ವಿರಾಟ್ ಕೊಹ್ಲಿಯ ಕಾರು ಮಾರಾಟದ ಸುದ್ದಿಯೂ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.
ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಚರ್ಚೆಯಲ್ಲಿದ್ದಾರೆ. ಮೊದಲಿಗೆ, ವಿರಾಟ್ ಕೊಹ್ಲಿ ಟಿ 20 ವಿಶ್ವಕಪ್ ನಾಯಕತ್ವ ತೊರೆಯುವುದಾಗಿ ಘೋಷಿಸಿದರು. ಇದಾದ ಎರಡು ದಿನಗಳ ನಂತರ, ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ನಾಯಕತ್ವ ಸ್ಥಾನದಿಂದಲೂ ಕೆಳಗಿಳಿಯುವ ಬಗ್ಗೆ ಘೋಷಿಸಿದ್ದಾರೆ. ಈ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಮುಂದಿನ ವರ್ಷದಿಂದ ಕೊಹ್ಲಿ, ಆರ್ ಸಿಬಿ ತಂಡದ ಕೇವಲ ಆಟಗಾರನಾಗಿ ಮುಂದುವರೆಯಲಿದ್ದಾರೆ. ಈ ಮಧ್ಯೆ, ವಿರಾಟ್ ಕೊಹ್ಲಿಯ ಕಾರು ಮಾರಾಟದ ಸುದ್ದಿಯೂ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಭಾರತದ ನಾಯಕ ವಿರಾಟ್ ಕೊಹ್ಲಿಯ ಲಂಬೋರ್ಗಿನಿ ಕಾರನ್ನು ರಾಯಲ್ ಡ್ರೈವ್ ಎಂಬ ಕಂಪನಿ ಮಾರಾಟ ಮಾಡುತ್ತಿದೆ. ಈ ಕಂಪನಿಯು ಐಷಾರಾಮಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತದೆ. ವಿರಾಟ್ ಕೊಹ್ಲಿಯ ಈ ಕಾರನ್ನು ರಾಯಲ್ ಡ್ರೈವ್ ಈ ವರ್ಷದ ಜನವರಿಯಲ್ಲಿ ಕೋಲ್ಕತ್ತಾದ ಕಾರು ವ್ಯಾಪಾರಿಯಿಂದ ಖರೀದಿಸಿತು. ಈಗ ಈ ಕಾರು ಮಾರಾಟಕ್ಕಿರುವ ಬಗ್ಗೆ ಕಂಪನಿ ತನ್ನ ವೆಬ್ಸೈಟ್ನಲ್ಲಿ ಜಾಹೀರಾತು ನೀಡಿದೆ. (ಫೋಟೋ - ಟ್ವಿಟರ್)
ಈ ಕಾರಿನ ಬೆಲೆ ಪ್ರಸ್ತುತ 1.35 ಕೋಟಿ ರೂ. ಈ ಕಾರು ಕೇವಲ 4 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಮೀ ವೇಗವನ್ನು ಹಿಡಿಯುತ್ತದೆ. ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಕೊಹ್ಲಿ 2015 ರಲ್ಲಿ ಈ ಕಾರನ್ನು ಖರೀದಿಸಿದ್ದರು. ಆದರೆ ಈ ಕಾರನ್ನು ದೀರ್ಘಕಾಲ ಬಳಸಲಾಗಲಿಲ್ಲ. ದೀಗ ಕಾರನ್ನು ಮಾರಾಟಕ್ಕಿಟ್ಟಿದ್ದು, ಅಭಿಮಾನಿಗಳಿಗೆ ಅದನ್ನು ಖರೀದಿಸಲು ಉತ್ತಮ ಅವಕಾಶವಿದೆ. (ಫೋಟೋ - ರಾಯಲ್ ಡ್ರೈವ್)
ಈ ಲಂಬೋರ್ಗಿನಿ ಕಾರು ಇದುವರೆಗೆ ಕೇವಲ 10 ಸಾವಿರ ಕಿಲೋಮೀಟರ್ ಓಡಿದೆ. ಇದು 2013 ರ ಮಾದರಿ. ಎಲೆಕ್ಟ್ರಾನಿಕ್ ಲಿಮಿಟರ್ನ ವೇಗ 324 ಕಿಮೀ/ಗಂ. ಮಾಧ್ಯಮ ವರದಿಗಳ ಪ್ರಕಾರ, ಕೊಹ್ಲಿ ಪ್ರಸ್ತುತ ಹಲವು ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ಕೊಹ್ಲಿ ಆಡಿ ಆರ್ 8 ಕಾರನ್ನು ಹೊಂದಿದ್ದಾರೆ. ಇದರ ಬೆಲೆ ಸುಮಾರು 2.70 ಕೋಟಿ ರೂ. ಇದಲ್ಲದೇ, ಅವರು BMW X6, ಲ್ಯಾಂಡ್ ರೋವರ್, ಆಡಿ Q 74.2 ಮತ್ತು ಆಡಿ S6 ಸೇರಿದಂತೆ ಹಲವು ವಾಹನಗಳನ್ನು ಹೊಂದಿದ್ದಾರೆ. (ಫೋಟೋ - ರಾಯಲ್ ಡ್ರೈವ್)
ವಿರಾಟ್ ಕೊಹ್ಲಿ ಈ ದಿನಗಳಲ್ಲಿ ಐಪಿಎಲ್ ಪಂದ್ಯಗಳನ್ನು ಆಡುತ್ತಿದ್ದಾರೆ. ಕೊಹ್ಲಿ ಇತ್ತೀಚೆಗೆ ಆರ್ಸಿಬಿಯ ನಾಯಕತ್ವವನ್ನು ತೊರೆಯಲು ನಿರ್ಧರಿಸಿದ್ದಾರೆ. ಮುಂದಿನ ಸೀಜನ್ ನಿಂದ ಕೊಹ್ಲಿ ತಂಡದ ನಾಯಕನಾಗಿರುವುದಿಲ್ಲ. ಇಲ್ಲಿಯವರೆಗೆ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ, ಆರ್ಸಿಬಿ ಒಟ್ಟು 132 ಪಂದ್ಯಗಳನ್ನು ಆಡಿದೆ. ಅದರಲ್ಲಿ ತಂಡವು 60 ಪಂದ್ಯಗಳನ್ನು ಗೆದ್ದಿದೆ. ಆದರೆ ತಂಡವು 65 ರಲ್ಲಿ ಸೋತಿದೆ. ವಿರಾಟ್ ಅವರ ನಾಯಕತ್ವದಲ್ಲಿ ತಂಡವು ಒಂದೂ ಐಪಿಎಲ್ ಪ್ರಶಸ್ತಿಯನ್ನು ಪಡೆಯುವುದು ಸಾಧ್ಯವಾಗಲಿಲ್ಲ. (ಫೋಟೋ - ಪಿಟಿಐ)