ತನ್ನ ನೀಚ ರಾಶಿಯಲ್ಲಿ ಗ್ರಹಗಳ ರಾಜಕುಮಾರನ ಭ್ರಮಣೆ ಆರಂಭ, 5 ರಾಶಿಗಳ ಜನರಿಗೆ ಅಪಾರ ಯಶಸ್ಸು-ಧನ ಪ್ರಾಪ್ತಿಯ ಯೋಗ!

Jupiter-Mercury Conjunction 2023: ಇಂದು ಅಂದರೆ ಮಾರ್ಚ್ 16, 2023 ರಂದು ಬೆಳಗ್ಗೆ 10 ಗಂಟೆ 33 ನಿಮಿಷಕ್ಕೆ ಗ್ರಹಗಳ ರಾಜಕುಮಾರ ಬುಧ ತನ್ನ ನೀಚ ರಾಶಿಯಾಗಿರುವ ಮೀನ ರಾಶಿಗೆ ಪ್ರವೇಶಿಸಿದ್ದಾನೆ. ಆದರೆ, ಈಗಾಗಲೇ ದೇವಗುರು ಬೃಹಸ್ಪತಿ ಅಲ್ಲಿಯೇ ಇರುವ ಕಾರಣ. ನೀಚರಾಶಿಯಲ್ಲಿ ಬುಧ, ಗುರುವಿನೊಂದಿಗೆ ಮೈತ್ರಿ ಭಾವದಲ್ಲಿ ಇರಲಿದ್ದಾನೆ. ಈ ಕಾರಣದಿಂದ ಆತ ಅಲ್ಲಿ ಪ್ರಭಾವಹೀನ ಸ್ಥಿತಿಯಲ್ಲಿರಲಿದ್ದಾನೆ. ಇನ್ನೊಂದೆಡೆ ಗುರು ಹಾಗೂ ಬುದ್ಧನ ನಡುವೆ ಸ್ನೇಹ ಭಾವದ ಸಂಬಂಧ ಇರುವ ಕಾರಣ ಈ ಇಬ್ನ್ಬರ ಮೈತ್ರಿಯಿಂದ 5 ರಾಶಿಗಳ ಜನರಿಗೆ ಅಪಾರ ಧನಲಾಭ ಹಾಗೂ ಯಶಸ್ಸು ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
 

Mercury-Jupiter Conjunction 2023: ಮಾರ್ಚ್ 16, 2023 ರ ಬೆಳಗ್ಗೆ 10 ಗಂಟೆ 33 ನಿಮಿಷಕ್ಕೆ ಬುಧ ತನ್ನ ನೀಚ ರಾಶಿಯಾಗಿರುವ ಮೀನ ರಾಶಿಗೆ ಪ್ರವೇಶಿಸಿದ್ದಾನೆ. ಮೀನ ರಾಶಿಯಲ್ಲಿ ದೇವಗುರು ಬೃಹಸ್ಪತಿ ಈಗಾಗಲೇ ವಿರಾಜಮಾನನಾಗಿದ್ದಾನೆ. ಹೀಗಾಗಿ ಮೀನ ರಾಶಿಯಲ್ಲಿ ಬುಧ-ಗುರುವಿನ ಮೈತ್ರಿ ನೆರವೇರಲಿದೆ. ಬೃಹಸ್ಪತಿಯನ್ನು ಜ್ಞಾನ ಹಾಗೂ ಬುದ್ಧಿಮತ್ತೆಯ ಕಾರಕ ಎಂದು ಭಾವಿಸಲಾಗುತ್ತದೆ. ಈ ಎರಡೂ ಗ್ರಹಗಳ ಯುತಿ ಜಾತಕದವರಿಗೆ ಶಕ್ತಿ, ಸಮಾಜದಲ್ಲಿ ಸ್ಥಾನಮಾನ ಕರುಣಿಸಲಿದೆ. ಬುದ್ಧನನ್ನು ಸೂರ್ಯನಿಗೆ ಅತ್ಯಂತ ಹತ್ತಿರದ ಗ್ರಹವಾಗಿದೆ. ಈತ ನವಗ್ರಹಗಳಿಗೆ ರಾಜಕುಮಾರ ಕೂಡ ಹೌದು, ಬುಧ ಬುದ್ಧಿ, ವಾಣಿ, ವ್ಯಾಪಾರ ಇತ್ಯಾದಿಗಳಿಗೆ ಕಾರಕ ಎಂದೂ ಕೂಡ ಹೇಳಲಾಗುತ್ತದೆ.

 

ಇದನ್ನೂ ಓದಿ-Aditya Mandal Daan: ಕುಂಡಲಿಯಲ್ಲಿ ರಾಜಯೋಗ ಸೃಷ್ಟಿಸುತ್ತವೆ ಈ ದಾನ, ಸೂರ್ಯನ ಹಾಗೆ ಹೊಳೆಯುತ್ತದೆ ಅದೃಷ್ಟ!

 


ಜೋತಿಷ್ಯ ಶಾಸ್ತ್ರದ ಪ್ರಕಾರ ಬುದ್ಧನ ಶುಭ ಸ್ಥಿತಿ ದೃಢಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಬುದ್ಧಿಯನ್ನು ತೀಕ್ಷ್ಣಗೊಳಿಸುತ್ತದೆ. ಇನ್ನೊಂದೆಡೆ ಯಾರ ಜಾತಕದಲ್ಲಿ ಬುಧ ಅಶುಭ ಸ್ಥಿತಿಯಲ್ಲಿ ಅಥವಾ ದುರ್ಬಲನಾಗಿರುತ್ತಾನೋ ಅವರ ನಿರ್ಣಯ ತೆಗೆದುಕೊಳ್ಳುವ ಶಕ್ತಿ ಕಡಿಮೆಯಾಗಿರುತ್ತದೆ ಎಂದು ಭಾವಿಸಲಾಗುತ್ತದೆ. ಮೀನ ರಾಶಿಯಲ್ಲಿ ನಿರ್ಮಾಣಗೊಂಡಿರುವ ಈ ಮೈತ್ರಿ ಯಾವ ರಾಶಿಗಳ ಜನರಿಗೆ ಲಾಭಕಾರಿಯಾಗಿದೆ ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-ಮಾರ್ಚ್ 22 ರಂದು ಮೀನ ರಾಶಿಯಲ್ಲಿ ಗುರು-ಚಂದ್ರರ ಮೈತ್ರಿ, ಹೊಸ ವರ್ಷದಲ್ಲಿ 3 ರಾಶಿಗಳ ಜನರ ಮೇಲೆ ಭಾರಿ ಧನವೃಷ್ಟಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ವೃಷಭ ರಾಶಿ- ಬುಧ ವೃಷಭ ರಾಶಿಯ ಏಕಾದಶ ಭಾವದಲ್ಲಿ ಗೋಚರಿಸಿದ್ದಾನೆ. ಏಕಾದಶ ಭಾವದಲ್ಲಿ ಈಗಾಗಲೇ ಬೃಹಸ್ಪತಿ ವಿರಾಜಮಾನನಾಗಿದ್ದಾನೆ. ಪರಿಣಾಮವಶಾತ್ ವೃಷಭ ರಾಶಿಯ ಜಾತಕದವರಿಗೆ ಧನಯೋಗ ನಿರ್ಮಾಣಗೊಂಡಿದೆ. ಈ ಮೈತ್ರಿಯಿಂದ ನಿಮಗೆ ಸಾಕಷ್ಟು ಧನಲಾಭವಾಗುವ ಸಾಧ್ಯತೆ ಇದೆ. ವ್ಯಾಪಾರ-ವೃತ್ತಿಜೀವನದಲ್ಲಿ ಸಾಕಷ್ಟು ಲಾಭ ಪ್ರಾಪ್ತಿಯಾಗಲಿದೆ. ಹೊಸ ನೌಕರಿಯಲ್ಲಿ ಪ್ರಮೋಷನ್ ಸಿಗುವ ಎಲ್ಲಾ ಸಾಧ್ಯತೆಗಳು ನಿರ್ಮಾಣಗೊಳ್ಳುತ್ತಿವೆ. ಉನ್ನತ ಶಿಕ್ಷಣದಲ್ಲಿ ಅನುಕೂಲಕರ ಫಲಿತಾಂಶಗಳು ಪ್ರಾಪ್ತಿಯಾಗಲಿವೆ.  

2 /5

2. ಮಿಥುನ ರಾಶಿ: ಮಿಥುನ ರಾಶಿಯ ಜಾತಕದವರ ವೃತ್ತಿ ಜೀವನದ ದೃಷ್ಟಿಕೋನದಿಂದ ಈ ಮೈತ್ರಿ ಅತ್ಯಂತ ಲಾಭಕಾರಿ ಮೈತ್ರಿಯಾಗಿದೆ. ಈ ಅವಧಿಯಲ್ಲಿ ನಿಮಗೆ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಶಿಕ್ಷಣ ಹಾಗೂ ಬ್ಯಾಂಕಿಂಗ್ ಕ್ಷೇತ್ರದವರಿಗೆ ಈ ಗೋಚರ ಸಾಕಷ್ಟು ಫಲಪ್ರದಾಯಿ ಸಾಬೀತಾಗಲಿದೆ. ನಿಮ್ಮ ಜೀವನದಲ್ಲಿ ಭೌತಿಕ ಸುಖಗಳು ಹೆಚ್ಚಾಗಲಿವೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ಕಾರ್ಯಕ್ಷೇತ್ರದಲ್ಲಿ ಉನ್ನತಿ ಪ್ರಾಪ್ತಿಯಾಗಲಿದೆ. ಸಹೋದ್ಯೋಗಿಗಳಿಗೆ ಬಡ್ತಿ ಭಾಗ್ಯ ಪ್ರಾಪ್ತಿಯಾಗಲಿದೆ.  

