದು ಚಿತ್ರಕ್ಕೆ ಸುಮಾರು 2.5 ರಿಂದ 5 ಕೋಟಿ ಸಂಭಾವನೆ ಪಡೆಯುತ್ತಾಳೆ.

5 /5

ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ನಟಿಯ ಹೆಸರು ನಮ್ಮ ಕನ್ನಡತಿ ರಷ್ಮಿಕಾ ಮಂದಣ್ಣ. ಪುಷ್ಪಾ ಚಿತ್ರದ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿದ ರಶ್ಮಿಕಾ, ನಂತರದ ದಿನಗಳಲ್ಲಿ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾಳೆ. ರಷ್ಮಿಕಾ ಕನ್ನಡ, ತೆಲುಗು ಸೇರಿದಂತೆ ತಮಿಳು ಚಿತ್ರಗಳಲ್ಲಿ ನಟಿಸಿದ್ದಾಳೆ. ಶೀಘ್ರದಲ್ಲಿಯೇ ಸಿದ್ಧಾರ್ಥ್ ಮಲ್ಹೊತ್ರಾ ಅಭಿನಯದ ಬಾಲಿವುಡ್ ಚಿತ್ರ 'ಮಿಶನ್ ಮಜ್ನು' ಮೂಲಕ ಬಾಲಿವುಡ್ ಗೆ ಕಾಲಿಡುತ್ತಿದ್ದಾಳೆ. ಮಾಧ್ಯಮ ವರದಿಗಳ ಪ್ರಕಾರ ರಷ್ಮಿಕಾ ತನ್ನ ಒಂದು ಚಿತ್ರಕ್ಕೆ ಸುಮಾರು 3 ಕೋಟಿ.ರೂ ಸಂಭಾವನೆ ಪಡೆಯುತ್ತಾಳೆ ಎನ್ನಲಾಗಿದೆ.