ನೋಡಲು 25ರಂತೆ ಕಾಣುವ 52 ವರ್ಷದ ಈ ಸುಂದರಿ ಯಾರು ಗೊತ್ತಾ..?

ಲಿಜಾರಿಗೆ ಸುಮಾರು 30 ವರ್ಷ ವಯಸ್ಸಾಗಿರಬೇಕೆಂದು ಅನೇಕರು ಭಾವಿಸುತ್ತಾರೆ, ಆದರೆ ಅವರ ನಿಜವಾದ ವಯಸ್ಸಿನ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.

ಬ್ರಿಟನ್ ನಲ್ಲಿ ನೆಲೆಸಿರುವ ಲಿಜಾ ಲಾರೆ(Liza Laure)ಯನ್ನು ನೋಡಿದರೆ ನೀವು ಅವರ ಸರಿಯಾದ ವಯಸ್ಸು ಊಹಿಸುವುದು ಕಷ್ಟ. ಸಾಮಾನ್ಯವಾಗಿ ಜನರು ಅವರನ್ನು ನೋಡಿ ಗೊಂದಲಕ್ಕೊಳಗಾಗುತ್ತಾರೆ. ಲಿಜಾರಿಗೆ ಸುಮಾರು 30 ವರ್ಷ ವಯಸ್ಸಾಗಿರಬೇಕೆಂದು ಅನೇಕರು ಭಾವಿಸುತ್ತಾರೆ. ಆದರೆ ಅವರ ನಿಜವಾದ ವಯಸ್ಸಿನ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಲಿಜಾ ತಮ್ಮ ವಯಸ್ಸು ಮತ್ತು ವ್ಯಕ್ತಿತ್ವದ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಅನೇಕ ಯುವಕರು ಅವರ ನಿಜವಾದ ವಯಸ್ಸಿನ ಬಗ್ಗೆ ತಿಳಿದು ಬಾಯ್ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಹಾಗಾದರೆ ಲಿಜಾರ ಸೌಂದರ್ಯದ ಗುಟ್ಟೇನು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

‘ದಿ ಸನ್’ ವರದಿಯ ಪ್ರಕಾರ, ಇಂಗ್ಲೆಂಡಿನ ಎಸೆಕ್ಸ್‌ ನಲ್ಲಿ ವಾಸಿಸುವ ಲಿಜಾ ಲಾರೆಗೆ ಈಗ 52 ವರ್ಷ. ಆದರೆ ಯಾರೂ ಅವರಿಗೆ ಇಷ್ಟೊಂದು ವಯಸ್ಸಾಗಿದೆ ಎಂದರೆ ನಂಬುವುದಿಲ್ಲ. ವಿಶೇಷವೆಂದರೆ ಲಿಜಾ ಇದುವರೆಗೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿಲ್ಲ. ‘ನಾನು ಯಾವುದೇ ರೀತಿಯ ಆಂಟಿ-ರಿಂಕಲ್ ಇಂಜೆಕ್ಷನ್‌(Anti-Wrinkle Injections)ಗಳನ್ನು ಪಡೆದುಕೊಂಡಿಲ್ಲ. ನನ್ನ ಚರ್ಮದ ಆರೈಕೆಯ ಬಗ್ಗೆ ಇತರ ಮಹಿಳೆಯರಿಗಿಂತ ನಾನು ತುಸು ಹೆಚ್ಚು ಕಾಳಜಿ ವಹಿಸುತ್ತೇನೆ’ ಅಂತಾ ಹೇಳಿಕೊಂಡಿದ್ದಾರೆ.  

