Smart TV: 15 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್ ಟಿವಿಗಳು

ನಿಮಗೆ ಇಷ್ಟವಾಗುವ ಅನೇಕ ಫೀಚರ್ಸ್ ಹೊಂದಿರುವ ಸ್ಮಾರ್ಟ್ ಟಿವಿಗಳು 15 ಸಾವಿರ ರೂ.ಗಿಂತಲೂ  ಕಡಿಮೆ ಮೊತ್ತದಲ್ಲಿ ಲಭ್ಯವಿವೆ.

ಇಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಟಿವಿ ಇದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಟಿವಿ ನೋಡಲು ಇಷ್ಟಪಡುತ್ತಾರೆ. ಇಂದಿನ ಒಟಿಟಿ ಯುಗದಲ್ಲಿ ನಿಮ್ಮ ಮನೆಯಲ್ಲಿ ಸ್ಮಾರ್ಟ್ ಟಿವಿ(Smart TV) ಇದ್ದರೆ ಉತ್ತಮ. ಈ ಟಿವಿಗಳಲ್ಲಿ ನೀವು ಅನೇಕ ಸೌಲಭ್ಯಗಳನ್ನು ಪಡೆಯಬಹುದು. ತಾಂತ್ರಿಕ ಪ್ರಗತಿಯು ಟಿವಿಗಳನ್ನು ಮತ್ತಷ್ಟು ‘ಸ್ಮಾರ್ಟ್' ಮಾಡಿದೆ. ಯೂಟ್ಯೂಬ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಇತ್ಯಾದಿ ಫೋನ್ ಅಥವಾ ಲ್ಯಾಪ್‌ಟಾಪ್/ಡೆಸ್ಕ್‌ ಟಾಪ್‌ನಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಪ್ಲಾಟ್‌ಫಾರ್ಮ್‌ಗಳು ಈಗ ಟಿವಿಯಲ್ಲಿ ಪ್ಲೇ ಮಾಡಬಹುದು. 15 ಸಾವಿರ ರೂ. ಬಜೆಟ್ ಬೆಲೆಗೆ ಖರೀದಿಸಬಹುದಾದ ಟಾಪ್ ಸ್ಮಾರ್ಟ್ ಟಿವಿಗಳ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನೀವು ಈ 32 ಇಂಚಿನ iFFALCON ಕಂಪನಿಯ ಸ್ಮಾರ್ಟ್ ಟಿವಿಯನ್ನು ಕೇವಲ 14,999 ರೂ.ಗೆ ಖರೀದಿಸಬಹುದು. 1.5 GB RAM ಮತ್ತು 8 GB ಸ್ಟೋರೇಜ್ ನೊಂದಿಗೆ, ನೀವು ಡಾಲ್ಬಿ ಆಡಿಯೋ, HDR 10 ಮತ್ತು ಗೂಗಲ್ ಅಸಿಸ್ಟೆಂಟ್‌ಗೆ ಬೆಂಬಲ ಪಡೆಯುತ್ತೀರಿ. ನೀವು ಈ ಟಿವಿಯಲ್ಲಿ Voot, G5, Jio Apps ಮತ್ತು Eros Now ನಂತಹ ಹಲವು ಆಪ್‌ಗಳನ್ನು ಬಳಸಬಹುದು.

2 /5

ಈ ಸ್ಮಾರ್ಟ್ ಟಿವಿ ಕೂಡ 32 ಇಂಚು ಇದ್ದು, ಇದರ ಬೆಲೆ 14,499 ರೂ. ಆಗಿದೆ. 1GB RAM ಮತ್ತು 8GB ಸ್ಟೋರೇಜ್ ಹೊಂದಿರುವ ಈ ಟಿವಿ 5 ಸಾವಿರಕ್ಕೂ ಹೆಚ್ಚು ಆಪ್‌ಗಳನ್ನು ಬೆಂಬಲಿಸುತ್ತದೆ. ಅಲ್ಲದೆ ಆಪ್‌ಗಳನ್ನು ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್‌ನ ಸೌಲಭ್ಯವನ್ನೂ ಒದಗಿಸುತ್ತದೆ.

3 /5

ನೀವು ಮೊಟೊರೊಲಾ ಕಂಪನಿಯ ಈ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಕೇವಲ 13,999 ರೂ. ಪಾವತಿಸಿ ಮನೆಗೆ ತೆಗೆದುಕೊಂಡು ಹೋಗಬಹುದು. ಕ್ವಾಡ್-ಕೋರ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ಈ ಟಿವಿಯಲ್ಲಿ ನೀವು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಡಿಯೊದಂತಹ ಪೂರ್ವ-ಸ್ಥಾಪಿತ ಅಪ್ಲಿಕೇಶನ್‌ಗಳನ್ನು ಪಡೆಯುತ್ತೀರಿ. ಈ ಟಿವಿ ನಿಮಗೆ Screen Casting ಮತ್ತು Smart View ನೊಂದಿಗೆ ಬರುತ್ತದೆ.

4 /5

ಕೇವಲ 13,990 ರೂ. ಬೆಲೆಯ ಈ ಸ್ಮಾರ್ಟ್ ಟಿವಿ 32 ಇಂಚಿನ ಸ್ಕ್ರೀನ್, ಆಪ್ ಗಳನ್ನು ಡೌನ್ ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ ಸೌಲಭ್ಯವನ್ನು ಮತ್ತು 5 ಸಾವಿರಕ್ಕೂ ಹೆಚ್ಚು ಆಪ್ ಗಳಿಗೆ ಬೆಂಬಲವನ್ನು ನೀಡುತ್ತದೆ.

5 /5

ಈ ಮೈಕ್ರೋಮ್ಯಾಕ್ಸ್ ಟಿವಿಯು 24 ಇಂಚಿನ ಡಿಸ್ ಪ್ಲೇ ಹೊಂದಿದ್ದು, 4GB RAM ಮತ್ತು 128GB ಸ್ಟೋರೇಜ್ ಹೊಂದಿದೆ. ಆಂಡ್ರಾಯ್ಡ್‌ ನಲ್ಲಿ ಚಾಲನೆಯಲ್ಲಿರುವ ಈ ಟಿವಿಯಲ್ಲಿ ನೀವು ಯೂಟ್ಯೂಬ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋಗಳಂತಹ ಆಪ್‌ಗಳನ್ನು ಬಳಸುವುದು ಮಾತ್ರವಲ್ಲ, ಕ್ಲೌಡ್ ಟಿವಿ ಆಪ್ ಸ್ಟೋರ್ ಸಹಾಯದಿಂದ ನಿಮಗೆ ಬೇಕಾದ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.