7000mAH ಬ್ಯಾಟರಿಯೊಂದಿಗೆ ಟಾಪ್ 3 ಸ್ಮಾರ್ಟ್‌ಫೋನ್‌: ಅದ್ಭುತ ವೈಶಿಷ್ಟ್ಯ, ಬೆಲೆಯೂ ಕಡಿಮೆ

ನಿಮ್ಮ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಉತ್ತಮ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಟಾಪ್ 3 ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿದೆ.

ಹೊಸ ಸ್ಮಾರ್ಟ್‌ಫೋನ್‌ ಖರೀದಿ ಮಾಡುವ ಮುನ್ನ ಪ್ರತಿಯೊಬ್ಬರೂ  ಕೇಳುವ ಪ್ರಶ್ನೆಯೆಂದರೆ ಬ್ಯಾಟರಿ ಎಷ್ಟು ಕಾಲ ಬರುತ್ತದೆ ಎಂದು. ಸ್ಮಾರ್ಟ್‌ಫೋನ್‌ಗಳಲ್ಲಿ ಸಾಮಾನ್ಯವಾಗಿ ಒಂದೇ ದಿನದಲ್ಲಿ ಬ್ಯಾಟರಿ ಖಾಲಿಯಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರು ಅತ್ಯುತ್ತಮ ಬ್ಯಾಟರಿ ಬ್ಯಾಕಪ್‌ ಹೊಂದಿರುವ ಫೋನ್ ಹುಡುಕುತ್ತಾರೆ. ಉತ್ತಮ ಫೋನ್ ಗಳಲ್ಲಿ ಬ್ಯಾಟರಿ ಚೆನ್ನಾಗಿ ಬಾಳಿಕೆ ಬರುತ್ತದೆ ಮತ್ತು ಪದೇ ಪದೇ ಚಾರ್ಜ್ ಮಾಡುವ ಅಗತ್ಯವಿಲ್ಲ. ಸ್ಯಾಮ್‌ಸಂಗ್ ಮತ್ತು ಟೆಕ್ನೊ ಬ್ರಾಂಡ್‌ಗಳು 7000mAH ಬ್ಯಾಟರಿಯೊಂದಿಗೆ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿವೆ. ಈ ಫೋನ್ ಗಳ ವೈಶಿಷ್ಟ್ಯಗಳು ತುಂಬಾ ಅದ್ಭುತವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

Samsung Galaxy F62 ಸ್ಮಾರ್ಟ್‌ಫೋನ್‌ 6.70 ಇಂಚಿನ ಡಿಸ್‌ಪ್ಲೇ ಹೊಂದಿದೆ. ಫೋನ್ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದನ್ನು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1000 ಜಿಬಿ ವರೆಗೆ ವಿಸ್ತರಿಸಬಹುದು. ಫೋನ್ 7000mAH ಬ್ಯಾಟರಿಯನ್ನು ಹೊಂದಿದೆ, ಇದು 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

2 /6

Samsung Galaxy F62 ಫೋನ್ ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ, ಪ್ರಾಥಮಿಕ ಕ್ಯಾಮೆರಾ 64 MP ಇದ್ದರೆ, 2ನೇಯ ಕ್ಯಾಮೆರಾ 12 MP ಇದೆ. ಇತರ 2 ಕ್ಯಾಮೆರಾಗಳು 5 MP ಇವೆ. ಸೆಲ್ಫಿಗಾಗಿ 32MP ಕ್ಯಾಮೆರಾ ನೀಡಲಾಗಿದೆ. Samsung Galaxy F62ನ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಸ್ಮಾರ್ಟ್‌ಫೋನ್‌ ಬೆಲೆ 23,999 ರೂ. ಇದೆ.

3 /6

Samsung Galaxy M51 F62 ಸ್ಮಾರ್ಟ್‌ಫೋನ್‌ 6.70 ಇಂಚಿನ ಡಿಸ್‌ಪ್ಲೇ ಹೊಂದಿದೆ. ಫೋನ್ ಆಂಡ್ರಾಯ್ಡ್ 10 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದನ್ನು ಮೈಕ್ರೊ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದು. ಫೋನ್ 7000mAH ಬ್ಯಾಟರಿಯನ್ನು ಹೊಂದಿದೆ.

4 /6

Samsung Galaxy M51 F62 ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ. ಪ್ರಾಥಮಿಕ ಕ್ಯಾಮೆರಾ 64 MP, 2ನೇಯದು 12 MP ಮತ್ತು ಇತರ 2 ಕ್ಯಾಮೆರಾಗಳು 5 MP ಇವೆ. ಈ ಸ್ಮಾರ್ಟ್‌ಫೋನ್‌ ನ 6 GB RAM ಮತ್ತು 128 GB ಇಂಟರ್ನಲ್ ಸ್ಟೋರೇಜ್ ರೂಪಾಂತರದ ಬೆಲೆ 19,999 ರೂ. ಇದೆ.

5 /6

Tecno Pova 2 ಸ್ಮಾರ್ಟ್‌ಫೋನ್‌ 6.90 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಆಂಡ್ರಾಯ್ಡ್ 11 ಆಧಾರಿತ HiOS ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಬ್ಯಾಟರಿ ಬ್ಯಾಕಪ್‌ಗೆ ಬಂದರೆ, ಇದು 7000mAH ಬ್ಯಾಟರಿಯನ್ನು ಹೊಂದಿದೆ.

6 /6

Tecno Pova 2 ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ. ಪ್ರಾಥಮಿಕ ಕ್ಯಾಮೆರಾ 48MP, 2 ಕ್ಯಾಮೆರಾಗಳು 2MP ಮತ್ತು 4ನೇಯದು AI ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್ ಹೊಂದಿದೆ. Tecno Pova 2 ಸ್ಮಾರ್ಟ್‌ಫೋನ್‌ ನ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ರೂಪಾಂತರದ ಬೆಲೆ 10,999 ರೂ. ಇದೆ.