2 /4

ಲಿಜಾ ಲಾರೆ ಹೇಳುವ ಪ್ರಕಾರ, ‘ಕೆಲವೊಮ್ಮೆ ಯುವಕರು ನನ್ನ ಬಳಿಗೆ ಬಂದು ಫ್ಲರ್ಟಿಂಗ್ ಮಾಡಲು ಪ್ರಾರಂಭಿಸುತ್ತಾರೆ. ಆಗ ನಾನು ನಿಮ್ಮ ತಾಯಿಯ ವಯಸ್ಸಿನವಳು, ನನ್ನ ಜೊತೆ ಹೀಗೆ ಮಾಡಬೇಡಿ ಅಂದರೆ ಅವರು ನಂಬುವುದಿಲ್ಲ. ವಯಸ್ಸಿನ ವಿಚಾರವಾಗಿ ನನಗೆ ಇಂದು ಸಿಗುವಷ್ಟು ಅಭಿನಂದನೆಗಳು ಎಂದಿಗೂ ಸಿಕ್ಕಿರಲಿಲ್ಲ. ಇದು ಖಂಡಿತ ನನಗೆ ಹೆಚ್ಚು ಖುಷಿ ನೀಡಿದೆ’ ಅಂತಾ ಹೇಳಿದ್ದಾರೆ.

3 /4

ತನ್ನ ಹೊಳೆಯುವ ಮತ್ತು ತಾರುಣ್ಯಪೂರ್ಣ ಚರ್ಮದ ರಹಸ್ಯದ ಬಗ್ಗೆ ಲಿಜಾ ಹೇಳಿಕೊಂಡಿದ್ದಾರೆ. ಅವರು ಕಾಲಕಾಲಕ್ಕೆ ಮೇಕ್ಅಪ್ ಮಾಡಿಕೊಳ್ಳುತ್ತಾರಂತೆ. ಆದರೆ ಅವರು ದುಬಾರಿ ಮೇಕಪ್ ಉತ್ಪನ್ನಗಳನ್ನು ಇಷ್ಟಪಡುವುದಿಲ್ಲವಂತೆ. ಹೆಚ್ಚಾಗಿ ನೈಸರ್ಗಿಕ ಉತ್ಪನ್ನಗಳನ್ನು ಬಳಸುವ ಲಿಜಾ ತ್ವಚೆಯ ಆರೈಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರಂತೆ.    

4 /4

ಲಿಜಾ ಅವರು ನೌಸರ್ಗಿಕ ವಸ್ತುಗಳನ್ನು ಬಳಸಿ ತಮ್ಮ ತ್ವಚೆಯ ಆರೈಕೆ ಮಾಡಿಕೊಳ್ಳುತ್ತಾರೆ. ‘ನಾನು ಈ ತಂತ್ರಗಳನ್ನು ಎಲ್ಲಿಂದ ಕಲಿತ್ತಿದ್ದೇನೆಂಬುದು ನನಗೆ ಗೊತ್ತಿಲ್ಲ, ಆದರೆ ಇದು ನನಗೆ ತುಂಬಾ ಸಹಾಯ ಮಾಡಿದೆ. ಯಾವಾಗಲೂ ನಾನು ‘ಯಂಗ್ ಆ್ಯಂಡ್ ಎನರ್ಜಿಟಿಕ್’ ಆಗಿ ಇರಬೇಕೆಂದು ಬಯಸುತ್ತೇನೆ’ ಅಂತಾ ಹೇಳಿದ್ದಾರೆ. ಲಿಜಾ 2016ರಲ್ಲಿ ತಮ್ಮ ಮೊದಲ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಅದರ ನಂತರವೂ ಅವರು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಎಲ್ಲಿ ಹೋದರೂ ಜನರು ನನ್ನ ಸೌಂದರ್ಯದ ಬಗ್ಗೆಯೇ ಹೊಗಳುತ್ತಾರೆ. ನಿಮಗೆ ವಯಸ್ಸೇ ಆಗಿಲ್ಲ, ನೀವಿನ್ನೂ 30 ಅಥವಾ 32ರ ಯುವತಿಯಂತೆ ಕಾಣುತ್ತೀರಿ ಅಂತಾ ಹೊಗಳುತ್ತಾರೆ. ಇದು ನನಗೆ ತುಂಬಾ ಖುಷಿ ನೀಡಿದೆ ಅಂತಾ ಹೇಳಿಕೊಂಡಿದ್ದಾರೆ.