ಶಸ್ತ್ರ ಚಿಕಿತ್ಸೆ ಒಳಗಾದ ಗ್ಲಾಮರ್‌ ಬ್ಯೂಟಿ ಡಿಂಪಲ್..! 3 ತಿಂಗಳು ಬೆಡ್‌ ರೆಸ್ಟ್‌.. ಈಗ ಹೇಗಿದ್ದಾಳೆ ಸುಂದರಿ..?

Dimple Hayathi : ಟಾಲಿವುಡ್‌ನಲ್ಲಿ ಕ್ರೇಜಿ ಹೀರೋಯಿನ್ ಆಗಿ ಹೊರಹೊಮ್ಮುತ್ತಿರುವ ಗ್ಲಾಮರ್‌ ಬ್ಯೂಟಿ ಡಿಂಪಲ್ ಹಯಾತಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.. ಈ ಕುರಿತು ನಟಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಚಾರ ತಿಳಿದ ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ.. ಅಸಲಿಗೆ ಏನಾಯ್ತು..? ಬನ್ನಿ ನೋಡೋಣ..
 

1 /7

ಡಿಂಪಲ್ ಹಯಾತಿ ಕಳೆದ ವರ್ಷ ʼರಾಮ ಬಾಣʼ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇದರಲ್ಲಿ ಗೋಪಿಚಂದ್ ನಾಯಕನಾಗಿ ನಟಿಸಿದ್ದಾರೆ. ಆದರೆ ಈ ಸಿನಿಮಾದ ನಂತರ ಡಿಂಪಲ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ  

2 /7

ಈ ವರ್ಷ ಅವರ ಒಂದು ಸಿನಿಮಾ ಕೂಡ ಬಿಡುಗಡೆಯಾಗಿಲ್ಲ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸಿನಿಮಾದ ಅಪ್‌ಡೇಟ್‌ಗಳನ್ನು ನೀಡುತ್ತಿಲ್ಲ..  

3 /7

ಇತ್ತೀಚೆಗಷ್ಟೇ ಈ ಚೆಲುವೆ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ತಿಳಿದು ಬಂದಿದೆ. ಈ ಕಾರಣದಿಂದಾಗಿ, 30 ದಿನಗಳ ವರೆಗೆ ಬೆಡ್ ರೆಸ್ಟ್ ಮಾಡಬೇಕಾಗಿ ಬಂತು.  

4 /7

ಈ ಕುರಿತು ಪೋಸ್ಟ್‌ ಮಾಡಿರುವ ನಟಿ, ಹಾರ್ಮೋನ್ ಅಸಮತೋಲನದಿಂದ ನಾನು ಸಾಕಷ್ಟು ತೂಕವನ್ನು ಹೆಚ್ಚಿಸಿಕೊಂಡೆ, ಅದು ತನ್ನ ಆರೋಗ್ಯವನ್ನು ಸಂಪೂರ್ಣವಾಗಿ ಹಾಳುಮಾಡಿದೆ ಎಂದು ತಿಳಿಸಿದ್ದಾರೆ.  

5 /7

ಡಿಂಪಲ್ ಭುಜ ನೋವು, ಕಾಲು ನೋವು, ಸೊಂಟ ನೋವು ಮತ್ತಿತರ ಸಮಸ್ಯೆಗಳನ್ನು ಎದುರಿಸಿದ್ದರು ಎನ್ನಲಾಗಿದೆ.  

6 /7

2017 ರಲ್ಲಿ ತೆರೆಕಂಡ ಗಲ್ಫ್‌ ಚಿತ್ರದ ಮೂಲಕ ಡಿಂಪಲ್‌ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.  

7 /7

ಡಿಂಪಲ್ 2019 ರಲ್ಲಿ ಗದ್ದಲಕೊಂಡ ಗಣೇಶ್ ಚಿತ್ರದ ಜರ್ರಾ ಜರ್ರಾ ಹಾಡಿನ ಮೂಲಕ ಖ್ಯಾತಿಯನ್ನು ಗಳಿಸಿದರು.