ನವೆಂಬರ್ 4ರವರೆಗೆ ಈ ರಾಶಿಯವರಿಗೆ ಕುಬೇರ ಯೋಗ ! ಸಂಪತ್ತಿನ ಆಗಮನಕ್ಕೆ ತಡೆಯೇ ಇರುವುದಿಲ್ಲ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಈ ಕಾರಣದಿಂದಾಗಿ, ರಾಶಿ ಜಾತಕದಲ್ಲಿ ಅವನ ಪ್ರಭಾವ ಕೂಡಾ ಹೆಚ್ಚು.  

ಬೆಂಗಳೂರು : ಎಲ್ಲಾ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ರಾಶಿ ಬದಲಾವಣೆ, ಸ್ಥಾನ ಬದಲಾವಣೆ, ನಡೆಯಲ್ಲಿನ ಬದಲಾವಣೆ, ಅಸ್ತ, ಉದಯಗಳಂತಹ ಗ್ರಹಗಳ ಪ್ರಭಾವ ಎಲ್ಲಾ  ರಾಶಿಯವರ ಜೀವನದ ಮೇಲೂ ಕಂಡು ಬರುತ್ತದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಶನಿದೇವ ಪ್ರಸ್ತುತ ವಕ್ರ ಸ್ಥಿತಿಯಲ್ಲಿದ್ದಾರೆ. ನವೆಂಬರ್ 4 ರವರೆಗೆ ಶನಿ ಮಹಾತ್ಮನ ನಡೆ ಹೀಗೆಯೇ ಇರಲಿದೆ. ಶನಿಯ ವಕ್ರ ನಡೆ ಕೆಲವು ರಾಶಿಯವರ ಜೀವನದ ಮೇಲೆ ಅಪಾರ ಪರಿಣಾಮವನ್ನು ಬೀರುತ್ತದೆ. ಶನಿದೇವನ ಕೃಪೆಯಿಂದ ಇವರು ಜೀವನದಲ್ಲಿ ಹಣ, ಕೀರ್ತಿ ಮತ್ತು ಉತ್ತಮ ಪ್ರಗತಿಯನ್ನು ಕಾಣುವರು.   

2 /6

ಸಿಂಹ ರಾಶಿ : ಸಿಂಹ ರಾಶಿಯವರು ಆರ್ಥಿಕವಾಗಿ ಮುನ್ನಡೆ ಸಾಧಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ. ವ್ಯವಹಾರದಲ್ಲಿಯೂ ಉತ್ತಮ ಯಶಸ್ಸು ಸಿಗುತ್ತದೆ.  ಪತಿ ಪತ್ನಿ ಸಂಬಂಧ ಮತ್ತಷ್ಟು ಗಾಢವಾಗುವುದು. ಮನೆ ಮನದಲ್ಲಿ ಸಂತೋಷ ಹೆಚ್ಚುತ್ತದೆ.  

3 /6

ತುಲಾ ರಾಶಿ : ಶನಿದೆವನ ವಕ್ರ ನಡೆ ತುಲಾ ರಾಶಿಯವರಿಗೆ ತುಂಬಾ ಅನುಕೂಲಕರ. ಮಕ್ಕಳ ಮೂಲಕ ಈ ರಾಶಿಯವರಿಗೆ ಶುಭ ಸುದ್ದಿ ಸಿಗಲಿದೆ. ಕುಟುಂಬದಲ್ಲಿ ಸಂತೋಷವನ್ನು ವೃದ್ದಿಸುತ್ತದೆ. ಈ ಅವಧಿಯಲ್ಲಿ ವಾಹನ, ಆಸ್ತಿ ಖರೀದಿ ಯೋಗವಿರುತ್ತದೆ. 

4 /6

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ಕೆಲಸದಲ್ಲಿ ಬಡ್ತಿ ಪಡೆಯಬಹುದು ಅಥವಾ ಕೆಲಸದ ಸ್ಥಳ ಬದಲಾವಣೆಯಾಗಬಹುದು. ಇದರಿಂದ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಮನಸ್ಸಿನ ಸಂತೋಷ ಹೆಚ್ಚಾಗುತ್ತದೆ. 

5 /6

ಧನು ರಾಶಿ : ಕೆಲಸದ ಸ್ಥಳದಲ್ಲಿ ಯಶಸ್ಸು ಸಿಗಬಹುದು. ನಿಮ್ಮ ಶ್ರಮದ ಮೂಲಕ  ಪ್ರತಿಷ್ಠೆ ಹೆಚ್ಚುತ್ತದೆ. ಶನಿಯ ವಕ್ರ ನಡೆ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕೆಲಸದಲ್ಲಿ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ  ಸಿಗುತ್ತದೆ. 

6 /6

ಮಕರ ರಾಶಿ : ಕೆಲಸದಲ್ಲಿ ಯಶಸ್ಸಿ ಶಿಖರ ಏರುವುದು ಸಾಧ್ಯವಾಗುತ್ತದೆ. ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಬಡ್ತಿ ಮೂಲಕ ವೇತನ ಹೆಚ್ಚಳಕ್ಕೆ ಅವಕಾಶಗಳನ್ನು ನೀಡುತ್ತದೆ.   ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)