3 /5

3. ಕನ್ಯಾ ರಾಶಿ: ಬುಧ ಹಾಗೂ ಬೃಹಸ್ಪತಿಯ ಮೈತ್ರಿಯಿಂದ ಕನ್ಯಾ ರಾಶಿಯ ಜಾತಕದವರಿಗೆ ಭಾರಿ ಆರ್ಥಿಕ ಲಾಭ ಉಂಟಾಗಲಿದೆ. ಬಿಸ್ನೆಸ್ ನಲ್ಲಿ ಹೊಸ ಅವಕಾಶಗಳು ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಕೆಲ ಪ್ರಭಾವಶಾಲಿ ವ್ಯಕ್ತಿಗಳ ಜೊತೆಗೆ ನಿಮ್ಮ ಒಡನಾಟ ಹೆಚ್ಚಾಗಲಿದೆ. ಅವರ ಸಹಕಾರ ನಿಮ್ಮ ವ್ಯಾಪಾರ ವಿಸ್ತರಣೆಗೆ ದಾರಿಮಾಡಿಕೊಡಲಿದೆ ಮತ್ತು ನೀವು ಅದರಲ್ಲಿ ಯಶಸ್ಸನ್ನು ಕೂಡ ಕಾಣುವಿರಿ. ಈ ಅವಧಿಯಲ್ಲಿ ನಿಮಗೆ ನಿಮ್ಮ ಬಾಳಸಂಗಾತಿಯ ಸಂಪೂರ್ಣ ಸಾಥ್ ಸಿಗಲಿದೆ. ನಿಮಗೆ ನಿಮ್ಮ ಕುಟುಂಬ ಬೆಂಬಲ ಕೂಡ ಪ್ರಾಪ್ತಿಯಾಗಲಿದೆ.  

4 /5

4. ಧನು ರಾಶಿ: ಬುಧ-ಬೃಹಸ್ಪತಿಯ ಈ ಮೈತ್ರಿ ನಿಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಧನು ರಾಶಿಯ ಜಾತಕದವರಿಗೆ ಇದರಿಂದ ಸಾಕಷ್ಟು ಸುಖ, ಯಶಸ್ಸು ಹಾಗೂ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ವೈವಾಹಿಕ ಜೀವನ ಆನಂದಮಯವಾಗಿರಲಿದೆ. ಈ ಗೋಚರದಿಂದ ನೀವು ಆಸ್ತಿ-ಪಾಸ್ತಿ ಖರೀದಿಸಬಹುದು. ವಿವಿಧ ಕ್ಷೇತ್ರಗಳಲ್ಲಿ ನಿಮಗೆ ನಿಮ್ಮ ತಾಯಿಯ ಬೆಂಬಲ ಸಿಗಲಿದೆ.  

5 /5

5. ಮೀನ ರಾಶಿ: ಬುದ್ಧನ ಮೀನ ರಾಶಿ ಗೋಚರ ಮತ್ತು ಬೃಹಸ್ಪತಿ ಈಗಾಗಲೇ ಮೀನ ರಾಶಿಯಲ್ಲಿರುವುದು ಮೀನ ರಾಶಿಯ ಜಾತಕದವರಿಗೆ ಅತ್ಯಂತ ಲಾಭಕಾರಿ ಸಾಬೀತಾಗಲಿದೆ. ಈ ಅವಧಿಯಲ್ಲಿ ಮೀನ ರಾಶಿಯ ಜನರು ತಮ್ಮ ಕಾರ್ಯದಲ್ಲಿ ವ್ಯಸ್ತರಾಗಿರಲಿದ್ದಾರೆ. ಇದರಿಂದ ಅಪಾರ ಆರ್ಥಿಕ ಲಾಭ ಸಿಗಲಿದೆ. ಹೊಸ ಜವಾಬ್ದಾರಿಗಳು ಹಾಗೂ ಸ್ಥಾನಮಾನ ಪ್ರಾಪ್ತಿಯ ಯೋಗ ನಿರ್ಮಾಣಗೊಂಡಿದೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಕೆಲಸದ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ ಮತ್ತು ಇದರಿಂದ ನಿಮಗೆ ಲಾಭ ಕೂಡ ಸಿಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)