ಇದು ವಿಶ್ವದ ಅತ್ಯಂತ ದುಬಾರಿ ಮೀನು: ಇದರ ಬೆಲೆಗೆ ನೀವು ಬಂಗಲೆ, ಕಾರನ್ನೇ ಖರೀದಿಸಬಹುದು..!

ಪ್ರಪಂಚದಲ್ಲಿ ಕೇವಲ ಒಂದೇ ಒಂದು ಮೀನಿಗಾಗಿ ಲಕ್ಷ, ಕೋಟಿ ರೂ. ಪಾವತಿಸಲು ಸಿದ್ಧವಿರುವ ಜನರಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ.

ನೀವು ಸಾಮಾನ್ಯವಾಗಿ ಎರಡು ವಿಧದ ಮೀನುಗಳನ್ನು ನೋಡಿರುತ್ತೀರಿ. ಒಂದು ಜನರು ಸೇವಿಸುವ ಮೀನು ಆದರೆ, ಇನ್ನೊಂದು ಅಕ್ವೇರಿಯಂನಲ್ಲಿ ಇರಿಸುವ ಮೀನು. ನೀವು ಮೀನಿನ ಆಹಾರವನ್ನು ಇಷ್ಟಪಡುತ್ತೀರೋ ಅಥವಾ ಅವುಗಳನ್ನು ಅಕ್ವೇರಿಯಂನಲ್ಲಿ ಇರಿಸಿಕೊಳ್ಳುತ್ತಿರೋ. ಇದಕ್ಕೆ ನೀವು ಗರಿಷ್ಠ 5-10 ಸಾವಿರ ರೂ. ಖರ್ಚು ಮಾಡಬೇಕು. ಆದರೆ ಪ್ರಪಂಚದಲ್ಲಿ ಕೇವಲ ಒಂದೇ ಒಂದು ಮೀನಿಗಾಗಿ ಲಕ್ಷ, ಕೋಟಿ ರೂ. ಪಾವತಿಸಲು ಸಿದ್ಧವಿರುವ ಜನರಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ವಿಶೇಷ ಮೀನಿನ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಡ್ರ್ಯಾಗನ್ ಮೀನು ವಿಶ್ವದ ಅತ್ಯಂತ ದುಬಾರಿ ಮೀನು ಎನಿಸಿಕೊಂಡಿದೆ. ಇದನ್ನು ಏಷ್ಯನ್ ಆರೋವಾನಾ(Asian Arowana) ಎಂದೂ ಕರೆಯುತ್ತಾರೆ. ಈ ಮೀನಿನ ಬೆಲೆ 2 ರಿಂದ 3 ಕೋಟಿ ರೂ. ಆಗುತ್ತದಂತೆ.

2 /5

ಅನೇಕರು ಈ ಮೀನನ್ನು ಖರೀದಿಸಲು ಮಾತ್ರವಲ್ಲ ಅದನ್ನು ರಕ್ಷಿಸಲು ಕೂಡ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಇದರ ಮಾಲೀಕರು ಅತ್ಯಂತ ಜತನದಿಂದ ಈ ಮೀನು ರಕ್ಷಣೆ ಮಾಡುತ್ತಾರಂತೆ. ಇದಕ್ಕಾಗಿಯೇ ವಿಶೇಷ ಭದ್ರತಾ ವ್ಯವಸ್ಥೆ ಮಾಡಿ ಕಾವಲುಗಾರರನ್ನೂ ಕೂಡ ನೇಮಿಸಲಾಗುತ್ತದಂತೆ.

3 /5

ಈ ಮೀನಿನ ಬೆಲೆ ಕೇಳಿದರೆ ನೀವು ಹೌಹಾರುವುದು ಗ್ಯಾರೆಂಟಿ. ಈ ಮೀನಿನ ಬೆಲೆಯಲ್ಲಿ ನೀವು ಐಷಾರಾಮಿ ಕಾರು, ಬಂಗಲೆ ಮತ್ತು ಹಲವು ಕೆಜಿಗಳಷ್ಟು ಚಿನ್ನವನ್ನೇ ಖರೀದಿ ಮಾಡಬಹುದು. ಆದರೂ ಈ ಮೀನಿಗೆ ಕೋಟಿ ಕೋಟಿ ಬೆಲೆ ಏಕೆ ಇದೆ ಎಂದು ಎಲ್ಲರೂ ಕೇಳಬಹುದು. ಏಶಿಯನ್ ಅರೋವಾನಾ ಮೀನು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಇದನ್ನು ಚೀನಾದಲ್ಲಿ ಸ್ಥಿತಿಗತಿಯ ಸಂಕೇತವಾಗಿಯೂ ಪರಿಗಣಿಸಲಾಗಿದೆ.

4 /5

ಒಂದು ವರದಿಯ ಪ್ರಕಾರ ಚೀನಾದ ಜನರು ಈ ಮೀನಿಗೆ ದುಬಾರಿ ಬೆಲೆ ನೀಡಲು ಸಿದ್ಧರಾಗಿದ್ದಾರೆ. ಈ ಮೀನಿನ ಮೇಲೆ ‘The Dragon Behind the Glass’ ಎಂಬ ಪುಸ್ತಕವನ್ನೂ ಬರೆಯಲಾಗಿದೆ. ಈ ಪುಸ್ತಕದಲ್ಲಿಯೇ ಈ ಮೀನಿನ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಲಾಗಿದೆ.

5 /5

ಅರೋವಾನಾ ಒಂದು ಸಾಮಾನ್ಯ ಸಾಕು ಮೀನು ಅಲ್ಲ. ಇದು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ ಮತ್ತು ಇದು 3 ಅಡಿ ಉದ್ದವಿರುತ್ತದೆ. ಇದರ ಬೆಲೆ ತುಂಬಾ ಹೆಚ್ಚಾಗಿದ್ದು, ಇದರಿಂದಾಗಿ ಈ ಮೀನಿನ ವಿಷಯದಲ್ಲಿ ಅಪರಾಧವೂ ಹೆಚ್ಚಾಗಿದೆ.