ಬೆಂಗಳೂರು : ಶನಿ ದೇವರು ನಮ್ಮ ಕಾರ್ಯಗಳಿಗೆ ಅನುಗುಣವಾಗಿ ನಮಗೆ ಪ್ರತಿಫಲ ನೀಡುವ ನ್ಯಾಯದ ದೇವರು. ಶನಿದೆಸೆಯಲ್ಲಿ ಎದುರಾಗುವ ಅಡೆತಡೆಗಳನ್ನು ತೊಡೆದುಹಾಕಲು ಜನರು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲಾ ಗ್ರಹಗಳಂತೆ ಶನಿ ಕೂಡಾ ತನ್ನ ರಾಶಿ ಮತ್ತು ನಕ್ಷತ್ರವನ್ನು ಬದಲಾಯಿಸುತ್ತಾನೆ. ಶನಿಯ ರಾಶಿ ಮತ್ತು ನಕ್ಷತ್ರ ಬದಲಾವಣೆಯ ಪರಿಣಾಮ ಎಲ್ಲಾರ ಜಾತಕದ ಮೇಲೆ ಬೀರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮಾರ್ಚ್ 15 ರಂದು ಶನಿದೇವನು ಶತಭಿಷ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಅಕ್ಟೋಬರ್ 17 ರವರೆಗೆ ಶನಿದೇವರು ಶತಭಿಷ ನಕ್ಷತ್ರದಲ್ಲಿಯೇ ಇರಲಿದ್ದಾನೆ. ಶನಿ ಸಂಕ್ರಮಣದ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಇರುತ್ತದೆ. ಅದರಲ್ಲಿಯೂ 5 ರಾಶಿಯವರ ಜೀವನದಲ್ಲಿ ಕಷ್ಟಗಳೆಲ್ಲಾ ಕಳೆದು ಬೆಳಕಾಗುತ್ತದೆ.
ಅಕ್ಟೋಬರ್ ವರೆಗಿನ ಅವಧಿಯು ಮೇಷ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಮೇಷ ರಾಶಿಯವರು ಈ ಅವಧಿಯಲ್ಲಿ ವ್ಯಾಪಾರವನ್ನು ಪ್ರಾರಂಭಿಸಬಹುದು. ಅಥವಾ ಹಿಸ ಕೆಲಸವನ್ನು ಆರಂಭಿಸಬಹುದು. ಈ ಸಮಯವು ವ್ಯಾಪಾರಿಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಉದ್ಯೋಗದಲ್ಲಿರುವವರಿಗೆ ಗೌರವ ಹೊಸ ಸ್ಥಾನಮಾನ ಸಿಗಲಿದೆ.
ಶನಿಯ ಶತಭಿಷ ನಕ್ಷತ್ರ ಪ್ರವೇಶವು ಮಿಥುನ ರಾಶಿಯವರಿಗೆ ಅನೇಕ ಲಾಭಗಳನ್ನು ತರಲಿದೆ. ದೀರ್ಘ ಕಾಲದಿಂದ ಪೂರ್ತಿಯಾಗದೆ ಬಾಕಿಯಿರುವ ಕೆಲಸಗಳು ಈ ಅವಧಿಯಲ್ಲಿ ಕೈ ಹಿಡಿಯಲಿವೆ. ವಿದೇಶ ಪ್ರಯಾಣದ ಯೋಗವಿದೆ. ಇಲ್ಲಿಯವರೆಗೆ ಅನುಭವಿಸಿದ ಕಷ್ಟಗಳು ಕಳೆದು ನೆಮ್ಮದಿಯ ಜೀವನ ಸಿಗುತ್ತದೆ.
ಅಕ್ಟೋಬರ್ ವರೆಗೆ, ಶನಿಯ ಸಂಕ್ರಮಣವು ಸಿಂಹ ರಾಶಿಯವರಿಗೆ ವ್ಯವಹಾರದಲ್ಲಿ ಯಶಸ್ಸನ್ನು ನೀಡುತ್ತದೆ. ಉದ್ಯೋಗದಲ್ಲಿರವಾಗಿರುತ್ತದೆ. ನೀವು ಮಾಡುವ ಕೆಲಸಗಳಿಗೆ ಉನ್ನತ ಅಧಿಕಾರಿಗಳಿಂದ ಸಹಕಾರ ಸಿಗುವುದು.
ಅಕ್ಟೋಬರ್ 17 ರವರೆಗೆ ತುಲಾ ರಾಶಿಯವರ ಮೇಲೆ ಶನಿದೇವರ ಕೃಪೆ ಬಹಳ ಇರುತ್ತದೆ. ಹೀಗಾಗಿ ಮಾಡುವ ಎಲ್ಲಾ ಕೆಲಸಗಲ್ಲಿಯೂ ಜಯ ಸಿಗುವುದು. ಆದಾಯ ಹೆಚ್ಚಾಗಲಿದೆ. ವ್ಯಾಪಾರಿಗಳಿಗೆ ಲಾಭವಾಗಲಿದೆ. ಜೀವನದಲ್ಲಿ ಇಲ್ಲಿವರೆಗೆ ಅನುಭವಿಸಿದ ಕಷ್ಟ ನಷ್ಟಗಳು ಲಾಭವಾಗಿ ಬದಲಾಗುತ್ತದೆ. ಸಮಸ್ಯೆ ಮುಕ್ತ ಜೀವನ ನಿಮ್ಮದಾಗುವುದು.
ಶತಭಿಷ ನಕ್ಷತ್ರಕ್ಕೆ ಶನಿದೇವನ ಪ್ರವೇಶವು ಧನು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಹಳೆಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುವುದು. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ.